ಕನ್ನಡದ ಪ್ರಸಿದ್ಧ ಗಾದೆಮಾತುಗಳಲ್ಲಿ ಒಂದು ಇದು. ಊರನ್ನು ಪರರ ದಾಳಿಯಿಂದ ಕಾಪಾಡುವಂಥದ್ದು ಕೋಟೆ. ದಾಳಿಕೋರರು ಪ್ರವೇಶಿಸದಂತೆ ಕೋಟೆಯ ಬಾಗಿಲನ್ನು ಭದ್ರ ಪಡಿಸುವುದು ರಾಜನು ನೇಮಿಸಿದ ಕಾವಲುಗಾರನ ಕೆಲಸ. ಆದರೆ ಕೋಟೆಯ ಬಾಗಿಲನ್ನು ನಿರ್ಲಕ್ಷ್ಯದಿಂದ ತೆಗೆದಿಟ್ಟು ದಾಳಿಕೋರರು ಬರಲು ಅವಕಾಶ ಮಾಡಿಕೊಟ್ಟು, ಅವರು ದಾಳಿ ಮಾಡಿ ಎಲ್ಲವನ್ನೂ ಲೂಟಿ ಹೊಡೆದು ಹೋದ ಮೇಲೆ ಕೋಟೆಯ ಬಾಗಿಲನ್ನು ಹಾಕಿದರೆ ಏನು ಪ್ರಯೋಜನ? ಹಾಗೆಯೇ ನಾವು ಮಾಡಬೇಕಾದ ಕೆಲಸಗಳನ್ನು, ತೆಗೆದುಕೊಳ್ಳಬೇಕಾದ ಜಾಗ್ರತೆಗಳನ್ನು ಅವು ಸಕಾಲಿಕವಾಗಿರುವಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ ನಮ್ಮ ಕೆಲಸ, ಜಾಗ್ರತೆಗಳು […]
ಕನ್ನಡ ವಿವೇಕ
ಬದುಕನ್ನು ಹಸನು ಮಾಡಲು ಕನ್ನಡ ಭಾಷೆ, ಸಂಸ್ಕೃತಿಯು ನಮಗೆ ನೀಡಿದ ಕೆಲವು ಗಾದೆ, ಸೂಕ್ತಿ, ನಾಣ್ಣುಡಿ, ಲೋಕೋಕ್ತಿ, ನಲ್ವಾತು ಇವುಗಳಲ್ಲಿ ವಾರಕ್ಕೆ ಒಂದರ ಕಿರು ಪರಿಚಯವನ್ನು ಈ ಅಂಕಣದಲ್ಲಿ ಮಾಡಿಕೊಡಲಾಗುತ್ತದೆ.
Like us!
Follow us!