ಈ‌ ಗಾದೆಮಾತು ಮಾನವ ಸಂಬಂಧಗಳ‌ಲ್ಲಿನ ಒಂದು ಕಟುಸತ್ಯವನ್ನು ತುಂಬ ಶಕ್ತವಾದ ಒಂದು ಉದಾಹರಣೆಯೊಂದಿಗೆ ಹೇಳುತ್ತಿದೆ. ಹೇಗೆ ಒಮ್ಮೆ ಮುರಿದ ಕನ್ನಡಿಯನ್ನು ಮತ್ತೆ ಕೂಡಿಸಲು ಸಾಧ್ಯ ಇಲ್ಲವೋ, ಕೂಡಿಸಿದರೂ ಕನ್ನಡಿಯ ಮೇಲ್ಮೈಯಲ್ಲಿ ಕಲೆ ಉಳಿಯುತ್ತದೋ, ಹಾಗೆಯೇ ಸಂಬಂಧಗಳಲ್ಲಿ ಮನಸ್ಸುಗಳು ಒಮ್ಮೆ ಮುರಿದವೆಂದರೆ ಮತ್ತೆ ಆ ಮನಸ್ಸುಗಳು ಬೆರೆಯುವುದಿಲ್ಲ. ಸುಳ್ಳು, ಮೋಸ, ಚಾಡಿ, ನಂಬಿಕೆದ್ರೋಹ ಮುಂತಾದ ಘಟಿತಗಳು ಮನಸ್ಸುಗಳನ್ನು ಮುರಿದುಬಿಡುತ್ತವೆ. ಹೀಗೆ ಒಮ್ಮೆ ಮುರಿದ ಮನಸ್ಸು ಮತ್ತೆ ಬೆರೆಯುವುದು ಅಸಾಧ್ಯವೇ ಸರಿ. ಬೆರೆಸಲು ಪ್ರಯತ್ನಿಸಿದರೂ ಹಳೆಯ ಕಹಿಗಳು ಕಾಡಿ, ಸಂಬಂಧವು  ಸಂತೋಷವಾಗಿ ಮುಂದುವರಿಯುವುದಿಲ್ಲ. ಹೀಗಾಗಿ ನಮ್ಮ ಆಪ್ತರ ಮನಸ್ಸು ಮುರಿಯದಂತೆ ನಾವು ಜಾಗ್ರತೆ ವಹಿಸಬೇಕು‌. 

Kannada proverb – Murida manassu bereyolla, odeda kannadi koodolla (Broken hearts do not get close, broken mirror can not be mended).

This proverb warns us about a truth of human relationships with a very vivid example. Once a mirror is broken it is broken forever. Even if we try to join its pieces by glue, the mirror won’t get its original form, because the line where the broken pieces are joined stays. Likewise, if a  loving heart is broken by lies, deciet, betrayal or back biting, the heart remains broken forever. After that, whatever efforts we put, the pain caused, stays like a scar. Therefore we need to be very careful so that we don’t break the hearts of our loved ones.