ಯಾವುದೇ ಹಂತದ ಕನ್ನಡ ಭಾಷಾ ತರಗತಿಗಳಲ್ಲಾದರೂ ಅಧ್ಯಾಪಕರು ತಮ್ಮ ವಿದ್ಯಾರ್ಥಿಗಳು ಅಕ್ಷರಗಳು, ಪದಗಳು, ವಾಕ್ಯಗಳನ್ನು ಸರಿಯಾಗಿ ಉಚ್ಚರಿಸಬೇಕು ಎಂಬ ನಿರೀಕೆ ಹೊಂದಿರುತ್ತಾರೆ, ಹೀಗಾಗಿ ಮಕ್ಕಳು ತಪ್ಪು ಮಾಡಿದಾಗ ಅದನ್ನು ತಿದ್ದುತ್ತಿರುತ್ತಾರೆ. ನಾನು ಕೂಡ ಇದಕ್ಕೆ ಹೊರತಲ್ಲ. ನಾನು ತೆಗೆದುಕೊಳ್ಳುವ ಪದವಿ ಹಂತದ ತರಗತಿಗಳಲ್ಲಿ ವಿದ್ಯಾರ್ಥಿನಿಯರನ್ನು ಆಗಾಗ ತಮ್ಮ ಸಹಪಾಠಿಗಳ ಎದುರಿಗೆ ಗಟ್ಟಯಾಗಿ ಓದಲು ಹೇಳುತ್ತಿರುತ್ತೇನೆ, ಮತ್ತು ಅವರು ಮಾಡುವ ಅಕಾರ-ಹಕಾರ, ಸಕಾರ-ಶಕಾರ, ಒತ್ತಕ್ಷರ, ದೀರ್ಘಾಕ್ಷರ ದೋಷ, ಲೇಖನ ಚಿಹ್ನೆಗಳನ್ನು ಬಳಸದೆ ಓದುವುದು ಇಂತಹ ತಪ್ಪುಗಳನ್ನು ತಿದ್ದುತ್ತಿರುತ್ತೇನೆ. ಗಮನೀಯ […]
ಕನ್ನಡ ಪ್ರಸಂಗ
ಇದು ಲೇಖಕಿಯು ಕನ್ನಡದೊಂದಿಗೆ ಒಡನಾಡಿದ ಅನುಭವಗಳ ಕಥನವಾಗಿದೆ. ಕನ್ನಡ ಜಗತ್ತು ತನಗೆ ಕಲಿಸಿದ ಹಾಗೂ ಕನ್ನಡ ಭಾಷೆ ಹಾಗೂ ಸಾಹಿತ್ಯಗಳನ್ನು ತಾನು ಕಲಿಸಿದ ದಾರಿಯಲ್ಲಿನ ವಿವಿಧ ಅನುಭವಗಳನ್ನು ಓದುಗರೊಂದಿಗೆ ಹಂಚಿಕೊಳ್ಳುವ ಪ್ರಯತ್ನವಾಗಿರುತ್ತದೆ ಇದು. ವಾರಕ್ಕೆ ಒಂದು ಕನ್ನಡ ಪ್ರಸಂಗದಂತೆ ಈ ಅಂಕಣವು ಮೂಡಿ ಬರಲಿದೆ.
Like us!
Follow us!