ಹಿಂದೆ, ನಮ್ಮ ಗ್ರಾಮೀಣ ಸಮಾಜಗಳಲ್ಲಿ ಕೃಷಿ ಹಾಗೂ ಪಶುಪಾಲನಾ ವೃತ್ತಿಯಲ್ಲಿ ತೊಡಗಿದ್ದ ಜನರು ತಮ್ಮ ಕುರಿಕೋಳಿ, ದನಕರುಗಳನ್ನು ಕಳ್ಳರು ಹಾಗೂ ವನ್ಯಪ್ರಾಣಿಗಳಿಂದ ರಕ್ಷಿಸಲು ಬೇಟೆನಾಯಿಗಳನ್ನು ಸಾಕುತ್ತಿದ್ದರು. ಜೊತೆಗೆ ಕಾಡಿನಲ್ಲಿ ತಾವು ಬೇಟೆಯಾಡಲು ಹೋದಾಗಲೂ ಈ ನಾಯಿಗಳನ್ನು ಬೇಟೆಯಲ್ಲಿ ಸಹಕರಿಸಲು ಕರೆದುಕೊಂಡು ಹೋಗುತ್ತಿದ್ದರು. ಅಂದರೆ ಈ ನಾಯಿಗಳ ಮೂಲ ಕೆಲಸ ಬೇಟೆಯೇ ಆಗಿತ್ತು ಅನ್ನುವುದನ್ನು ಹೆಚ್ಚು ವಿವರಿಸಬೇಕಿಲ್ಲ. ಆದರೆ, ಅಪ್ಪಿತಪ್ಪಿ ಆ ನಾಯಿ ಮನುಷ್ಯರ ಹಾಗೆ ಮಾತಾಡುವುದನ್ನು ಕಲಿಯಿತು ಎಂದಿಟ್ಟುಕೊಳ್ಳಿ. ಆಗ ಅದು ತನಗೆ ಮಾತು ಬರದಿದ್ದಾಗ ಶ್ರದ್ಧೆಯಿಂದ ಬೇಟೆಯಾಡುವಂತೆ ಈಗ ಬೇಟೆಯಾಡುತ್ತಿತ್ತೇನು? ಬಹುತೇಕ ಇಲ್ಲ. ‘ಇಂದು ತನಗೆ ಏಕೆ ಬೇಟೆಯಾಡಲು ಆಗುತ್ತಿಲ್ಲ?’ ಎಂಬುದಕ್ಕೆ ನೂರು ಕಾರಣಗಳನ್ನು ಕೊಡುತ್ತಾ, ತನ್ನಂತೆ ಸೋಮಾರಿಗಳಾಗಿದ್ದು ಬೇರೆಯವರೊಂದಿಗೆ ಕಾಡುಹರಟೆ ಹೊಡೆಯುತ್ತಾ ಸಮಯ ವ್ಯರ್ಥ ಮಾಡುವ ಆಯ್ಕೆಯೊಂದು ಅದಕ್ಕೆ ಇರುತ್ತಿತ್ತು ಅಲ್ಲವೆ? ಮನುಷ್ಯರಲ್ಲೂ ಹೀಗೆ ಮಾತನ್ನು ತಮ್ಮ ತಪ್ಪನ್ನು ಮುಚ್ಚಿಡಲು, ಆಲಸ್ಯತನವನ್ನು ಬಚ್ಚಿಡಲು ಆಯುಧದ ಹಾಗೆ, ಪರದೆಯ ಹಾಗೆ ಬಳಸುವರು ಇದ್ದಾರಲ್ಲವೆ? ಇದಕ್ಕಾಗಿಯೇ ನಮ್ಮ ಹಿರಿಯರು ಈ ಗಾದೆ ಮಾತನ್ನು ಮಾಡಿರಬೇಕು.
Kannada proverb – Maathu kalitha naayi bete aaduthye? ( Would a dog really hunt if he learnt to speak?)
It was a practice to nurture dogs in our rural societies so that those canines help to protect homes, property and live stock. People would even take dogs as able assistants when they went for hunting in nearby forests. Usually dogs are known for their trustworthyness and commitment. But let us say, a dog has learnt to speak languages just like human beings. Then would the dog hunt like before? Probably not. He would give hundred reasons or excuses as to explain why he can not hunt. We see many humans who use speech as their weapon or a screen to cover up their laziness or wrongdoings, isn’t it? May be this proverb is pointing towards these negative behaviors in people. All talk and no work renders a person (or dog) useless.
Like us!
Follow us!