ಬೆಂಗಳೂರಿಗರಿಗೆ ಪರಿಚಿತವಾದ ಒಂದು ಹೆಸರೆಂದರೆ ಕತ್ರಿಗುಪ್ಪೆ. ಬನಶಂಕರಿಗೆ ಸೇರುವ ಒಂದು ಬಡಾವಣೆ ಇದು. ನಾನು ಆ ಕಡೆಗೆ ಹೋದಾಗಲೆಲ್ಲ ಏನಿದು ಈ ಹೆಸರು? ಕತ್ತರಿಗುಪ್ಪೆಯಾ, ಕತ್ರಿಗುಪ್ಪೆಯಾ? ಇದರ ಅರ್ಥ ಏನಿರಬಹುದು ಎಂದು ಬಹಳ ಸಲ ಯೋಚಿಸುತ್ತಿದ್ದೆ. 

ಒಂದಿಷ್ಟು ಕೇಳಿಕೆ, ಓದುಗಳ ನಂತರ ತಿಳಿಯಿತು – ಕತ್ರಿಗುಪ್ಪೆ ಒಂದು ಅನ್ವರ್ಥನಾಮ ಅಂತ. ಬಹಳ‌ ಹಿಂದೆ ಇಲ್ಲಿ ದೊಡ್ಡ ಪ್ರಮಾಣದಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿತ್ತಂತೆ. ಕಲ್ಲೊಡ್ಡರು ಅಲ್ಲಿನ ಕಲ್ಲುಗಳನ್ನು ಕತ್ತರಿಸಿ, ಕತ್ತರಿಸಿ, ಪಕ್ಕದಲ್ಲೇ ಗುಪ್ಪೆ( ರಾಶಿ) ಯಾಗಿ ಹಾಕ್ತಿದ್ರಂತೆ.‌ ಹಾಗಾಗಿ  ಈ ಪ್ರದೇಶಕ್ಕೆ ಕತ್ರಿಗುಪ್ಪೆ ಎಂಬ ಹೆಸರು ಬಂತಂತೆ! 

ಚೆನ್ನಾಗಿದೆ ಅಲ್ವಾ ಕನ್ನಡ ಬಂಧುಗಳೇ,  ಹೆಸರಿನ ಮೂಲ ಹುಡುಕುವ ಈ ಚಟುವಟಿಕೆ!