ಒಮ್ಮೊಮ್ಮೆ ಹೊಸ ಕನ್ನಡ ಪದಗಳು ಅನಿರೀಕ್ಷಿತ ಸ್ಥಳಗಳಲ್ಲಿ ಸಿಕ್ಕಿಬಿಡುತ್ತವೆ. ಈಚೆಗೆ ಒಂದು ಸಲ, ರಾತ್ರಿ 9.00 ಗಂಟೆಯ ಸಮಯದಲ್ಲಿ ಹೆಬ್ಬಾಳದ ಕಡೆಯಿಂದ, ನಮ್ಮ ಮನೆ ಇರುವ ಹಂಪಿನಗರಕ್ಕೆ ಓಲಾ ಕ್ಯಾಬ್ ಹಿಡಿದು ಬರುತ್ತಿದ್ದೆ. ಆ ಗಾಡಿಯ ಚಾಲಕನು ಅಂದು ತುಂಬ ಮಾತಾಡುವ ಉಮೇದಿನಲ್ಲಿದ್ದ. ಇಡೀ ದಿನ ಕೆಲಸ ಮಾಡಿದ ಆಯಾಸದಿಂದಾಗಿ ಪ್ರತಿಯಗಿ ಮಾತಾಡುವ ಹುರುಪು ನನ್ನಲ್ಲಿ ಅಷ್ಟೇನೂ ಇರಲಿಲ್ಲ. ಆದರೂ ಸೌಜನ್ಯಕ್ಕೆಂದು ಅವನ ಮಾತುಗಳನ್ನು ಕೇಳಿಸಿಕೊಂಡು ಹೂಂಗುಟ್ಟುತ್ತಿದ್ದೆ. ತಾನು ಭಾಗವಹಿಸಿದ್ದ ಒಂದು ಭರ್ಜರಿ ಮದುವೆಯ ಬಗ್ಗೆ ಮಾತಾಡುತ್ತಿದ್ದನವನು. […]
ಲೇಡನ್ ಜಾರ್ – ಲೇಡನ್ ಪಾತ್ರೆ – ಪೂರ್ವಕಾಲದ ಒಂದು ರೀತಿಯ ವಿದ್ಯುತ್ ಸಂಗ್ರಾಹಕ. ಇದನ್ನು ಡಚ್ ಲ್ಯಾಂಡಿನ ಲೇಡನ್ ಎಂಬ ಸ್ಥಳದಲ್ಲಿ 1745ರಲ್ಲಿ ನಿರ್ಮಿಸಿದ್ದರು. ಇದರಲ್ಲಿ ಒಂದು ಗಾಜಿನ ಪಾತ್ರೆಯ ಹೊರ ಮೇಲ್ಮೈಗೆ ಒಂದು ಲೋಹದ ತೆಳುಹಾಳೆಯನ್ನು ಹೊದಿಸಿರುತ್ತಿದ್ದು, ಒಳ ಮೇಲ್ಮೈಗೂ ಇಂಥದೇ ಹಾಳೆಯನ್ನು ಹಾಕಿ ಮುಚ್ಚಿರುತ್ತಿದ್ದರು. ಒಳ ಮೇಲ್ಮೈ ಹೊದಿಕೆಯ ಲೋಹವನ್ನು ಮುಕ್ತವಾಗಿ ತೂಗಾಡುತ್ತಿದ್ದ ಸರಪಣಿಯೊಂದು ಸ್ಪರ್ಶಿಸುತ್ತಿತ್ತು.
ಲಿವರ್ – ಮೀಟುಗೋಲು ಅಥವಾ ಸನ್ನೆಗೋಲು – ಭದ್ರವಾಗಿ ನೆಲೆಯೂರಿಸಿದ ಒಂದು ಆಧಾರದ ಸುತ್ತ ತಿರುಗಿಸಲು ಸಾಧ್ಯವಿರುವ ಒಂದು ಗಟ್ಟಿ ಕೋಲು. ಇದರಿಂದ ಭಾರಗಳನ್ನು ಎತ್ತುವುದು ಸುಲಭವಾಗುತ್ತದೆ.
ಲೆಥಾರ್ಜಿ – ನಿಶ್ಯಕ್ತಿ – ನಿರ್ದಿಷ್ಟ ಪ್ರಮಾಣೀಕೃತ ಶಕ್ತಿ ಹಾಗೂ ಒಂದು ನ್ಯೂಟ್ರಾನಿನ ಶಕ್ತಿ(E)ಯ ಅನುಪಾತದ ಋಣಾತ್ಮಕ ಸಹಜ ಕ್ರಮವಿಧಿ ( ಕ್ರಮವಿಧಿ = logarithm). ಸಾಮಾನ್ಯ ಪದಗಳಲ್ಲಿ ಹೇಳಬೇಕೆಂದರೆ ನಿಶ್ಯಕ್ತಿ ಅಂದರೆ ಶಕ್ತಿಯ ತೀವ್ರ ಕೊರತೆಯ ಸ್ಥಿತಿ.
ಲೆಪ್ಟಾನ್ – ಲೆಪ್ಟಾನು – ಎಲೆಕ್ಟ್ರಾನು, ಮ್ಯೂಯಾನು ( ಮತ್ತೆ ವಿಭಜಿಸಲು ಸಾಧ್ಯವಿಲ್ಲದ, ಋಣ ವಿದ್ಯುದಂಶ ಹೊಂದಿದ ಆದರೆ ಅದಕ್ಕಿಂತ ಹೆಚ್ಚು ದ್ರವ್ಯರಾಶಿಯುಳ್ಳ ಒಂದು ಅಂತರ್ಪರಮಾಣು – ಅಂದರೆ ಪರಮಾಣುವಿನೊಳಗಿನ -ಮೂಲಭೂತ ಕಣ) ಮತ್ತು ನ್ಯೂಟ್ರಾನುಗಳನ್ನು ಒಟ್ಟಾಗಿ ಸೂಚಿಸುವ ಒಂದು ಪದ.
ಲೆಂಜ್ ಸ್ ಲಾ – ಲೆಂಜ್ ರ ನಿಯಮ – ಒಂದು ವಿದ್ಯುನ್ಮಂಡಲದಲ್ಲಿ ಪ್ರೇರಿತ ವಿದ್ಯುತ್ ಸಾಮರ್ಥ್ಯ (ವಿದ್ಯುತ್ ಚಾಲಕ ಬಲ)ದ ದಿಕ್ಕು, ತನ್ನನ್ನು ಉತ್ಪಾದಿಸುವುದರ ದಿಕ್ಕಿಗೆ ವಿರುದ್ಧವಾಗಿರುತ್ತದೆ.
Like us!
Follow us!