ಮೊನ್ನೆ ನಮ್ಮ ನಾಟ್ಯ ತರಗತಿಯಲ್ಲಿ ಐದು-ಆರು ವರ್ಷ ವಯಸ್ಸಿನ ಕೆಲವು ಪುಟ್ಟ ಮಕ್ಕಳಿಗೆ ಒಂದು ಶಿಶುನೃತ್ಯ ಹೇಳಿಕೊಡುತ್ತಿದ್ದೆ. ‘ಜಿಂಕೆ ಹೇಗೆ ಜಿಗಿಯುವುದು ಜಿಂಜಿಂಜಿಂಜಿಂ, ನವಿಲು ಹೇಗೆ ನಲಿಯುವುದು ನಂನಂನಂನಂ ಆನೆ ಹೇಗೆ ನಡೆಯುವುದು ಓ…ಓ…. ನಾನು ಮಾತ್ರ ನಗುತಲಿರುವೆ ಹ ಹ ಹ ಹ” ಈ ನೃತ್ಯ ಸರಳ. ಆದರೆ ಈ ಅನುಕರಣ ಶಬ್ದಗಳಲ್ಲಿನ ನಾದ, ಮಾಧುರ್ಯ, ಸಂಗೀತ ಗುಣ ಮಕ್ಕಳಿಗೆ ತುಂಬ ಇಷ್ಟವಾದ ಹಾಗೆ ಕಂಡಿತು. ಜಿಂಜಿಂ, ನಂನಂ, ಓ ಓ, ಹಹ…ಮುಂತಾದ ಪದಗಳಿಗೆ ಅರ್ಥ ಇಲ್ಲದಿದ್ದರೂ […]
ತಂಪುಕಾರಕ – ಉಷ್ಣ ವರ್ಗಾವಣೆಯ ವಿಧಾನದಿಂದ ಬಿಸಿ ಚಾಲಕ ಯಂತ್ರದಿಂದ ಶಕ್ತಿಯನ್ನು ತೆಗೆದುಬಿಡುವ ದ್ರವ.
ಕೂಡುವ ಮಸೂರ ಅಥವಾ ಕನ್ನಡಿ – ಬೆಳಕಿನ ಒಂದು ಸಮಾನಾಂತರ ಕಿರಣ ಸಮೂಹವನ್ನು ಒಂದು ಬಿಂದುವಿನಲ್ಲಿ ಕೂಡುವಂತೆ ವಕ್ರೀಭವಿಸುವ ಅಥವಾ ಪ್ರತಿಫಲಿಸುವ ಮಸೂರ ಅಥವಾ ಕನ್ನಡಿ. ಹೀಗೆ ಮಾಡುವ ಕನ್ನಡಿಯು ತಗ್ಗಿರುತ್ತದೆ ಮತ್ತು ಮಸೂರವು ಮಧ್ಯದಲ್ಲಿ ಉಬ್ಬಿರುತ್ತದೆ.
ಸ್ವತಃಚಲನಾ ಉಷ್ಣ ವರ್ಗಾವಣೆ – ಒಂದು ದ್ರವದಲ್ಲಿ ಆ ದ್ರವದ ಚಲನೆಯಿಂದಲೇ ಉಷ್ಣತೆಯು ಅದರ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ವರ್ಗಾವಣೆಯಾಗುವುದು.
ಅಖಂಡ ವರ್ಣಪಟಲ – ಹೊರಸೂಸಲ್ಪಟ್ಟ ಅಥವಾ ಹೀರಲ್ಪಟ್ಟ ವಿಕಿರಣದ ಅಖಂಡ ಶ್ರೇಣಿಯಿಂದ ಉಂಟಾಗಿರುವ ವರ್ಣಪಟಲ.
ನಿಯಂತ್ರಕ ಸರಳು – ಉಷ್ಣ ವಿದ್ಯುದಣು ಕವಾಟ ಅಥವಾ ಋಣಕಿರಣ ಕೊಳವೆಯಲ್ಲಿ ಇರಿಸಿದ ಲೋಹಪರದೆಯ ರೂಪದ ವಿದ್ಯುತ್ ಧ್ರುವ. ಇದು ಒಂದು ಧ್ರುವದಿಂದ ಇನ್ನೊಂದು ಧ್ರುವಕ್ಕೆ ಹರಿಯುವ ಎಲೆಕ್ಟ್ರಾನುಗಳನ್ನು ನಿಯಂತ್ರಿಸುತ್ತೆ.
Like us!
Follow us!