ಕಪ್ಪು ವಸ್ತು – ತನ್ನ ಮೇಲೆ ಬೀಳುವ ಎಲ್ಲ ಬೆಳಕನ್ನೂ ಸಂಪೂರ್ಣವಾಗಿ ಹೀರಿಕೊಳ್ಳುವ ವಸ್ತು.
ಕನ್ನಡ ಕನ್ನಡಿ
ವಾರಕ್ಕೆ ಐದು ಪದಗಳಂತೆ, ತಾಂತ್ರಿಕ/ವೈಜ್ಞಾನಿಕ ಕ್ಷೇತ್ರದ ಪದಗಳಿಗೆ ಕನ್ನಡ ಸಂವಾದಿ ಪದಗಳ ಪರಿಚಯ ಮಾಡುವ ಅಂಕಣವಿದು. ಕನ್ನಡದಲ್ಲಿ ಹೊಸ ಜ್ಞಾನ ನಿರ್ಮಾಣ ಆಗಬೇಕೆಂದರೆ ಅದರ ಪದಕೋಶವು ವಿಸ್ತಾರಗೊಳ್ಳಬೇಕು. ಈ ದಿಸೆಯಲಿನ್ಲ ಕಿರುಪ್ರಯತ್ನವೇ ಈ ಅಂಕಣ.
ಕಪ್ಪು ಕುಳಿ – ಬಾಹ್ಯಾಕಾಶದಲ್ಲಿರುವ ಒಂದು ವಸ್ತು ಇದು. ತನ್ನದೇ ಗುರುತ್ವಶಕ್ತಿಗಳ ಅಡಿಯಲ್ಲಿ ಕುಸಿದಂತಹ ವಸ್ತು. ಇದು ಎಷ್ಟರ ಮಟ್ಟಿಗೆ ಕುಸಿದಿರುತ್ತದೆಂದರೆ ಇದರ ವಿಮೋಚನಾ ವೇಗವು ಬೆಳಕಿನ ವೇಗಕ್ಕೆ ಸಮನಾಗಿರುತ್ತದೆ (ವಿಮೋಚನಾ ವೇಗ = ಒಂದು ವಸ್ತುವಿನ ಗುರುತ್ವಾಕರ್ಷಣೆಯಿಂದ ಇನ್ನೊಂದು ವಸ್ತುವು ತಪ್ಪಿಸಿಕೊಂಡು ಹೋಗಲು ಹೊಂದಿರಬೇಕಾದ ಕನಿಷ್ಠ ವೇಗ).
ಕಪ್ಪು ಬೆಳಕು – ಇದು ವಿದ್ಯುತ್ಕಾಂತೀಯ ಅದೃಶ್ಯ ವಿಕಿರಣ(ಬೆಳಕು). ಇದು ಹೊಳಪಿನ ಕಾಂತಿ ಬೀರಬಲ(ಫ್ಲೋರೋಸೆಂಟ್) ವಸ್ತುಗಳ ಮೇಲೆ ಬಿದ್ದಾಗ ಅವು ಕಣ್ಣಿಗೆ ಕಾಣುವ ಬೆಳಕನ್ನು ಸೂಸುವಂತೆ ಮಾಡುತ್ತದೆ.
ಹೊದಿಕೆ – ಅಣುಸ್ಥಾವರದ ಕೇಂದ್ರವನ್ನು ಸುತ್ತುವರಿದಿರುವ ಫಲವತ್ತಾದ ವಸ್ತು. ಇದನ್ನು ಒಂದೋ ಹೊಸ ಇಂಧನವಸ್ತುವನ್ನು ಬೆಳೆಸಲು ಇಲ್ಲವೇ ಕೆಲವು ನ್ಯೂಟ್ರಾನುಗಳನ್ನು ಕೇಂದ್ರಕ್ಕೆ ಮರಳಿ ಪ್ರತಿಫಲಿಸಲು ಬಳಸುತ್ತಾರೆ.
ಕುರುಡು ಜಾಗ – ಕಣ್ಣಿನ ದೃಶ್ಯಪಟಲದಲ್ಲಿ ನರವು ಕಣ್ಣನ್ನು ಬಿಡುವಂತಹ ಜಾಗ.
ನೀಲಿ ಸರಿತ – ನಮ್ಮ ಹತ್ತಿರ ಬರುತ್ತಿರುವ ಆಕಾಶಕಾಯದ ವರ್ಣಪಟಲವು ಚಿಕ್ಕ ತರಂಗಾಂತರಗಳ ಕಡೆಗೆ ಸರಿಯುವುದು.
ಕುದಿಯುವಿಕೆ – ನಿರ್ದಿಷ್ಟ ಉಷ್ಣತೆಯೊಂದರಲ್ಲಿ (ಕುದಿಬಿಂದು) ದ್ರವವೊಂದು ಅನಿಲವಾಗಿ ಬದಲಾಗುವ ಕ್ರಿಯೆ. ಯಾವಾಗ ಸಂತುಷ್ಟ ಆವಿಯ ಒತ್ತಡವು ಹೊರಗಿನ ಒತ್ತಡಕ್ಕೆ ಸಮನಾಗುತ್ತದೋ ಆಗ ಕುದಿಯುವಿಕೆ ಉಂಟಾಗುತ್ತದೆ.
ಕುದಿನೀರಿನ ಸ್ಥಾವರ – ನೀರನ್ನು ತಂಪುಕಾರಕವಾಗಿ ಮತ್ತು ಮಿತಕಾರಕ(ನ್ಯೂಟ್ರಾನುಗಳ ವೇಗವನ್ನು ಕಡಿಮೆ ಮಾಡುವಂಥದ್ದು)ವಾಗಿ ಬಳಸುವಂತಹ ಅಣುಸ್ಥಾವರ.
ಸಿಡಿಗುಂಡು ಉಷ್ಣತಾಮಾಪಕ – ದಹನಕ್ರಿಯೆಯಲ್ಲಿನ (ಉದಾಹರಣೆಗೆ ಇಂಧನ ಮತ್ತು ಆಹಾರಗಳ ದಹನಕ್ರಿಯೆ) ಉಷ್ಣತೆಯನ್ನು ಅಳೆಯಲು ಬಳಸುವ, ಪಾತ್ರೆಯಂತಹ ಒಂದು ಉಪಕರಣ.
ಬೂಲಿಯನ್ ಬೀಜಗಣಿತ – ಜಾರ್ಜ್ ಬೂಲ್ ಎಂಬ ಗಣಿತಜÐರು 19ನೇ ಶತಮಾನದ ಮಧ್ಯಭಾಗದಲ್ಲಿ ರೂಪಿಸಿದ ಒಂದು ರೀತಿಯ ತರ್ಕವ್ಯವಸ್ಥೆ. ಇದು ತಾರ್ಕಿಕ ಸಂಬಂಧಗಳನ್ನು ನಿರ್ವಹಿಸಲು ಗಣಿತ ವಿಧಾನಗಳನ್ನು ನೀಡುತ್ತದೆ. ಗಣಕಯಂತ್ರದ 0 ಮತ್ತು 1ರ ಎರಡಂಕಿ ಭಾಷೆಯಲ್ಲಿ ಇದನ್ನು ವ್ಯಾಪಕವಾಗಿ ಬಳಸುತ್ತಾರೆ.