ಕನ್ನಡ ಗಾದೆಮಾತು – ಅಕ್ಕರೆ ಇದ್ದಲ್ಲಿ ದುಕ್ಕ ಇರುತ್ತೆ‌. 

ಮನುಷ್ಯ ಸಂಬಂಧಗಳಲ್ಲಿನ‌ ಒಂದು ಸತ್ಯವನ್ನು ಹೇಳುವ ಗಾದೆಮಾತು ಇದು. ಎಲ್ಲಿ ಅಕ್ಕರೆ ಇರುತ್ತದೋ ಅಲ್ಲಿ ಕಾಳಜಿ, ನಿರೀಕ್ಷೆ, ಚಿಂತೆ, ದುಃಖ ಇವೆಲ್ಲ ಇರುತ್ತವೆ.‌ ತಾಯಿ ಮಕ್ಕಳ ಸಂಬಂಧ, ತಂದೆ ಮಕ್ಕಳ ಸಂಬಂಧ ….ಇವುಗಳಲ್ಲಿ ಇನ್ನು ಯಾವ ದುಃಖವಿಲ್ಲದಿದ್ದರೂ ರೋಗ, ಸಾವು ತರುವ ಅಗಲಿಕೆಯ ದುಃಖವಂತೂ ಇರುತ್ತದೆ ಅಲ್ಲವೆ? ನಿಜ ಹೇಳಬೇಕೆಂದರೆ ನಾವು ತುಂಬ ಕಷ್ಟ ನೋವು, ಅನುಭವಿಸುವುದು ನಾವು‌ ಯಾರನ್ನು ತುಂಬ ಪ್ರೀತಿಸುತ್ತೇವೋ ಅವರ ಕಾರಣದಿಂದಲೇ ಹೊರತು ಅಪರಿಚಿತರಿಂದ ಅಲ್ಲ.‌ ಬದುಕಿನ ಒಂದು ವಿಪರ್ಯಾಸ ಇದು. ಬದುಕಿನ […]

ಪಂದಿಕರಿ, ಕೂಟುಕರಿ, ಕಡಲ ಕರಿ, ವೆಜಿಟೆಬಲ್ ಕರಿ, ಉಪ್ಕರಿ…ಅರೆರೆ ಈ ‘ಕರಿ’ ಎಲ್ಲಿಂದ ಬಂತ್ರಿ!?

ಕೊಡಗಿನ ಜನ ಪಂದಿಕರಿ‌ ಎಂಬ ಪದ ಬಳಸುವುದನ್ನು ನಾವು ಕೇಳುತ್ತೇವೆ ಅಲ್ವಾ? ಕೊಡವ ಭಾಷೆಯಲ್ಲಿ ಮಲಯಾಳಂ ಪದಗಳೂ ಇರ್ತವೆ. ಮಲಯಾಳಿಗಳು ಸಾರಿಗೆ/ಪಲ್ಯಕ್ಕೆ ಕರಿ ಎಂಬ ಪದವನ್ನು ಕೆಲವೊಮ್ಮೆ ಬಳಸ್ತಾರೆ. ಕಡಲ ಕರಿ, ಕೂಟುಕರಿ..ಹೀಗೆ. ಇನ್ನು ನಾವು ದರ್ಶಿನಿ ಹೋಟೆಲ್ ಗೆ ಹೋದರೆ ‘ರೋಟಿ-ಕರಿ’ ಎಂಬ ಪದ ಬಳಸುತ್ತೇವೆ‌.‌ ಅಂದ ಹಾಗೆ, ದಕ್ಷಿಣ  ಕನ್ನಡದ ಪ್ರದೇಶದಲ್ಲಿ ಉಪ್ಕರಿ ಎಂಬ ಪದ ಬಳಸ್ತಾರೆ. ಉಡುಪಿ ಕುಂದಾಪುರ ಶೈಲಿಯ ಅಡುಗೆಯಲ್ಲಿ ಅವಲಕ್ಕಿ ಉಪ್ಕರಿ ಬಹು ಪ್ರಸಿದ್ಧ. ತಾಜಾ ತೆಂಗಿನತುರಿಗೆ ಹಸಿಮೆಣಸು, ಒಗ್ಗರಣೆ,  […]

Lapse rate

ಲ್ಯಾಪ್ಸ್ ರೇಟ್ – ಅಳಿಯುವಿಕೆಯ ಗತಿ‌ – ಬೆಳಕಿನೊಂದಿಗೆ ಹವಾಮಾನದ ತಾಪಮಾನವು ಬದಲಾಗುವ ಗತಿ.

Land line

ಲ್ಯಾಂಡ್ ಲೈನ್ – ನೆಲ ತಂತಿ‌ – ಭೂಮಿಯ ಮೇಲ್ಮೈಗೆ ಅಂಟಿದಂತೆ ಅಥವಾ ಭೂಮಿಯ ಕೆಳಗೆ ಹಾಕಿರುವಂತಹ ಸಂಪರ್ಕ ತಂತಿ.

Laminated iron

ಲ್ಯಾಮಿನೇಟೆಡ್ ಐರನ್ – ತೆಳುಹಾಳೆಯಾಗಿಸಿದ ಕಬ್ಬಿಣ – ಕಬ್ಬಿಣದ ತೆಳುವಾದ ಹಾಳೆಗಳಿಂದ ಮಾಡಲ್ಪಟ್ಟ ಒಂದು ಕಬ್ಬಿಣದ ತುಂಡು‌ ಇದು. ಇದನ್ನು ಸುಳಿರೂಪೀ ವಿದ್ಯುತ್ ಪ್ರವಾಹವನ್ನು ಕನಿಷ್ಠ ಮಟ್ಟದಲ್ಲಿ ಇರಿಸುವುದಕ್ಕಾಗಿ ವಿದ್ಯುತ್ ಪರಿವರ್ತಕಗಳಲ್ಲಿ ಬಳಕೆ ಮಾಡುತ್ತಾರೆ.

Laminar flow

ಲ್ಯಾಮಿನಾರ್ ಫ್ಲೋ‌ – ಶಾಂತವಾದ ಹರಿವು‌ – ಮಟ್ಟಸವಾದ ಮೇಲ್ಮೈಯುದ್ದಕ್ಕೂ ಯಾವುದೇ ಪ್ರಕ್ಷುಬ್ಧತೆ ಇಲ್ಲದೆ ಒಂದು ದ್ರವದ ಹರಿವು‌ (ಹರಿಯುವಿಕೆ).

Lamina

ಲ್ಯಾಮಿನಾ – ತೆಳುಹಾಳೆ/ ತೆಳು ಹಲಗೆ – ಯಾವುದಾದರೂ ವಸ್ತುವಿನ‌ ತೆಳುಹಾಳೆ ಅಥವಾ ತೆಳು ಹಲಗೆ.

ಆಫ್ರಿಕಾದ ಒಂದು ಗಾದೆ ಮಾತಿನ ಕನ್ನಡ ಅನುವಾದ – ಯುವಕರು ಹೆಚ್ಚು ವೇಗವಾಗಿ ನಡೆಯುತ್ತಾರೆ, ಆದರೆ ರಸ್ತೆ ಗೊತ್ತಿರುವುದು ಹಿರಿಯರಿಗೆ.

ಯೌವನದಲ್ಲಿ ಹುರುಪು, ಉತ್ಸಾಹ ಹೆಚ್ಚು, ಆದರೆ ತಾಳ್ಮೆ ಕಡಿಮೆ. ಹೀಗಾಗಿ, ಏನು ಮಾಡಿದರೂ ಅವಸರವಸರವಾಗಿ, ದುಡುಕು, ರಭಸಗಳಿಂದ ಅದರಲ್ಲಿ ತೊಡಗುವುದು ಯುವಕ-ಯುವತಿಯರ ಸ್ವಭಾವವಾಗಿರುತ್ತದೆ. ಆದರೆ, ಜೀವನದಲ್ಲಿ ನೊಂದು ಬೆಂದು ಕಷ್ಟ-ಸುಖ ಅನುಭವಿಸಿದ ಹಿರಿಯರು ಪ್ರಬುದ್ಧ ರೀತಿಯಲ್ಲಿ ವ್ಯವಹರಿಸುತ್ತಾರೆ ; ಯಾವ ರಸ್ತೆಯಲ್ಲಿ ಹೋಗಬೇಕು, ಯಾವುದರಲ್ಲಿ ಹೋಗಬಾರದು ಎಂಬುದು ಅವರಿಗೆ ಗೊತ್ತಿರುತ್ತದೆ. ಈ ಕಾರಣದಿಂದಾಗಿ,  ಹಿರಿಯರ ರಸ್ತೆಯ ಜ್ಞಾನದಿಂದ ಕಿರಿಯರು ಕಲಿತರೆ, ಹಾಗೂ ಯುವಕರ ಹುರುಪು ಉತ್ಸಾಹಗಳನ್ನು ತಮ್ಮ ಅನುಭವದ ಮುಖೇನ ಹಿರಿಯರು ಸರಿದಾರಿಗೆ ಹಚ್ಚಿದರೆ ಬದುಕು ಸುಂದರವಾಗುತ್ತದೆ‌. […]

‘ಸಿಮ್’ ಗೆ ಕನ್ನಡ ಪದ ಯಾವುದು?

ಸಂಚಾರಿ ದೂರವಾಣಿಯನ್ನು ಬಳಸದೆ ಇರುವವರು ತೀರಾ ಅಪರೂಪ ಎನ್ನುವ ಕಾಲ ಇದು. ‌ಈ ದೂರವಾಣಿಯ ಮಾತು ಬಂದಾಗಲೆಲ್ಲ ನಾವು ಬಳಸುವ ಒಂದು ಪದ ಅಂದರೆ ಸಿಮ್. “ನಿಮ್ಮ‌ ಸಿಮ್ ಯಾವುದು? ಏರ್ಟೆಲ್ಲಾ, ಜಿಯೋನಾ, ಬಿಎಸ್ಎನ್ನೆಲ್ಲಾ?” “ಫೋನು ಕಳ್ದು ಹೋಯ್ತಾ? ಬಿಡಿ, ಕಳ್ಳ ಬೇರೆ ಸಿಮ್ ಹಾಕಿರ್ತಾನೆ” “ನಂಗೆ ಇದೇ ನಂಬರ್ ಗೆ ಬೇರೆ ಸಿಮ್ ಸಿಗುತ್ತಾ?” “ನಿಮ್ಮ ಫೋನ್ ನಲ್ಲಿ ಒಂದು ಸಿಮ್ ಇದೆಯಾ? ಎರಡಾ?” ……. ಹೀಗೆ ನಾವು ಈ ಸಿಮ್ ಪದವನ್ನು ಬಳಸುತ್ತಲೇ ಇರುತ್ತೇವೆ. […]

Lambert

ಲ್ಯಾಂಬರ್ಟ್ – ಲ್ಯಾಂಬರ್ಟ್ – ಪ್ರಕಾಶಮಾನೀಯತೆ ಅಥವಾ ದೀಪ್ತತೆಯ ಹಳೆಯ ಮೂಲಮಾನ ಇದು‌. (ಲ್ಯಾಂಬರ್ಟ್ ಎಂಬುದು, ಹದಿನೆಂಟನೆಯ ಶತಮಾನದಲ್ಲಿ ಜೀವಿಸಿದ್ದ, ಜೊಹಾನ್ ಹೆನ್ರಿಚ್ ಲ್ಯಾಂಬರ್ಟ್ ಎಂಬ,  ಮಲ್ ಹೌಸ್ ಪ್ರದೇಶ ( ಇಂದಿನ ಫ್ರಾನ್ಸ್) ಕ್ಕೆ ಸೇರಿದ, ಭೌತಶಾಸ್ತ್ರ, ಗಣಿತ ಹಾಗೂ ತತ್ವಶಾಸ್ತ್ರ ಪರಿಣತ ವಿಜ್ಞಾನಿಯ ನೆನಪಿನಲ್ಲಿ ಇಟ್ಟ ಹೆಸರು).

Page 19 of 139

Kannada Sethu. All rights reserved.