ಕನ್ನಡ ಕನ್ನಡಿ

ವಾರಕ್ಕೆ ಐದು ಪದಗಳಂತೆ, ತಾಂತ್ರಿಕ/ವೈಜ್ಞಾನಿಕ ಕ್ಷೇತ್ರದ ಪದಗಳಿಗೆ ಕನ್ನಡ ಸಂವಾದಿ ಪದಗಳ ಪರಿಚಯ ಮಾಡುವ ಅಂಕಣವಿದು. ಕನ್ನಡದಲ್ಲಿ ಹೊಸ ಜ್ಞಾನ ನಿರ್ಮಾಣ ಆಗಬೇಕೆಂದರೆ ಅದರ ಪದಕೋಶವು ವಿಸ್ತಾರಗೊಳ್ಳಬೇಕು. ಈ ದಿಸೆಯಲಿನ್ಲ ಕಿರುಪ್ರಯತ್ನವೇ ಈ ಅಂಕಣ.

Glass resistor

ಗಾಜಿನ ಪ್ರತಿರೋಧಕ – ಒಂದು ಗಾಜಿನ ಕೊಳವೆ ಹಾಗೂ ಹಾಗೂ ತನ್ನ  ಮೇಲ್ಮೈಯಲ್ಲಿ ಚೂಪುತುದಿಯುಳ್ಳ ಇಂಗಾಲದ ಪತಿರೋಧಕವನ್ನು ಹೊಂದಿರುವ ಒಂದು ವಿದ್ಯುತ್ ಪ್ರತಿರೋಧಕ.

Glass wool

ಗ್ಲಾಸ್ ಊಲ್ – ಗಾಜಿನ ಉಣ್ಣೆ – ತುಂಬಾ ನಾಜೂಕಾದ ಗಾಜಿನ ದಾರಗಳಿಂದ ಆದ ವಸ್ತು. ಇದು ಹತ್ತಿಯ ತರಹವೇ ಇರುತ್ತದೆ. ಇದನ್ನು ಸೋಸುವಿಕೆಯಲ್ಲಿ, ಹಾನಿಕಾರಕ ದ್ರವಗಳನ್ನು ಹೀರಿಕೊಳ್ಳಬೇಕಾದ ಸನ್ನಿವೇಶಗಳಲ್ಲಿ ಮತ್ತು ಉಷ್ಣ ನಿರೋಧನೆಯಲ್ಲಿ ಬಳಸುತ್ತಾರೆ.

Gluvon 

ಗ್ಲೂವೋನ್ – ಗ್ಲೂವೋನು – ಪ್ರೋಟಾನು ಮತ್ತು ನ್ಯೂಟ್ರಾನುಗಳೊಳಗಿನ ಕ್ವಾರ್ಕುಗಳು ಎಂಬ ಅತಿ ಚಿಕ್ಕ ಕಣಗಳ ನಡುವೆ ವಿನಿಮಯವಾಗಿ ಅವುಗಳನ್ನು ಬೆಸೆಯುವ ಕಾಲ್ಪನಿಕ ಕಣಗಳು.

Gold leaf electroscope

ಗೋಲ್ಡ್ ಲೀಫ್ ಎಲೆಕ್ಟ್ರೋಸ್ಕೋಪ್ – ಚಿನ್ನದೆಲೆಯ ವಿದ್ಯುದ್ದರ್ಶಕ – ನಿಜವಾದ ಚಿನ್ನದಿಂದ ಮಾಡಿದ ಅತಿ ತೆಳ್ಳಗಿನ ಎಲೆಯಾಕಾರದ ಎರಡು ಚಿನ್ನದ ರೇಕುಗಳನ್ನು ಹೊಂದಿದ್ದು, ವಿದ್ಯುತ್ ಹರಿವನ್ನು ಅಥವಾ ವಿಸರ್ಜನೆಯನ್ನು ಪತ್ತೆ ಹಚ್ಚಲು ಬಳಸುವ ಒಂದು ಉಪಕರಣ.

Goniometer 

ಗೋನಿಯೋಮೀಟರ್ – ಕೋನಮಾಪಕ – (ಹರಳುಗಳ) ಕೋನಗಳನ್ನು ಅಳೆಯುವ ಉಪಕರಣ.

Grain

ಗ್ರೈನ್ – ದ್ರವ್ಯರಾಶಿಯ ಬ್ರಿಟಿಷ್ ಮೂಲಮಾನ. 1 ಗ್ರೈನ್ = 0.648 ಗ್ರಾಂ = 0.0001428571 ಪೌಂಡ್.

Gram molecule

ಗ್ರಾಂ ಮೋಲಿಕ್ಯೂಲ್ – ಅಣು‌ ಗ್ರಾಂ‌ – ಒಂದು ವಸ್ತುವಿನ‌ ಅಣುತೂಕವನ್ನು ಗ್ರಾಂಗಳಲ್ಲಿ ವ್ಯಕ್ತಪಡಿಸುವ ನೆಲೆ.

Gram weight

ಗ್ರಾಂ ವ್ಹೈಟ್ – ಗ್ರಾಂ ವ್ಹೈಟ್ – ಇದು ಬಲದ ಒಂದು ಮೂಲಮಾನ.‌ ಏಕಘಟಕ ದ್ರವ್ಯರಾಶಿಯು ಭೂಮಿಯ ಆಕರ್ಷಣೆಯಿಂದಾಗಿ ಅನುಭವಿಸುವ ಬಲವನ್ನು ಇದು ಸೂಚಿಸುತ್ತದೆ. 

Grating

ಗ್ರೇಟಿಂಗ್ – ಪಟ್ಟಿ ಪಟ್ಟಿ ಗಾಜು – ತುಂಬ ಹತ್ತಿರ ಹತ್ತಿರ ಇರುವ ಸಮಾನಂತರ ರೇಖೆಗಳನ್ನು ಪಟ್ಟಿ ಪಟ್ಟಿಯಾಗಿ ಕೊರೆಯಲ್ಪಟ್ಟ ಒಂದು ಗಾಜಿನ ಫಲಕ. ಬೆಳಕಿನ ವರ್ಣಪಟಲವನ್ನು ಉತ್ಪತ್ತಿ ಮಾಡಲು ಹಾಗೂ ಅದರಲ್ಲಿರುವ ತರಂಗಾಂತರಗಳನ್ನು ಅಧ್ಯಯನ ಮಾಡಲು ಇದನ್ನು ಬಳಸುತ್ತಾರೆ.

Gravitation

ಗ್ರ್ಯಾವಿಟೇಷನ್ – ಗುರುತ್ವ – ನ್ಯೂಟನ್ ಅವರು ಗುರುತ್ವ ನಿಯಮವನ್ನು‌ ಪ್ರತಿಪಾದಿಸಿದ್ದಾರೆ. ಎರಡು ದ್ರವ್ಯರಾಶಿಗಳ‌‌ ನಡುವಿನ‌ ಗುರುತ್ವಾಕರ್ಷಣೆಯ ಬಲವು‌ ಅವುಗಳಲ್ಲಿನ‌‌ ಪ್ರತಿಯೊಂದು ದ್ರವ್ಯರಾಶಿಯ ಪ್ರಮಾಣಕ್ಕೆ ಸಮಾನುಪಾತದಲ್ಲಿ ಹಾಗೂ ಅವುಗಳ ನಡುವಿನ‌ ದೂರದ ವರ್ಗಕ್ಕೆ ವಿಲೋಮ‌ ಅನುಪಾತದಲ್ಲಿ ಇರುತ್ತದೆ.

Page 58 of 92

Kannada Sethu. All rights reserved.