ನಮ್ಮ ಮನಸ್ಸು ನಿಶ್ಚಿಂತೆಯಾಗಿರುವುದು ಎಷ್ಟು ಮುಖ್ಯ ಎಂಬುದನ್ನು ಸೂಚಿಸುವ ಗಾದೆಮಾತಿದು. ಸಂತೆ ಎಂದರೆ ತುಂಬ ಗೌಜಿ ಗದ್ದಲ ಇರುವ ಜಾಗ. ಅಲ್ಲಿ ನಿದ್ದೆ ಮಾಡುವುದು ಎಂದರೆ ಸಾಮಾನ್ಯವಾದ ಮಾತಲ್ಲ. ಆದರೆ ಮನುಷ್ಯನ ಮನಸ್ಸಿನಲ್ಲಿ ಯಾವುದೇ ಚಿಂತೆ ಇಲ್ಲದಿದ್ದಾಗ ಅವನು ಸಂತೆಯಂತಹ ಗಲಗಲ ಗಲಾಟೆಯ ಜಾಗದಲ್ಲೂ ನಿದ್ದೆ ಮಾಡಬಲ್ಲ.
ಕನ್ನಡ ವಿವೇಕ
ಬದುಕನ್ನು ಹಸನು ಮಾಡಲು ಕನ್ನಡ ಭಾಷೆ, ಸಂಸ್ಕೃತಿಯು ನಮಗೆ ನೀಡಿದ ಕೆಲವು ಗಾದೆ, ಸೂಕ್ತಿ, ನಾಣ್ಣುಡಿ, ಲೋಕೋಕ್ತಿ, ನಲ್ವಾತು ಇವುಗಳಲ್ಲಿ ವಾರಕ್ಕೆ ಒಂದರ ಕಿರು ಪರಿಚಯವನ್ನು ಈ ಅಂಕಣದಲ್ಲಿ ಮಾಡಿಕೊಡಲಾಗುತ್ತದೆ.
Like us!
Follow us!