ಕನ್ನಡ ವಿವೇಕ

ಬದುಕನ್ನು ಹಸನು ಮಾಡಲು ಕನ್ನಡ ಭಾಷೆ, ಸಂಸ್ಕೃತಿಯು ನಮಗೆ ನೀಡಿದ ಕೆಲವು ಗಾದೆ, ಸೂಕ್ತಿ, ನಾಣ್ಣುಡಿ, ಲೋಕೋಕ್ತಿ, ನಲ್ವಾತು ಇವುಗಳಲ್ಲಿ ವಾರಕ್ಕೆ ಒಂದರ ಕಿರು ಪರಿಚಯವನ್ನು ಈ ಅಂಕಣದಲ್ಲಿ ಮಾಡಿಕೊಡಲಾಗುತ್ತದೆ.

ಕನ್ನಡ ಗಾದೆಮಾತು –    ಹಣ ಕಂಡ್ರೆ ಹೆಣಾನೂ ಬಾಯಿ ಬಿಡುತ್ತೆ‌. 

ಒಂದು  ಉತ್ಪ್ರೇಕ್ಷೆಯನ್ನು ಬಳಸಿ  ಲೋಕವ್ಯವಹಾರದ ಸತ್ಯವನ್ನು ಹೇಳುವಂತಹ ಒಂದು ಗಾದೆಮಾತು ಇದು. ಹಣವೆನ್ನುವುದು ಜನರ ಬದುಕಿಗೆ ಅನಿವಾರ್ಯವಾದ ಸಂಗತಿ‌. ಒಂದು ಬೆಂಕಿಪೊಟ್ಟಣದಿಂದ ಹಿಡಿದು ದೊಡ್ಡಬಂಗಲೆಯ ತನಕ ಯಾವುದನ್ನು ಕೊಳ್ಳಲಾದರೂ ಹಣ ಬೇಕೇ ಬೇಕು. ಹಣ ಇದೆ ಅಂದರೆ ಅದರ ಅರ್ಥ ಇಡೀ ಲೋಕದ ಭೌತಿಕ ಸಂಪತ್ತಿನ  ಖಜಾನೆಯ  ಬಾಗಿಲು ತೆಗೆಯಿತು ಎಂದೇ ಅರ್ಥ. ಅದಕ್ಕಾಗಿಯೇ ಜನರು ಹಣಕ್ಕಾಗಿ ಬಹುವಾಗಿ ಆಶಿಸುತ್ತಾರೆ, ಮತ್ತು ಹೇಗಾದರೂ ಮಾಡಿ ಅದನ್ನು ತಮ್ಮದಾಗಿಸಿಕೊಳ್ಳಲು ಹರಸಾಹಸ ಪಡುತ್ತಾರೆ. ಜನ ನೇರಮಾರ್ಗ ಮಾತ್ರವಲ್ಲ, ವಾಮಮಾರ್ಗವನ್ನು ಹಿಡಿದಾದರೂ […]

ಕನ್ನಡ ಗಾದೆಮಾತು – ಕಪ್ಪೇನ ತಕ್ಕಡೀಲಿ ಹಾಕಿದ್ಹಂಗೆ.

ಕನ್ನಡ ಭಾಷಾಬಳಕೆಯ ಸಂದರ್ಭದಲ್ಲಿ ಅನೇಕ ಸಲ ಬಳಕೆಯಾಗುವ ಗಾದೆ ಮಾತಿದು.‌ ಕಪ್ಪೆಗಳು ಸದಾ ಕುಪ್ಪಳಿಸುವ, ನೆಗೆಯುತ್ತಿರುವ ಚಂಚಲ ಜೀವಿಗಳಾದದ್ದರಿಂದ ಅವುಗಳನ್ನು ತೂಗಲು ಅಥವಾ ಇನ್ನು ಯಾವುದೇ ಉದ್ದೇಶದಿಂದಲಾಗಲೀ ಒಂದು ತಕ್ಕಡಿ ತಟ್ಟೆಯಲ್ಲಿ ಕೂರಿಸಲು ಸಾಧ್ಯ ಆಗುವುದಿಲ್ಲ. ಇದಕ್ಕೆ ಕಾರಣವೇನೆಂದರೆ, ಒಂದು ಕಪ್ಪೆಯನ್ನಿಟ್ಟರೆ ಇನ್ನೊಂದು ಕಪ್ಪೆ ಹೊರಗೆ ಎಗರುತ್ತದೆ. ಇದೇ ರೀತಿಯಲ್ಲಿ ದೊಡ್ಡ ಕೂಡುಕುಟುಂಬಗಳು ಪ್ರವಾಸಕ್ಕೆ ಹೊರಟಾಗ, ಯಾವುದಾದರೂ ಕಾರ್ಯಕ್ರಮವನ್ನು ಆಯೋಜಿಸಲು ಜನ ಒಟ್ಟು ಸೇರುವಾಗ, ಭಿನ್ನ ಭಿನ್ನ ಹಿನ್ನೆಲೆಯ ಜನರು ಸೇರಿ ಒಟ್ಟಾಗಿ ಏನಾದರೂ ಮಾಡಲು ಪ್ರಯತ್ನ […]

ಕನ್ನಡ ಗಾದೆಮಾತು – ಕಾಮಾಲೆ ಕಣ್ಣಿಗೆ ಲೋಕವೆಲ್ಲ ಹಳದಿ.

ಕಾಮಾಲೆ ರೋಗ ಬಂದರೆ ಕಣ್ಣು ಹಳದಿಯಾಗುವುದು ನಮಗೆ ಗೊತ್ತು. ‌ಈ ರೋಗ ಬಂದವರಿಗೆ ಲೋಕವೆಲ್ಲ ಹಳದಿಯಾಗಿ ಕಂಡರೆ ಅದು ಅವರ ಕಣ್ಣಿನ ಪ್ರಶ್ನೆಯೇ ಹೊರತು ಲೋಕದ ಸಮಸ್ಯೆ ಅಲ್ಲ.‌ ಇದೇ ರೀತಿಯಲ್ಲಿ ಕೆಲವು ಸಲ ಜನ ತಮ್ಮಲ್ಲಿ ದೋಷ ಇಟ್ಟುಕೊಂಡು‌ ಆ ದೋಷವನ್ನು ಲೋಕದ ಜನರಿಗೆಲ್ಲಾ ಆರೋಪಿಸುತ್ತಾರೆ. ಭ್ರಷ್ಟ ಮನಸ್ಸುಗಳು ಹೀಗೆ ಮಾಡುವುದು ಹೆಚ್ಚು.‌ ಇಂತಹ ಮನಸ್ಸುಗಳಿಂದ ನಾವು ದೂರ ಇರುವುದು ಒಳಿತು. Kannada proverb – Kaamale kannige lokavella haladi ( For the jaundice […]

ಕನ್ನಡ ಗಾದೆಮಾತು – ಹೋದ್ಯಾ ಪಿಶಾಚಿ ಅಂದ್ರೆ ಬಂದೆ ಗವಾಕ್ಷೀಲಿ.

ಕನ್ನಡದ ಹತ್ತು ಅತ್ಯಂತ ಜನಪ್ರಿಯ ಗಾದೆ ಮಾತುಗಳನ್ನು ಪಟ್ಟಿ ಮಾಡುವುದಾದರೆ ಆ ಪಟ್ಟಿಯಲ್ಲಿ  ಈ ಗಾದೆ ಮಾತು ಕೂಡ ಸೇರುತ್ತದೆ ಅನ್ನಿಸುತ್ತೆ; ಏಕೆಂದರೆ ಕನ್ನಡಿಗರು ಮತ್ತೆ ಮತ್ತೆ ಬಹುವಾಗಿ ಬಳಸುವ ಒಂದು ಗಾದೆ ಮಾತಿದು. ಹಿಂಸೆ ಕೊಡುತ್ತಿದ್ದ ಪಿಶಾಚಿಯೊಂದು ಬಾಗಿಲಿಂದ ಹೋಯಿತಪ್ಪ, ಸದ್ಯ! ಅಂದುಕೊಳ್ಳುವಷ್ಟರಲ್ಲಿ ಅದು ಗವಾಕ್ಷಿಯಿಂದ (ವೆಂಟಿಲೇಟರ್) ವಾಪಸ್ಸು ಬಂದರೆ, ಅದರಿಂದ ತೊಂದರೆ ಅನುಭವಿಸುತ್ತಿರುವವರಿಗೆ ಹೇಗಾಗಬೇಡ!  ಇದೇ ರೀತಿಯಲ್ಲಿ,  ನಮಗೆ ಸದಾ ಕಿರಿಕಿರಿ, ತೊಂದರೆ ಮಾಡುತ್ತಿದ್ದ ಸಂಗತಿಯೊಂದು ನಮ್ಮ ಬದುಕಿನಿಂದ ಹೋಯಿತು, ಮರೆಯಾಯಿತು ಅಂದುಕೊಳ್ಳುವಷ್ಟರಲ್ಲಿ, ಅದು […]

ಕನ್ನಡ ಗಾದೆಮಾತು – ಆಗಿಷ್ಟು ಉಂಡು ಈಗಿಷ್ಟು ಉಂಡು ರೋಗಿಷ್ಟನಾದ.

ಆರೋಗ್ಯವನ್ನು ಕಾಪಾಡಿಕೊಳ್ಳುವ ಇಚ್ಛೆ ಇರುವವರು ಇಟ್ಟುಕೊಳ್ಳಬಾರದ ಒಂದು ಅಭ್ಯಾಸದ ಬಗ್ಗೆ ಗಮನ ಸೆಳೆಯುವ, ಕನ್ನಡದ ಒಂದು ಗಾದೆಮಾತು ಇದು. ನಾವು  ಸೇವಿಸುವ ಎರಡು ಊಟಗಳ/ತಿಂಡಿಗಳ  ನಡುವೆ ಸುಮಾರು ಐದು ಗಂಟೆಯ ಬಿಡುವು ಇರಬೇಕೆಂದು ಆರೋಗ್ಯತಜ್ಞರು ಹೇಳುತ್ತಾರೆ. ‌ಏಕೆಂದರೆ ತೆಗೆದುಕೊಂಡ ಆಹಾರವನ್ನು ಜೀರ್ಣವಾಗಿಸಿ ಅದರಲ್ಲಿನ ಪೋಷಕಾಂಶಗಳನ್ನು ರಕ್ತಗತವಾಗಿಸಲು ನಮ್ಮ‌ ಜೀರ್ಣಾಂಗಗಳಿಗೆ ಅಷ್ಟು ಸಮಯಾವಕಾಶ ಬೇಕಾಗುತ್ತದೆ. ಆದರೆ ನಾವು ಗಂಟೆಗೊಮ್ಮೆ, ಅರ್ಧಗಂಟೆಗೊಮ್ಮೆ ಏನನ್ನಾದರೂ ತಿನ್ನುತ್ತಲೇ ಇದ್ದರೆ ನಮ್ಮ ಜೀರ್ಣಾಂಗಗಳ ಮೇಲೆ  ನಿರಂತರ ಒತ್ತಡ ಬಿದ್ದು ಜೀರ್ಣಕ್ರಿಯೆಗೆ ತೊಂದರೆಯಾಗಿ ಆರೋಗ್ಯ ಕೆಡುತ್ತದೆ. ಅದಕ್ಕಾಗಿಯೇ […]

ಕನ್ನಡ ಗಾದೆಮಾತು – ಹಾಸಿಗೆ ಇದ್ದಷ್ಟು ಕಾಲು ಚಾಚು.‌

ಕನ್ನಡದ ಸುಪ್ರಸಿದ್ಧ ಗಾದೆ ಮಾತುಗಳಲ್ಲಿ ಇದೂ ಒಂದು. ನಮ್ಮ ಹಾಸಿಗೆ ಎಷ್ಟು ಉದ್ದ ಇದೆಯೋ ನಾವು ಅಷ್ಟು ಮಾತ್ರ‌ ಕಾಲು ಚಾಚಬೇಕು.  ಇಲ್ಲದಿದ್ದರೆ ಕಾಲು ಹಾಸಿಗೆಯಿಂದ ಆಚೆ ಹೋಗಿ ದೇಹಕ್ಕೆ ಅನಾನುಕೂಲವುಂಟಾಗುತ್ತದೆ. ಇದೇ ರೀತಿಯಲ್ಲಿ, ನಾವು ನಮ್ಮ ಹಣಕಾಸಿನ ಸ್ಥಿತಿಗತಿ ಎಷ್ಟರ ಮಟ್ಟಿಗೆ ಇದೆಯೋ ಅಷ್ಟರ ಮಟ್ಟಿಗೆ ನಮ್ಮ ಖರ್ಚುವೆಚ್ಚಗಳನ್ನು ಮಿತಿಯಲ್ಲಿರಿಸಿಕೊಳ್ಳಬೇಕು‌. ನಮ್ಮ ಹತ್ತಿರ ಇಲ್ಲದ ಹಣವನ್ನು ಸಾಲಸೋಲ ಮಾಡಿ ಖರ್ಚು ಮಾಡಿದರೆ ಮುಂದೆ ನಾವು ಕಷ್ಟಕ್ಕೆ ಸಿಕ್ಕಿಹಾಕಿಕೊಳ್ಳುವುದು ಖಂಡಿತ. ಹೀಗೆ ಈ ಗಾದೆಮಾತು ಜೀವನಕ್ಕೆ ತುಂಬ […]

ಕನ್ನಡ ಗಾದೆಮಾತು – ಯುಕ್ತಿಯ ಮಾತು ಮಕ್ಕಳಿಂದಾದರೂ ತಿಳಿದುಕೊಳ್ಳಬೇಕು. 

ಜೀವನವೆಂಬ ವಿಶ್ವವಿದ್ಯಾಲಯದಲ್ಲಿ ಕಲಿಕೆ ಎಂಬುದು ಎಂದಿಗೂ ಮುಗಿಯುವುದಿಲ್ಲ. ನಾವು ಜೀವನ ನಡೆಸುವಾಗ ಅನೇಕ ಕಷ್ಟನಷ್ಟಗಳು, ಅನಿರೀಕ್ಷಿತ ಸವಾಲುಗಳು ಎದುರಾಗುತ್ತ, ನಮ್ಮ ತಿಳುವಳಿಕೆಯ ಮಟ್ಟವನ್ನು ನಾವೇ ಪ್ರಶ್ನಿಸಿಕೊಳ್ಳುವಂತೆ ಮಾಡುತ್ತವೆ. ಹೀಗಿರುವಾಗ ನಾವು ಕಲಿಕೆಯನ್ನು ನಿಲ್ಲಿಸುವ ಪ್ರಶ್ನೆಯೇ ಬರಬಾರದು, ಅಲ್ಲವೇ? ಒಂದು ಚಿಕ್ಕ ಮಗು ಕೂಡ ಕೆಲವು ಸಂದರ್ಭಗಳಲ್ಲಿ ನಮಗೆ ಗುರುವಾಗಬಹುದು. ಅದರಲ್ಲೂ ಭೂತ, ಭವಿಷ್ಯಗಳ ಚಿಂತೆ ಮಾಡದೆ ತಕ್ಷಣದ ವರ್ತಮಾನ ಕಾಲವನ್ನು ಅದು ಇರುವಂತೆಯೇ ಸವಿಯುವುದರಲ್ಲಿ ಮಕ್ಕಳು ಎತ್ತಿದ ಕೈ. ಹೀಗಾಗಿ ಜೀವನವನ್ನು ಚೆನ್ನಾಗಿ ನಡೆಸುವ ಯುಕ್ತಿಯ ಮಾತು […]

ಕನ್ನಡ ಗಾದೆಮಾತು – ಆಡಿ ಉಂಡ ಮೈ ಅಟ್ಟು ಉಂಡೀತೇ?

ಮನುಷ್ಯ ಅಂದರೆ ಅವನ ಮಾಡಿಕೊಂಡ ಅಭ್ಯಾಸಗಳ ಮೊತ್ತ ಅನ್ನುತ್ತಾರೆ.‌ ಆಟ ಆಡಿದಂತೆ ಬೇಜವಾಬ್ದಾರಿಯಿಂದ ಜೀವನ ಮಾಡುತ್ತಾ ಬೇರೆಯವರು ಮಾಡಿ ಇರಿಸಿದ್ದನ್ನು ಆರಾಮಾಗಿ ತಿನ್ನುತ್ತಾ ಜೀವನ ಮಾಡುವವರು, ಎಂದಾದರೂ ಕಷ್ಟ ಪಟ್ಟು ತಾವೇ ಅಟ್ಟು( ಅಡಿಗೆ ಮಾಡಿ) ಊಟ ಮಾಡುತ್ತಾರೆಯೇ? ಇಲ್ಲ. ಅವರು ಆ ಸಾಮರ್ಥ್ಯವನ್ನೇ ಬೆಳೆಸಿಕೊಂಡಿರುವುದಿಲ್ಲ.‌ ಜನರ ಜೀವನ ಕ್ರಮ, ಅಭ್ಯಾಸಗಳನ್ನು  ದೀರ್ಘ ಕಾಲ ಗಮನಿಸಿ ನಮ್ಮ ಹಿರಿಯರು ಬಳಕೆಗೆ ತಂದಿರುವ ಗಾದೆ ಮಾತು ಇದು, ಅವರ ಅನುಭವದ ಸಾರ. ಇದರಿಂದ ನಾವು ಕಲಿಯುವುದು ಬಹಳ ಇದೆ.  […]

ಕನ್ನಡ ಗಾದೆಮಾತು –   ಹೆತ್ತೋರಿಗೆ ಹೆಗ್ಗಣ ಮುದ್ದು, ಕೂಡಿದೋರಿಗೆ ಕೋಡಗ ಮುದ್ದು.

ಕನ್ನಡದ ಒಂದು ಬಹು ಜನಪ್ರಿಯ ಗಾದೆ ಮಾತಿದು‌.‌ ನಾವು ಲೋಕದಲ್ಲಿ ಗಮನಿಸುವಂತೆ ಹೆತ್ತವರಿಗೆ ಅವರ ಮಕ್ಕಳು ಎಷ್ಟೇ ಕುರೂಪಿ, ದಡ್ಡರು, ಉಡಾಳರು, ಮೂರ್ಖರಾಗಿದ್ದರೂ ಅವರು ಮುದ್ದೇ. ಹಾಗೂ ಮದುವೆ ಮಾಡಿಕೊಂಡವರಿಗೆ ಅವರ ಗಂಡ/ಹೆಂಡತಿ ಏನು ಮಾಡಿದರೂ ಸರಿಯೇ. ಕೋಡಗ ಅಂದರೆ ಕೋತಿ. ಕೋತಿಯಂತಿದ್ದರೂ, ಅದರಂತೆ ಆಡಿದರೂ ತಾವು ಕೈಹಿಡಿದವರನ್ನ ಜನ ಬಿಟ್ಟುಕೊಡುವುದಿಲ್ಲ  ಎಂದು ನಾವು ಗಮನಿಸಬಹುದು. ತಮ್ಮ ಮಕ್ಕಳು ಅಥವಾ ಜೀವನ ಸಂಗಾತಿಯ ತಪ್ಪನ್ನು ಜನ ಖಂಡಿಸದೆ ಒಪ್ಪಿಟ್ಟುಕೊಂಡಾಗ ಈ ಗಾದೆಮಾತನ್ನು ಬಳಸಲಾಗುತ್ತದೆ.      Kannada […]

ಕನ್ನಡ ಗಾದೆಮಾತು – ಕಾಣದ ಊರಿಗೆ ನಾಲಿಗೆಯೇ ದಾರಿ. 

ಹಳೆಯ ಕಾಲದಲ್ಲಿ ಅಂದರೆ ಗೂಗಲ್ ನಕ್ಷೆಗಳು ಇಲ್ಲದಿದ್ದ ಸಮಯದಲ್ಲಿ ಯಾರಾದರೂ ತಮಗೆ ಅಪರಿಚಿತವಾದ ಊರಿಗೆ ಹೋಗಬೇಕೆಂದರೆ ದಾರಿಯಲ್ಲಿ ಸಿಗುವ ಜನರನ್ನು ವಿಚಾರಿಸುತ್ತಾ, ವಿಚಾರಿಸುತ್ತಾ ಕೇಳುತ್ತಾ ಹೋಗಿ ತಲುಪುತ್ತಿದ್ದರು.  ನಾಚಿಕೆ, ಸಂಕೋಚ ಬಿಟ್ಟು‌ ಮನುಷ್ಯರೊಂದಿಗೆ ಬಾಯಿ ಬಿಟ್ಟು  ಮಾತಾಡಿ,  ಕೇಳುತ್ತಾ ಕೇಳುತ್ತಾ ಎಷ್ಟು ದೂರದ, ಅಪರಿಚಿತ ಊರನ್ನಾದರೂ ತಲುಪಿಬಿಡುತ್ತಿದ್ದರು. ಆದರೆ ಇಂದು ಬದಲಾಗಿರುವ ಕಾಲದಲ್ಲಿ ನಗರ ಪ್ರದೇಶಗಳಲ್ಲಂತೂ ಕೈಯಲ್ಲಿರುವ ಜಂಗಮವಾಣಿಯ ಗೂಗಲ್ಲೇ ದಾರಿ ತೋರುವ ಸಂಗಾತಿ ಆಗಿಬಿಟ್ಟಿದೆ. ಆದರೆ ಗೂಗಲ್ ಸೌಲಭ್ಯ ಸಿಗದ ಕಡೆಯಲ್ಲಿ :ಕಾಣದ ಊರಿಗೆ ಈಗಲೂ […]

Page 12 of 20

Kannada Sethu. All rights reserved.