‘ಅಂಬಲಿ’ ಎನ್ನುವುದು ರಾಗಿಯ ಹಿಟ್ಟಿನಿಂದ ತಯಾರಿಸುವ ಗಂಜಿಯಂತಹ ಖಾದ್ಯ. ಇದನ್ನು ಬಡವರ ಆಹಾರ ಎನ್ನಲಾಗುತ್ತದೆ. ‘ಇಂಬು’ ಪದಕ್ಕಿರುವ ಅನೇಕ ಅರ್ಥಗಳಲ್ಲಿ ಸುಖ, ಸಂತೋಷ, ಅನುಕೂಲತೆ, ಲೇಸು ಎಂಬ ಅರ್ಥಗಳೂ ಇವೆ. ಮೇಲೆ ಪ್ರಸ್ತಾಪವಾಗಿರುವ ಗಾದೆ ಮಾತು ಅಂಬಲಿಯನ್ನು ಅಂದರೆ ಅತ್ಯಂತ ಬಡತನದ ಆಹಾರವನ್ನು ಕುಡಿದರೂ ಅದನ್ನು ಇಂಬಾಗಿ ಅಂದರೆ ಸುಖ-ಸಂತೋಷವುಳ್ಳ ಅನುಕೂಲಕರ ವಾತಾವರಣದಲ್ಲಿ ಸೇವಿಸಬೇಕು, ಯಾವುದೋ ಮುಜುಗರ, ಹಂಗು, ಅಸುಖ, ಅವಮಾನಗಳಿರುವ ವಾತಾವರಣದಲ್ಲಿ ಕುಡಿಯಬಾರದು ಎಂದು ಹೇಳುತ್ತದೆ. ಮನುಷ್ಯನಿಗೆ ಮುಜುಗರದ ವೈಭವ, ಅಹಿತಕರ ಸಮೃದ್ಧಿಗಿಂತ, ತನ್ನದಿದು ಅನ್ನಿಸುವ ನೆಮ್ಮದಿಯ ಮತ್ತು ಹಿತಕರವಾದ ನೆಲೆ ಎಂಬುದು ಎಷ್ಟು ಮುಖ್ಯ ಎಂಬುದು ಇದರಿಂದ ಅರ್ಥವಾಗುತ್ತದೆ.
Kannada proverb – Ambali kudidaruu imbaagi kudi( Even if you drink humble porridge, drink it with dignity and in comfort).
For us humans, more than pomp and show, peace, basic dignity are important. Therefore it is better to drink our own well earned humble porridge in our own dwelling than fidget uncomfortably at the dinner table in some rich setting where human touch and love are missing.
This proverb is hard hitting. Isn’t it?
Like us!
Follow us!