ಕನ್ನಡ ಗಾದೆಮಾತು –  ಹೂವಿನ ಜೊತೆ ನಾರೂ ಸ್ವರ್ಗ ಸೇರಿತು.

ಕನ್ನಡ ಭಾಷೆಯಲ್ಲಿನ ಒಂದು ವಿಶಿಷ್ಟ ಗಾದೆಮಾತಿದು. ದೇವರಿಗೆ ಹೂವಿನ ಹಾರ ಹಾಕಲು ಹೂ ಕಟ್ಟುವಾಗ ಬಾಳೆಯ ಅಥವಾ ಇನ್ಯಾವುದಾದರೂ ಗಿಡದ ನಾರನ್ನು ಬಳಸುತ್ತಾರೆ ಅಲ್ಲವೇ? ದೇವರಿಗೆ ಅರ್ಪಿಸಿದ ಹೂವು ಸ್ವರ್ಗ ಸೇರುತ್ತದೆ, ಏಕೆಂದರೆ ದೇವರ ಆವಾಸಸ್ಥಾನ ಸ್ವರ್ಗ ತಾನೇ. ಇಲ್ಲಿ ಸ್ವಾರಸ್ಯದ ಸಂಗತಿ ಅಂದರೆ ಸುಂದರ, ಸುಗಂಧಮಯ ಹೂವು ಸ್ವರ್ಗ ಸೇರುವುದೇನೋ ಸರಿಯೇ ; ಅದರೆ ಅದನ್ನು ಕಟ್ಟಲು ಬಳಸಿದ ಅಂದಚಂದ ಇಲ್ಲದ ಸರಳ ಸಾಧಾರಣ ನಾರೂ ಸಹ ಅದರೊಂದಿಗೆ ಸ್ವರ್ಗ ಸೇರಿಬಿಡುತ್ತದಲ್ಲ!! ನಮ್ಮ ಜೀವನದಲ್ಲಿ ಯಾರಾದರೂ […]

ಕನ್ನಡಿಗರ ಮನೆಯಾಗಲಿ ಮೊದಲ ‘ಕನ್ನಡ ಶಾಲೆ’

ನಮ್ಮ ‘ಚಿತ್ರನಾಟ್ಯ’ – ಭರತನಾಟ್ಯ ತರಗತಿಗೆ ಪುಟಾಣಿ ಮಕ್ಕಳು ಬಂದು ನಾಟ್ಯ ಕಲಿಯಲು ಸೇರುತ್ತವೆ. ಐದು- ಐದೂವರೆ- ಆರು ವಯಸ್ಸಿನ ಎಳೆಯ ಮಕ್ಕಳಿಗೆ ನಾಟ್ಯ ಹೇಳಿಕೊಡುವಾಗ ಅವಕ್ಕೆ ಅರ್ಥ ಆಗುವ ಭಾಷೆಯಲ್ಲಿ ಹೇಳಿಕೊಡುವುದು ಮುಖ್ಯ‌. ಹೀಗಾಗಿ ಮಕ್ಕಳನ್ನು ಅವರ ಮನೆಯ ಭಾಷೆ/ತಾಯಿ ನುಡಿಯ ಬಗ್ಗೆ ನಾನು ಸಾಮಾನ್ಯವಾಗಿ ವಿಚಾರಿಸುತ್ತೇನೆ.  ಮೇಲೆ ಹೇಳಿದ ಹಿನ್ನಲೆಯಲ್ಲಿ ಒಮ್ಮೆ ಒಂದು ಮಗುವನ್ನು ” ನಿಮ್ಮ ಮನೆಯಲ್ಲಿ ಯಾವ ಭಾಷೆ ಮಾತಾಡ್ತೀರಮ್ಮ?” ಎಂದು ನಾನು ಕೇಳಿದಾಗ ಅದು ” ಇಂಗ್ಲಿಷ್ ” ಎಂದು […]

Electromagnetic spectrum 

ವಿದ್ಯುತ್ಕಾಂತೀಯ ವರ್ಣಪಟಲ – ಒಂದು‌ ವಿಸ್ತಾರವಾದ ಹರಹಿನಲ್ಲಿ ಕ್ರಮವಾಗಿ ಇರಿಸಿದ ವಿದ್ಯುತ್ಕಾಂತೀಯ ವಿಕಿರಣಗಳು‌. ಇದರಲ್ಲಿ ಅತಿನೇರಳೆ, ಅಧೋಕೆಂಪು, ಕಣ್ಣಿಗೆ ಕಾಣುವ ಅಲೆಗಳೇ ಮುಂತಾದ ವಿವಿಧ‌ ರೀತಿಯ ಅಲೆಗಳು ಇರುತ್ತವೆ.

Electromagnetic radiation or Electromagnetic wave

ವಿದ್ಯುತ್ ಕಾಂತೀಯ ವಿಕಿರಣ ಅಥವಾ ವಿದ್ಯುತ್ಕಾಂತೀಯ ಅಲೆ – ವಿದ್ಯುತ್ ಕ್ಷೇತ್ರ ಹಾಗೂ ಕಾಂತಕ್ಷೇತ್ರಗಳನ್ನು ಒಳಗೊಂಡಿರುವ ಮತ್ತು ಚಲಿಸಲು ಯಾವ ಮಾಧ್ಯಮವೂ ಬೇಕಿಲ್ಲದ ಅಲೆಗಳು. ಬೆಳಕು ಸಹ ಇಂತಹ ಒಂದು ಅಲೆಯಾಗಿದೆ.

Electromagnetic pump

ವಿದ್ಯುತ್ಕಾಂತೀಯ ರೇಚಕ ಯಂತ್ರ( ಪಂಪು) – ದ್ರವರೂಪೀ ಲೋಹಗಳನ್ನು ಕೊಳವೆಯ ಮೂಲಕ ಮೇಲೆತ್ತಲು ಬಳಸುವ ಒಂದು ಉಪಕರಣ.

Electromagnet

ವಿದ್ಯುದಯಸ್ಕಾಂತ ‌- ಮೃದು ಕಬ್ಬಿಣದ ಸುತ್ತ ಒಂದು ತಂತಿಯನ್ನು ಸುತ್ತುವ ಮೂಲಕ ರೂಪಿಸಿದಂತಹ ಒಂದು ಅಯಸ್ಕಾಂತ. ಎಲ್ಲಿಯವರೆಗೆ ತನ್ನಲ್ಲಿ ವಿದ್ಯುತ್ ಹರಿಯುತ್ತದೋ ಅಲ್ಲಿಯವರೆಗೆ ಅದು ಅಯಸ್ಕಾಂತದಂತೆ ವರ್ತಿಸುತ್ತದೆ.

Electrolyte 

ವಿದ್ಯುತ್ ವಿಭಜಕ – ತನ್ನೊಳಗಿನ ಪರಮಾಣುಗಳನ್ನು ಧನ ಹಾಗೂ ಋಣ ವಿದ್ಯುದಂಶದ ಅಣುಗಳಾಗಿ‌ ವಿಭಜಿತಗೊಳಿಸುವ ಮೂಲಕ ವಿದ್ಯುತ್ತನ್ನು ತನ್ನೊಳಗೆ ಹರಿಯಿಸುವ ವಸ್ತು

ಕನ್ನಡ ಗಾದೆಮಾತು – ಲೋಕ ತಿಳೀಬೇಕು ಲೆಕ್ಕ ಕಲೀಬೇಕು.‌

ಲೋಕಜ್ಞಾನ ಎಂಬುದು ಯಾವುದೇ ಶಾಲೆ-ಕಾಲೇಜುಗಳಿಗೆ ಹೋದ ತಕ್ಷಣ ನಮ್ಮ ತಲೆಯಲ್ಲಿ ಜನ್ಮಿಸಿಬಿಡುವಂತಹದ್ದಲ್ಲ. ಅದು ಈ ಲೋಕದಲ್ಲಿ ಜೀವಿಸಿ, ಕಷ್ಟ ಸುಖ ಅನುಭವಿಸಿ, ಜನ ಮತ್ತು ಜೀವನದ ನಡೆ, ರೀತಿಗಳನ್ನು ಗಮನಿಸಿಯೇ ಗಳಿಸಿಕೊಳ್ಳಬೇಕಾದ ಜ್ಞಾನ‌. ಹೀಗೆ ಲೋಕವನ್ನು ಅರಿಯುತ್ತಾ ಹೋಗುವಾಗ ಲೋಕದಲ್ಲಿ ಬಾಳುವುದಕ್ಕೆ ಲೆಕ್ಕ-ಲೆಕ್ಕಾಚಾರ ಕೂಡ ಎಷ್ಟು ಮುಖ್ಯವಾಗುತ್ತದೆ ಎಂಬ ಸತ್ಯ ನಮ್ಮ ಅರಿವಿಗೆ ಬರುತ್ತದೆ. ಲೋಕದ ಲೆಕ್ಕ-ಲೆಕ್ಕಾಚಾರ ಗೊತ್ತಿಲ್ಲದವರು ಸದಾ ಮೋಸ ಹೋಗುತ್ತಿರುತ್ತಾರೆ. ಲೋಕದಲ್ಲಿ, ಅದರಲ್ಲೂ ಮನೆಯಾಚೆಗಿನ ಹೊರಪ್ರಪಂಚದಲ್ಲಿ ಯಾವುದೂ ಉಚಿತವಾಗಿ ದೊರಕದು ಎಂಬ ಒಳಮರ್ಮ ನಮಗೆ  […]

‘ಸ್ವಲ್ಪ’…ಈ ಪದದ ಉಪಯೋಗ ಖಂಡಿತ ಅಲ್ಲ‌ ಸ್ವಲ್ಪ.

ಊಟ ಬಡಿಸುವಾಗ ‘ಸ್ವಲ್ಪ ಹಾಕಿ’, ‘ಇನ್ನು ಸ್ವಲ್ಪ ಬಡಿಸ್ಲಾ?’ ಎನ್ನುವ ಪದಪ್ರಯೋಗವನ್ನು ನಾವೆಲ್ಲ ಕೇಳಿರುತ್ತೇವೆ, ಸ್ವತಃ ಬಳಸಿಯೂ ಇರುತ್ತೇವೆ. ನಿಘಂಟಿನಲ್ಲಿ ಈ ಪದಕ್ಕೆ ನಾಮಪದವಾದಾಗ ‘ಅಲ್ಪವಾದುದು; ಕ್ಷುದ್ರವಾದುದು’, ಗುಣ ವಿಶೇಷಣವಾದಾಗ ‘ತುಸು, ಕೊಂಚ, ಅಲ್ಪ’ ಎಂಬ ಅರ್ಥಗಳಿವೆ. ಹೊಸದಾಗಿ ಕನ್ನಡ ಕಲಿಯುತ್ತಿರುವ  ಪರಭಾಷಿಕರನ್ನು ಯಾರಾದರೂ ‘ ನಿಮಗೆ ಕನ್ನಡ ಬರುತ್ತಾ?’ ಎಂದು ಕೇಳಿದರೆ ಅವರು ‘ಸ್ವಲ್ಪ ಸ್ವಲ್ಪ’ ಎನ್ನುವುದನ್ನು ಕೇಳಿರುತ್ತೇವೆ ಅಲ್ಲವೇ? ಮಾತುಕತೆಗಳಲ್ಲಿ ‘ಅಲ್ಪಸ್ವಲ್ಪ’ ಎಂಬ ಪದಪ್ರಯೋಗ ಕೂಡ ಇದೆ. “ಸಂಗೀತ ಅಲ್ಪಸ್ವಲ್ಪ ಕಲಿತಿದ್ದೇನೆ”, ದೆಹಲಿಯ ಬಗ್ಗೆ […]

Electrolysis 

ವಿದ್ಯುತ್ ವಿಭಜನೆ – ಒಂದು ವಿದ್ಯುತ್ವಾಹಕ ದ್ರಾವಕದ ಮೂಲಕ ವಿದ್ಯುತ್ತನ್ನು ಹರಿಸಿ ರಾಸಾಯನಿಕ ಕ್ರಿಯೆಯೊಂದನ್ನು ಅಲ್ಲಿ ತೊಡಗಿಸಿ, ಆ ಮೂಲಕ ಧನ ವಿದ್ಯುದಂಶ ಹಾಗೂ ಋಣ ವಿದ್ಯುದಂಶಗಳನ್ನು ಪ್ರತ್ಯೇಕಿಸುವ ಕ್ರಿಯೆ.

Page 89 of 140

Kannada Sethu. All rights reserved.