ಕನ್ನಡ ಕನ್ನಡಿ

ವಾರಕ್ಕೆ ಐದು ಪದಗಳಂತೆ, ತಾಂತ್ರಿಕ/ವೈಜ್ಞಾನಿಕ ಕ್ಷೇತ್ರದ ಪದಗಳಿಗೆ ಕನ್ನಡ ಸಂವಾದಿ ಪದಗಳ ಪರಿಚಯ ಮಾಡುವ ಅಂಕಣವಿದು. ಕನ್ನಡದಲ್ಲಿ ಹೊಸ ಜ್ಞಾನ ನಿರ್ಮಾಣ ಆಗಬೇಕೆಂದರೆ ಅದರ ಪದಕೋಶವು ವಿಸ್ತಾರಗೊಳ್ಳಬೇಕು. ಈ ದಿಸೆಯಲಿನ್ಲ ಕಿರುಪ್ರಯತ್ನವೇ ಈ ಅಂಕಣ.

Induction

ಇಂಡಕ್ಷನ್ – ವಿದ್ಯುತ್ ಪ್ರೇರಣೆ – ಒಂದು ಕಾಂತಕ್ಷೇತ್ರದಿಂದಾಗಿ ಒಂದು ವಸ್ತುವಿನ ಸ್ಥಿತಿಯಲ್ಲಿ ಆದ ಬದಲಾವಣೆ.

Induction coil

ಇಂಡಕ್ಷನ್ ಕಾಯಿಲ್ – ವಿದ್ಯುತ್ ಪ್ರೇರಣಾ ಸುರುಳಿ – ಒಂದು ರೀತಿಯ ಪರಿವರ್ತಕ. ಇದನ್ನು ಕಡಿಮೆ ವಿದ್ಯುತ್ ಸಾಮರ್ಥ್ಯವುಳ್ಳ  ಆಕರದಿಂದ ಹೆಚ್ಚಿನ ವಿದ್ಯುತ್ ಸಾಮರ್ಥ್ಯ ವುಳ್ಳ ವಿದ್ಯುತ್ ಚಿಮ್ಮುವಿಕೆ( pulses) ಗಳನ್ನು ಉತ್ಪತ್ತಿ ಮಾಡಲು ಉಪಯೋಗಿಸುತ್ತಾರೆ. 

Induction furnace

ಇಂಡಕ್ಷನ್ ಫರ್ನೇಸ್ – ವಿದ್ಯುತ್ಪ್ರೇರಣಾ ಕುಲುಮೆ – ವಿದ್ಯುತ್ ಕಾಂತೀಯ ಪ್ರೇರಣೆಯ ಸಹಾಯದಿಂದ ವಿದ್ಯುಚ್ಛಕ್ತಿಯನ್ನು ತಾಪವಾಗಿ ಪರಿವರ್ತಿಸಲು ಬಳಸುವಂತಹ ಉಪಕರಣ.

Induction heating

ಇಂಡಕ್ಷನ್ ಹೀಟಿಂಗ್ – ವಿದ್ಯುತ್ ಮೂಲಕ ಕಾಯಿಸುವಿಕೆ – ಬದಲಾಗುತ್ತಿರುವ ವಿದ್ಯುತ್ಕಾಂತೀಯ ಕ್ಷೇತ್ರದಿಂದಾಗಿ ಪ್ರೇರಿಸಲ್ಪಡುವ ವಿದ್ಯುತ್ ಪ್ರವಾಹಗಳಿಂದ ( ಇವನ್ನು ಎಡ್ಡಿ ಕರೆಂಟ್ ಎಂದು ಕರೆಯುತ್ತಾರೆ) ಒಂದು ವಿದ್ಯುತ್ ವಾಹಕವನ್ನು ಕಾಯಿಸುವುದು‌. ಸಾಮಾನ್ಯವಾಗಿ ಇದು ಶಕ್ತಿನಷ್ಟದ ಸನ್ನಿವೇಶವಾಗಿದ್ದರೂ, 

ಕರಗಿಸುವಿಕೆ, ಬೆಸುಗೆ ಹಾಕುವಿಕೆ ಮುಂತಾದವುಗಳನ್ನು ಮಾಡಲು ಇದು ತುಂಬ ಉಪಯುಕ್ತವಾಗಿದೆ. 

Induction motor

ಇಂಡಕ್ಷನ್ ಮೋಟಾರ್ – ವಿದ್ಯುತ್ಪ್ರೇರಣಾ ಮೋಟಾರು- ಪರ್ಯಾಯ ವಿದ್ಯುತ್ ನ  ವಿದ್ಯುತ್ ಯಂತ್ರ( ಮೋಟಾರು). ಇದರಲ್ಲಿ ವಿದ್ಯುತ್ ಪೂರೈಕೆ ವ್ಯವಸ್ಥೆಗೆ ಸಂಪರ್ಕ ಕಲ್ಪಿಸಿದಂತಹ ಬದಲಾಗುತ್ತಿರುವ ಕಾಂತಕ್ಷೇತ್ರವು, ವಿದ್ಯುತ್ ಪೂರೈಕೆ ವ್ಯವಸ್ಥೆಗೆ ಸಂಪರ್ಕ ಕಲ್ಪಿಸಿರುವ ಸುರುಳಿಯಲ್ಲಿ ವಿದ್ಯುತ್ತನ್ನು ಪ್ರೇರಿಸುತ್ತದೆ‌. 

Inelastic collission

ಇನೆಲಾಸ್ಟಿಕ್ ಕೊಲಿಷನ್ – ಸ್ಥಿತಿಸ್ಥಾಪಕವಲ್ಲದ ಢಿಕ್ಕಿ ‌- ಚಲನಶಕ್ತಿಯು ನಷ್ಟವಾಗುವಂತಹ ಢಿಕ್ಕಿಯನ್ನು ಸ್ಥಿತಿಸ್ಥಾಪಕವಲ್ಲದ ಢಿಕ್ಕಿ ಎನ್ನುತ್ತಾರೆ. ಇಲ್ಲಿ ಚಲನಶಕ್ತಿಯ ಒಂದಷ್ಟು ಭಾಗವು ಆಂತರಿಕ ಶಕ್ತಿಯಾಗಿ ಮಾರ್ಪಾಡಾಗುತ್ತದೆ.

Inert gases

ಇನರ್ಟ್ ಗ್ಯಾಸಸ್ – ಜಡಾನಿಲಗಳು – ಹೀಲಿಯಂ, ಆರ್ಗಾನ್, ನಿಯಾನ್, ಕ್ರಿಪ್ಟಾನ್ ಮತ್ತು ಆರ್ಗ್ನೆಸಾನ್‌ – ಈ ಮೂಲವಸ್ತುಗಳು. ಇವುಗಳ ಅತ್ಯಂತ ಹೊರಗಿನ ಕಕ್ಷೆಯು ಸಂಪೂರ್ಣವಾಗಿ ತುಂಬಿರುತ್ತದೆ. 

Inertia

ಇನರ್ಷಿಯಾ – ಯಥಾಸ್ಥಿತಿ ಜಡತ್ವ –  ಇದು ವಸ್ತುವಿಗಿರುವ ಒಂದು ಆಂತರಿಕ ಗುಣ. ನ್ಯೂಟನ್ ರ ಮೊದಲ ಚಲನಾ ನಿಯಮವು ಈ ಗುಣವನ್ನು ನಿರೂಪಿಸುತ್ತದೆ. ಈ ಗುಣದಿಂದಾಗಿ‌ ವಸ್ತುವು ತಾನು ಇರುವ ವಿಶ್ರಾಂತ ಸ್ಥಿತಿ ಅಥವಾ ಚಲನೆಯ ಸ್ಥಿತಿಯಲ್ಲಿ ಉಂಟಾಗುವ ಬದಲಾವಣೆಯನ್ನು ಪ್ರತಿರೋಧಿಸುತ್ತದೆ.

Inertial frame

ಇನರ್ಷಿಯಲ್ ಫ್ರೇಮ್ – ಜಡತ್ವ ಚೌಕಟ್ಟು ‌- ನ್ಯೂಟನ್‌ರ ನಿಯಮಗಳು ಪಾಲಿಸಲ್ಪಡುವಂತಹ ನಿರ್ದೇಶಕ ಚೌಕಟ್ಟು.

Inertial mass

ಇನರ್ಷಿಯಲ್ ಮಾಸ್ – ಜಡತ್ವ ದ್ರವ್ಯರಾಶಿ – ಜಡತ್ವದ ಗುಣಲಕ್ಷಣದ ಆಧಾರದಿಂದ ಅಳೆದಂತಹ, ವಸ್ತುವಿನ ದ್ರವ್ಯರಾಶಿ.

Page 4 of 7

Kannada Sethu. All rights reserved.