ಕನ್ನಡ ಕನ್ನಡಿ

ವಾರಕ್ಕೆ ಐದು ಪದಗಳಂತೆ, ತಾಂತ್ರಿಕ/ವೈಜ್ಞಾನಿಕ ಕ್ಷೇತ್ರದ ಪದಗಳಿಗೆ ಕನ್ನಡ ಸಂವಾದಿ ಪದಗಳ ಪರಿಚಯ ಮಾಡುವ ಅಂಕಣವಿದು. ಕನ್ನಡದಲ್ಲಿ ಹೊಸ ಜ್ಞಾನ ನಿರ್ಮಾಣ ಆಗಬೇಕೆಂದರೆ ಅದರ ಪದಕೋಶವು ವಿಸ್ತಾರಗೊಳ್ಳಬೇಕು. ಈ ದಿಸೆಯಲಿನ್ಲ ಕಿರುಪ್ರಯತ್ನವೇ ಈ ಅಂಕಣ.

Anemometer

ವಾಯುವೇಗಮಾಪಕ : ಅನಿಲ ಅಥವಾ ಹರಿಯುವ ದ್ರವವಸ್ತುವಿನ ವೇಗವನ್ನು ಅಳೆಯಲು ಬಳಸುವ ಉಪಕರಣ

Anion

ಋಣವಿದ್ಯುದಣು : ಋಣ ವಿದ್ಯುದಂಶವನ್ನು ಹೊಂದಿರುವ ಪರಮಾಣು

Anisotropic 

ಅಸಮಗುಣಿ – ತನ್ನ ಬೇರೆ ಬೇರೆ ಭಾಗಗಳಲ್ಲಿ ಬೇರೆ ಬೇರೆ ಭೌತಿಕ ಗುಣಲಕ್ಷಣಗಳನ್ನು ಹೊಂದಿರುವ ಒಂದು ವಸ್ತು ಅಥವಾ ಮಾಧ್ಯಮ.

Annihilation 

ಶೂನ್ಯೀಕರಣ – ಒಂದು ಕಣ ಮತ್ತು ಅದರ ವಿರುದ್ಧ ಕಣಗಳು ಒಂದಕ್ಕೊಂದು ಸಂಘರ್ಷಿಸಿದಾಗ ಉಂಟಾಗುವ ಸಂಪೂರ್ಣ ವಿನಾಶ.

Anode

ಧನ ವಿದ್ಯುದ್ವಾರ – ಎಲೆಕ್ಟ್ರಾನುಗಳನ್ನು ಆಕರ್ಷಿಸುವ ಧನಾತ್ಮಕ ವಿದ್ಯುತ್ ತುದಿಗೋಡೆ.

Antimatter 

ಪ್ರತಿ ಕಣ – ಒಂದು ಕಣವು ಹೊಂದಿರುವಷ್ಟೇ ದ್ರವ್ಯರಾಶಿ ಮತ್ತು ಗಿರಕಿ(ಸ್ಪಿನ್)ಗಳನ್ನು ಹೊಂದಿದ್ದರೂ  ಅದಕ್ಕೆ ವಿರುದ್ಧವಾದ ವಿದ್ಯುದಂಶವನ್ನು ಹೊಂದಿರುವ ಕಣ.

Antinode

ಕಂಪನ ಶಿಖರ – ಸ್ಥಿರವಾದ ಅಲೆವಿನ್ಯಾಸವೊಂದರಲ್ಲಿ ಗರಿಷ್ಠ ಕಂಪನ ಹೊಂದಿರುವ ಒಂದು ಬಿಂದು.

Antiparallel

ವಿರುದ್ಧ ಸಮಾನಾಂತರಿ – ಎರಡು ಸಮಾನಾಂತರ ರೇಖೆಗಳು ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತಿರುವಂಥದ್ದು.

Aperture

ಕ್ಯಾಮೆರಾಕಿಂಡಿ – ಒಂದು ಛಾಯಾಗ್ರಾಹಕ ಯಂತ್ರ(ಕ್ಯಾಮೆರಾ)ದ ಮಸೂರದಲ್ಲಿ ಬೆಳಕನ್ನು ಒಳಗೆ ಬಿಟ್ಟುಕೊಳ್ಳುವ ಕಿಂಡಿ. ಎಷ್ಟು ಬೆಳಕು ಒಳಗೆ ಬರುತ್ತದೆ ಎಂಬುದು ಈ ಮಸೂರದ ವ್ಯಾಸವನ್ನು ಅವಲಂಬಿಸಿರುತ್ತದೆ.

Aphelion

 ದೂರಬಿಂದು – ಒಂದು ಗ್ರಹ, ಧೂಮಕೇತು ಅಥವಾ ಕೃತಕ ಉಪಗ್ರಹದ ಕಕ್ಷೆಯಲ್ಲಿ ಸೂರ್ಯನಿಂದ ಗರಿಷ್ಠ ದೂರದಲ್ಲಿರುವ ಬಿಂದು.

Page 4 of 6

Kannada Sethu. All rights reserved.