Interference

ಇಂಟರ್ಫೆರೆನ್ಸ್ – ಅಡ್ಡ ಹಾಯುವಿಕೆ –  ಒಂದು‌ ಅಲೆಯ ಮೇಲೆ ಇನ್ನೊಂದು ಅಲೆಯು ಹಾಯ್ದಾಗ ಉಂಟಾಗುವ ಪರಿಣಾಮ.

Intensifier

ಇಂಟೆನ್ಸಿಫೈಯರ್ – ತೀಕ್ಷ್ಣಕಾರಕ – ಛಾಯಾಚಿತ್ರ ಮಾಧ್ಯಮದ ಧನಾತ್ಮಕ ಅಥವಾ ಋಣಾತ್ಮಕ ಬಿಂಬವನ್ನು ತೀಕ್ಷ್ಣ ಗೊಳಿಸುವ ಅಥವಾ ಬಲಪಡಿಸುವ ವಸ್ತು.

Integrator

ಇಂಟಿಗ್ರೇಟರ್ – ಸಂಕಲನ( ಕೂಡುವ) ಯಂತ್ರ – ನಿರಂತರ ಕೂಡುವಿಕೆ  ಎಂಬ ಗಣಿತಕ್ರಿಯೆಯನ್ನು ಮಾಡಲು ಬಳಸುವ ಯಂತ್ರಚಾಲಕ‌ ಅಥವಾ ವಿದ್ಯುತ್ ಉಪಕರಣ.

Integrating meter 

ಇಂಟಿಗ್ರೇಟಿಂಗ್ ಮೀಟರ್ – ಸಂಕಲನ ಮಾಪಕ – ಅಳೆದಂತಹ ಒಂದು‌ ಪರಿಮಾಣವನ್ನು ಕಾಲಕ್ಕೆ ಸಂಬಂಧಿಸಿದ ರೀತಿಯಲ್ಲಿ ಸಂಕಲಿಸುವ ಉಪಕರಣ.

International date line

ಇಂಟರ್ನ್ಯಾಷನಲ್ ಡೇಟ್ ಲೈನ್ – ಅಂತಾರಾಷ್ಟ್ರೀಯ ದಿನಾಂಕ ರೇಖೆ – ಉತ್ತರ ಮತ್ತು ದಕ್ಷಿಣ ಧ್ರುವಗಳನ್ನು ಸೇರಿಸುವ ಒಂದು ಕಲ್ಪಿತ ರೇಖೆ. ಇದು ಪೆಸಿಫಿಕ್‌ ಸಾಗರದ ಮೂಲಕ ಚಲಿಸುತ್ತಾ 180 ಡಿಗ್ರಿ ಅಕ್ಷಾಂಶವನ್ನು ಅನುಸರಿಸುತ್ತದೆ. ಒಂದು ದಿನದ ಪ್ರಾರಂಭ ಮತ್ತು ಕೊನೆಯನ್ನು ಗುರುತಿಸಲು ಈ‌ ರೇಖೆಯನ್ನು ಇಟ್ಟುಕೊಳ್ಳಬಹುದೆಂದು ಅಂತಾರಾಷ್ಟ್ರೀಯವಾಗಿ ಅಂಗೀಕರಿಸಲಾಗಿದೆ.

Interaction

ಇಂಟರ್ಯಾಕ್ಷನ್ – ಅಂತರ್ ಕ್ರಿಯೆ – ಎರಡು ಅಥವಾ ಅದಕ್ಕಿಂತ ಹೆಚ್ಚು ವಸ್ತುಗಳ ಅಥವಾ ವ್ಯವಸ್ಥೆಗಳ ಪರಸ್ಪರ 

 ಪರಿಣಾಮ. ಇದರಲ್ಲಿ ಗುರುತ್ವಾಕರ್ಷಣೆಯ, ವಿದ್ಯುತ್ ಕಾಂತೀಯ, ಪ್ರಬಲ ಹಾಗೂ ದುರ್ಬಲ ಎಂದು ನಾಲ್ಕು ವಿಧಗಳಿರುತ್ತವೆ.

Insulator 

ಇನ್ಸ್ಯುಲೇಟರ್ – ಪ್ರತಿರೋಧಕ – ತುಂಬ ಹೆಚ್ಚು ವಿದ್ಯುತ್ ಪ್ರತಿರೋಧವನ್ನು ಹೊಂದಿರುವ ವಸ್ತು. ಬಹುತೇಕ ಅಲೋಹ ವಸ್ತುಗಳು (ಲೋಹವಲ್ಲದ ವಸ್ತುಗಳು) ಒಳ್ಳೆಯ ವಿದ್ಯುತ್ ನಿರೋಧಕಗಳಾಗಿರುತ್ತವೆ.

Integrated circuit

 ಇಂಟಿಗ್ರೇಟೆಡ್‌ ಸರ್ಕ್ಯೂಟ್ – ಸಂಕಲಿತ ವಿದ್ಯುನ್ಮಂಡಲ – ಅನೇಕ ಬೇರೆ ಬೇರೆ ಅಂಗಗಳು‌ ತನ್ನೊಳಗೆ ಒಂದು ಘಟಕವಾಗುವಂತೆ ಸಂಕಲಿಸಿದ ವಿನ್ಯಾಸ ಇರುವಂತಹ ವಿದ್ಯುನ್ಮಂಡಲ.

Insulator, thermal

ಇನ್ಸ್ಯುಲೇಟರ್, ಥರ್ಮಲ್ – ಪ್ರತಿರೋಧಕ, ಉಷ್ಣತಾ –

ಉಷ್ಣತೆಯನ್ನು ಸರಾಗವಾಗಿ‌ (ಕೂಡಲೇ ಎಂಬಂತೆ) ತಮ್ಮೊಳಗೆ ಮತ್ತು ತಮ್ಮ ಮೂಲಕ ಹರಿಯಲು ಬಿಡದ ವಸ್ತುಗಳು.

Insulation, electrical

ಇನ್ಸ್ಯುಲೇಷನ್, ಎಲೆಕ್ಟ್ರಿಕಲ್ – ಪ್ರತಿರೋಧ, ವಿದ್ಯುತ್ತೀಯ – (ರಕ್ಷಣೆಗಾಗಿ ಅಥವಾ ಮಂಡಲ ಮೊಟಕಾಗದಂತೆ ( ಶಾರ್ಟ್ ಸರ್ಕ್ಯೂಟ್ ಆಗದಂತೆ) ತಡೆಯಲಿಕ್ಕಾಗಿ) ವಿದ್ಯುತ್ ವಾಹಕಗಳಿಗೆ ಹೊದಿಸಲು ಅಥವಾ ಅವುಗಳನ್ನು ಪ್ರತ್ಯೇಕಿಸಲು ಅವಾಹಕ ವಸ್ತುಗಳನ್ನು ಬಳಸುವುದು.

Page 5 of 10

Kannada Sethu. All rights reserved.