Lightening conductor

ಲೈಟ್ನಿಂಗ್ ಕಂಡಕ್ಟರ್ – ಮಿಂಚು ವಾಹಕ‌ – ಸಾಮಾನ್ಯವಾಗಿ ಕಟ್ಟಡಗಳಲ್ಲಿ ಮತ್ತು ಇನ್ನಿತರ ಕಟ್ಟೋಣಗಳಲ್ಲಿ ಮಿಂಚಿನಿಂದ ಆಗುವ ಅಪಾಯದಿಂದ ಅವುಗಳನ್ನು ರಕ್ಷಿಸುವುದಕ್ಕಾಗಿ ಸ್ಥಾಪಿಸಿಟ್ಟ ಒಂದು‌ ವಿದ್ಯುತ್ ವಾಹಕ.

Lightening arrestor

ಲೈಟ್ನಿಂಗ್ ಅರೆಸ್ಟರ್ – ಮಿಂಚು ಪ್ರತಿಬಂಧಕ‌ – ತನ್ನ ತುದಿಭಾಗಗಳಿಗೆ ಬಂದು ತಗಲುವ ಉಬ್ಬರದಲೆಯ ವಿದ್ಯುದ್ಬಲವನ್ನು ಕಡಿಮೆ ಮಾಡುವ ಗುಣವುಳ್ಳ ಉಪಕರಣ.

ಕನ್ನಡ ಗಾದೆಮಾತು – ಮೂರ್ಕಾಸಿನ ಗಳಿಕೆ, ಆರ್ಕಾಸಿನ ಬಳಕೆ.

ಕಾಸು-ಹಣ-ಧನ-ರೂಪಾಯಿ- ಪೌಂಡು – ಡಾಲರ್- ಯೂರೋ – ಯೆನ್ …… ಯಾವ ಹೆಸರಿನಿಂದ ಕರೆದರೇನಂತೆ, ಮನುಷ್ಯ ಯಾವ ನಾಗರಿಕ ಸಮಾಜದಲ್ಲಿ ಇದ್ದರೇನಂತೆ, ಅವನ‌ ಮೂಲ ಜೀವನಾವಶ್ಯಕತೆಗಳು ಪೂರ್ಣಗೊಳ್ಳಲು ಕಾಸು ಬೇಕು‌. ಜೊತೆಗೆ ಕಷ್ಟಪಟ್ಟು ದುಡಿದು ಗಳಿಸಿದ ಕಾಸನ್ನು ಹುಷಾರಾಗಿಯೂ ಖರ್ಚು ಮಾಡಬೇಕು. ಮೂರು ಕಾಸನ್ನು ಗಳಿಸಿ ಆರು ಕಾಸನ್ಬು ಬಳಸಬಾರದು‌. ನಮ್ಮ ಆದಾಯಕ್ಕಿಂತ ಖರ್ಚು ಯಾವತ್ತೂ ಜಾಸ್ತಿ ಆಗಬಾರದು ; ಜಾಸ್ತಿ ಆದರೆ ಸಾಲದ ಸುಳಿಯಲ್ಲಿ ಸಿಕ್ಕಿ ಹಾಕಿಕೊಳ್ಳುತ್ತೇವೆ.‌ ಉತ್ತಮವಾದ ಒಂದು ಆರ್ಥಿಕ ವಿವೇಕವನ್ನು ಈ ಗಾದೆಮಾತು […]

ವಿದ್ಯಾರ್ಥಿನಿ ಬಳಸಿದ ಹೊಸ ಪದ – ಗೋವಾಲಯ!

 ನಾವು ಕನ್ನಡ ಅಧ್ಯಾಪಕರು ಕೆಲವು ಸಲ ತರಗತಿಗಳಲ್ಲಿ ಅಚ್ಚರಿಗೊಳಿಸುವ ಸನ್ನಿವೇಶಗಳಿಗೆ ಎದುರಾಗುತ್ತೇವೆ. ನನ್ನ ಇಂತಹ ಒಂದು ಅನುಭವವನ್ನು ಇಲ್ಲಿ‌ ಹಂಚಿಕೊಳ್ಳುತ್ತಿದ್ದೇನೆ. ಈಚೆಗೆ ಒಂದು ಪದವಿ ತರಗತಿಯಲ್ಲಿ ಸೃಜನಶೀಲ ಬರವಣಿಗೆ ಎಂಬ ಪ್ರಾಯೋಗಿಕ ಕನ್ನಡ ತರಗತಿಯ ಭಾಗವಾಗಿ “ಇಂದಿನಿಂದ ಹತ್ತು ವರ್ಷಗಳ ನಂತರ ತಾನು ಯಾವ ಉದ್ಯೋಗದಲ್ಲಿ ಇರುತ್ತೇನೆ? ಆಗ ತನ್ನ ಸ್ಥಿತಿ- ಸ್ಥಾನಮಾನ ಹೇಗಿರುತ್ತೆ?” ಎಂಬುದನ್ನು ಪ್ರತಿ  ವಿದ್ಯಾರ್ಥಿನಿಯೂ ಕಲ್ಪಿಸಿಕೊಂಡು ಬರೆಯಬೇಕು ಎಂಬ ಕೆಲಸವನ್ನು ನೀಡಿದ್ದೆ. ‘ವಿದ್ಯಾರ್ಥಿನಿಯರ ಕಲ್ಪನಾ ಶಕ್ತಿ, ಸೃಜನಶೀಲ  ಬರವಣಿಗೆಯ ಕೌಶಲ್ಯ ಹೆಚ್ಚಲಿ, ಮುಂದೆ […]

Lightening

ಲೈಟ್ನಿಂಗ್ – ಮಿಂಚು( ವಿದ್ಯುನ್ಮಾಲೆ) – ಒಂದು ಮೋಡದ ಎರಡು ವಿರುದ್ಧ ವಿದ್ಯುದೀಕೃತ ಪದರಗಳ ನಡುವೆ ಅಥವಾ ಎರಡು ವಿದ್ಯುದೀಕೃತ ಮೋಡಗಳ ನಡುವೆ ಅಥವಾ ಒಂದು ವಿದ್ಯುದೀಕೃತ ಮೋಡ ಹಾಗೂ ಭೂಮಿಯ ಮೇಲ್ಮೈಯಲ್ಲಿನ ಒಂದು ಬಿಂದುವಿನ ನಡುವೆ ಹಾಯುವಂತಹ ತುಂಬಾ ಶಕ್ತಿಯುಳ್ಳ ವಿದ್ಯುತ್ ವಿಸರ್ಜನೆ ಅಥವಾ ಹೊನಲು‌.

Light bulb

ಲೈಟ್ ಬಲ್ಬ್ – ಗಾಜಿನ ಬುರುಡೆಯ ವಿದ್ಯಿದ್ದೀಪ ( ಬಲ್ಬು) – ವಿದ್ಯುತ್ತಿನಿಂದ ಬೆಳಕನ್ನು ಪಡೆಯಲು ಬಳಸುವ ಉಪಕರಣ. ಇದರಲ್ಲಿ, ಒಂದು ಗಾಜಿನ ಬುರುಡೆಯಲ್ಲಿ ಒಂದು ಟಂಗ್ಸ್ಟನ್ ತಂತು ಮತ್ತು ಒಂದು ಜಡ ಅನಿಲ‌ ಇರುತ್ತವೆ. ಈ ತಂತುವಿನಲ್ಲಿ ವಿದ್ಯುತ್ತನ್ನು‌ ಹಾಯಿಸಿದಾಗ ಅದು ಕಾದು ಬೆಳ್ಳಗಾಗುತ್ತದೆ. ಟಂಗ್ಸ್ಟನ್ ಲೋಹವು ಆವಿಯಗಿ ಗಾಜಿನ ಬುರುಡೆಯು ಕಪ್ಪಾಗುವುದನ್ನು ಆದಷ್ಟೂ ತಡೆಯಲು ಜಡ ಅನಿಲವನ್ನು ಬಳಸುತ್ತಾರೆ.

Light

ಲೈಟ್ – ಬೆಳಕು – ಇದು ವಿದ್ಯುತ್ಕಾಂತೀಯ ಅಲೆಯ ಒಂದು ವಿಧ. ಇದಕ್ಕೆ ಮಾನವ ಕಣ್ಣು ಸ್ಪಂದಿಸುತ್ತದೆ. ಇದರ ಮೇಲೆಯೇ ನಮ್ಮ‌ ದೃಷ್ಟಿಪ್ರಜ್ಞೆಯು ಅವಲಂಬಿತವಾಗಿರುತ್ತದೆ. ಪ್ರಪಂಚವನ್ನು ನಾವು ನಮ್ಮ ಕಣ್ಣಿಂದ ನೋಡಲು ಸಾಧ್ಯವಾಗುವುದು ಸಹ ಇದರಿಂದಲೇ. ನಾವು ಬಣ್ಣಗಳನ್ನು ಗುರುತಿಸಲು ಸಾಧ್ಯವಾಗುವುದು ಸಹ ಇದರಿಂದಲೇ.

Libration

ಲಿಬ್ರೇಷನ್ – ಓಲಾಟ – ಇದು ಖಗೋಳವಿಜ್ಞಾನದ ಒಂದು ವಿದ್ಯಮಾನ‌. ಭೂಮಿಯಿಂದ ನೋಡಿದಾಗ,  ಕೆಲವು ಸಲ, ಚಂದ್ರನ,  ತೋರುವ  ಅಥವಾ ನಿಜವಾದ ಓಲಾಟದಿಂದಾಗಿ ಸಾಮಾನ್ಯವಾಗಿ ಕಾಣದ ಅದರ ( ಚಂದ್ರನ) ಅಂಚುಗಳು ಭೂಮಿಯಲ್ಲಿರುವವರಿಗೆ ಕಾಣುತ್ತವೆ. ಈ ಓಲಾಟದಿಂದಾಗಿ ಚಂದ್ರನ 59% ಮೇಲ್ಮೈಯನ್ನು ನಾವು‌ 30 ವರ್ಷಗಳ ಅವಧಿಯುದ್ದಕ್ಕೂ ನೋಡಬಹುದು.

LF (Low frequency)

ಎಲ್ಎಫ್(ಲೋ ಫ್ರೀಕ್ವೆನ್ಸಿ) –  30-300 ಕಿಲೋ ಹರ್ಟ್ಝ್ ಆವರ್ತನಗತಿಯುಳ್ಳ (  ಅಂದರೆ 1 -10ಕಿ.ಮೀ.ತರಂಗಾಂತರವುಳ್ಳ) ವಿದ್ಯುತ್ಕಾಂತೀಯ ಅಲೆಗಳು.

ಕನ್ನಡ ಗಾದೆಮಾತು – ತುಸ ತಿಂದ್ರೂ ರಸ ತಿನ್ನಬೇಕು.

ಉತ್ತಮ ಹಾಗೂ ಅಭಿರುಚಿಯುತ ಜೀವನದ ಬಗ್ಗೆ ಹೇಳುವ ಗಾದೆಮಾತು ಇದು‌. ಸ್ವಲ್ಪವೇ ತಿಂದರೂ ರಸಮಯವಾದದ್ದನ್ನು ತಿನ್ನಬೇಕು. ಏನೇನೋ ನೀರಸವಾದದ್ದನ್ನು ಅತಿಯಗಿ ತಿನ್ನಬಾರದು‌.‌ ಊಟ ಮಾಡುವಾಗ ಪ್ರಮಾಣಕ್ಕಿಂತ ರುಚಿ, ಸ್ವಾರಸ್ಯ, ಸವಿಯುವಿಕೆ ಮುಖ್ಯ ಎಂಬುದನ್ನು ಅಡಕವಾಗಿ, ಪ್ರಾಸಬದ್ಧವಾಗಿ ಹೇಳುತ್ತದಲ್ಲವೆ ಈ ಗಾದೆಮಾತು? ಪ್ರಾನ್ಸ್ ದೇಶದಲ್ಲಿ ಹೀಗೆ ರುಚಿಕರವಾದ, ಒಳ್ಳೆಯ ಊಟವನ್ನು ಪುಟ್ಟ ಪುಟ್ಟ ಭಾಗಗಳಲ್ಲಿ ಬಡಿಸ್ತಾರಂತೆ. ಈ ರೀತಿಯಲ್ಲಿ ತಿನ್ನುವುದನ್ನು ‘ಫ್ರೆಂಚ್ ಪೋರ್ಷನ್’ ಎನ್ನುತ್ತಾರೆ. ಒಟ್ಟಿನಲ್ಲಿ ನಮ್ಮ ಗಾದೆ ಮಾತೊಂದು ಫ್ರಾನ್ಸ್ ದೇಶವನ್ನು ನೆನಪಿಸಿತು ನೋಡಿ! Kannada proverb […]

Page 2 of 3

Kannada Sethu. All rights reserved.