ಕನ್ನಡ ವಿವೇಕ

ಬದುಕನ್ನು ಹಸನು ಮಾಡಲು ಕನ್ನಡ ಭಾಷೆ, ಸಂಸ್ಕೃತಿಯು ನಮಗೆ ನೀಡಿದ ಕೆಲವು ಗಾದೆ, ಸೂಕ್ತಿ, ನಾಣ್ಣುಡಿ, ಲೋಕೋಕ್ತಿ, ನಲ್ವಾತು ಇವುಗಳಲ್ಲಿ ವಾರಕ್ಕೆ ಒಂದರ ಕಿರು ಪರಿಚಯವನ್ನು ಈ ಅಂಕಣದಲ್ಲಿ ಮಾಡಿಕೊಡಲಾಗುತ್ತದೆ.

ಚಿಂತೆ ಮಾಡಿದರೆ ಸಂತೆ ಸಾಗೀತೇ?

ಮನುಷ್ಯನ ಮನಸ್ಸು ಯಾವುದಾದರೂ ಚಿಂತೆಗೆ ಬಿತ್ತೆಂದರೆ ಅವನ ಕೈಯಲ್ಲಿ ಯಾವ ಕೆಲಸವೂ ಸಾಗುವುದಿಲ್ಲ. ಸಂತೆಯಲ್ಲಾದರೂ ಅಷ್ಟೇ, ಮನೆಯಲ್ಲಾದರೂ ಅಷ್ಟೇ.  ಈ ಬದುಕು  ಸಹ ಒಂದು ರೀತಿಯಲ್ಲಿ ಸಂತೆ ಇದ್ದಂತೆ. ಜನ ಬರುತ್ತಾರೆ, ಹೋಗುತ್ತಾರೆ, ತಮ್ಮಲ್ಲಿರುವುದನ್ನು ಮಾರುತ್ತಾರೆ, ತಮಗೆ ಬೇಕಾದ್ದನ್ನು ಕೊಳ್ಳುತ್ತಾರೆ. ‌ಇಂತಹ ಗಡಿಬಿಡಿ ಗೌಜಿಯ ವಾತಾವರಣದಲ್ಲಿ ಮನುಷ್ಯನು‌ ಯಾವುದೋ ವಿಷಯದ ಬಗ್ಗೆ ಚಿಂತೆ ಮಾಡುತ್ತಾ ಕುಳಿತರೆ ವ್ಯಾಪಾರ ಸಾಗುವುದಿಲ್ಲ. ಹಾಗೆಯೇ ಯಾವ್ಯಾವುದಕ್ಕೋ ಚಿಂತೆ ಮಾಡುತ್ತಾ ಕುಳಿತಿದ್ದರೆ ನಮ್ಮ ಬದುಕಿನ ಬಂಡಿ ಮುಂದೆ ಹೋಗದು. ಹೀಗಾಗಿ ನಾವು ಚಿಂತೆ ಮಾಡುವ […]

ಕನ್ನಡ ಗಾದೆಮಾತು –  ಅರ್ಧ ಕಲಿತವನ ಅಬ್ಬರ ಹೆಚ್ಚು.

ನಿಜವಾಗಿಯೂ ಜ್ಞಾನಿಗಳಾದವರು ಅಬ್ಬರ ಮಾಡುವುದಿಲ್ಲ.‌ ‘ತಮಗೆ ಇಷ್ಟು ಗೊತ್ತು, ಅಷ್ಟು ಗೊತ್ತು, ತಾವು ಎಲ್ಲರಿಗಿಂತ ಮೇಲು’ ಎಂದು ಬೀಗುವುದಿಲ್ಲ.‌ ಆದರೆ ಯಾವುದಾದರೊಂದು ವಿಷಯವನ್ನು ಸ್ವಲ್ಪ ಕಲಿತವರು ತಾವು ಬಹಳ ಹೆಚ್ಚು ಕಲಿತುಬಿಟ್ಟಿದ್ದೇವೆ ಎಂದು ಅಬ್ಬರ ಮಾಡುತ್ತಾರೆ, ಮತ್ತು ಹೀಗೆ ಮಾಡಿ ತಮ್ಮ ಸುತ್ತಮುತ್ತಲಿನ ಜನರ ತಿರಸ್ಕಾರಕ್ಕೆ ಒಳಗಾಗುತ್ತಾರೆ. ಹೀಗಾಗಿ, ಮನುಷ್ಯನು ನಿರಂತರವಾಗಿ ಕಲಿಯುತ್ತಾ ಇರಬೇಕೇ ಹೊರತು ಅನಗತ್ಯ ಕಡೆಗಳಲ್ಲಿ ತನ್ನ ಜ್ಞಾನ ಪ್ರದರ್ಶನ ಮಾಡಿ ತನ್ನ ಸ್ಥಾನವನ್ನು ತಾನೇ ಕಳೆದುಕೊಳ್ಳಬಾರದು‌. Kannada proverb – Ardha kalithavana […]

ಕನ್ನಡ ಗಾದೆಮಾತು –  ಅನ್ನ ಇಕ್ಕಿ ಸಾಕು ಅನ್ನಿಸಬಹುದು, ದುಡ್ಡು ಕೊಟ್ಟು ಸಾಕು ಅನ್ನಿಸಕ್ಕೆ ಆಗಲ್ಲ.

ಮನುಷ್ಯ ಸ್ವಭಾವ ಹಾಗೂ ಬದುಕಿನ ಬಗ್ಗೆ ಮುಖ್ಯವಾದ ಒಳನೋಟವೊಂದನ್ನು ಕೊಡುವ ಗಾದೆ ಮಾತಿದು. ಹಸಿದ ಮನುಷ್ಯನೊಬ್ಬನಿಗೆ ನೀವು ಊಟ ಬಡಿಸಿದಾಗ ಎರಡಲ್ಲ ನಾಲ್ಕು ತುತ್ತಿಗೆ ‘ ಇನ್ನು ಸಾಕು, ಹೊಟ್ಟೆ ತುಂಬಿತು’ ಎಂದು ಅವನು ಹೇಳುತ್ತಾನೆ ಮತ್ತು ಅವನಿಗೆ ಹೊಟ್ಟೆ ತುಂಬ ಬಡಿಸಿದ ತೃಪ್ತಿ ನಿಮಗೆ ಸಿಗುತ್ತದೆ. ಆದರೆ ಹಣದ ವಿಷಯದಲ್ಲಿ ಹೀಗಾಗುವುದಿಲ್ಲ.‌ ಮನುಷ್ಯನಿಗೆ ಯಾರು ಎಷ್ಟು ಹಣ ಕೊಟ್ಟರೂ ಯಾವತ್ತೂ ಅವನಿಗೆ ಸಾಕು ಅನ್ನಿಸಲ್ಲ, ಇನ್ನೂ ಬೇಕು ಬೇಕು ಅನ್ನಿಸುತ್ತಲೇ ಇರುತ್ತೆ. ಲಂಚ-ರಿಷುವತ್ತು, ಭ್ರಷ್ಟಾಚಾರ, ಕಳ್ಳತನದಂತಹ […]

ಕನ್ನಡ ಗಾದೆಮಾತು –  ಹಿತ್ತಲ ಗಿಡ ಮದ್ದಲ್ಲ.‌

ಕನ್ನಡದ ಅತಿ ಜನಪ್ರಿಯ ಗಾದೆಮಾತುಗಳಲ್ಲಿ ಇದೂ ಒಂದು‌. ಮೂರೇ ಪದಗಳಲ್ಲಿ ಲೋಕಸತ್ಯವೊಂದನ್ನು ಹೇಳುವ ನುಡಿಸಿರಿ ಇದು.  ನಮ್ಮ ಹಿತ್ತಲಲ್ಲೇ ಇರುವ ಒಂದು  ಮದ್ದು( ಔಷಧೀಯ ಗಿಡ) ನಮ್ಮ ಗಮನಕ್ಕೆ ಬಂದಿರುವುದೇ ಇಲ್ಲ! ಬೇರೆಯವರು ಯಾರಾದರೂ ಅದನ್ನು ಮೆಚ್ಚಿಕೊಂಡರೆ ಆಗ ನಮಗೇ ಆಶ್ಚರ್ಯ ಆಗುತ್ತದೆ, ‘ಅಯ್ಯೋ ಇಷ್ಟು ದಿನ ಇದು ಇದ್ದದ್ದು ನಮ್ಮ ಅರಿವಿಗೆ ಬಂದೇ ಇರಲಿಲ್ಲವಲ್ಲ!’ ಅಂತ. ಅತಿಪರಿಚಿತತೆ ತರುವ ತಿರಸ್ಕಾರವು ಇದಕ್ಕೆ ಕಾರಣವಿರಬಹುದು.‌ ಗಿಡಗಳು ಮಾತ್ರ ಅಲ್ಲ, ನಾವು ಮನುಷ್ಯರ ವಿಷಯದಲ್ಲೂ ಹೀಗೇ ವರ್ತಿಸುತ್ತವೆ. ನಮ್ಮೊಂದಿಗೆಯೇ,  […]

ಕನ್ನಡ ಗಾದೆಮಾತು – ರೆಟ್ಟೆ ಮುರೀಬೇಕು ರೊಟ್ಟಿ ತಿನ್ನಬೇಕು

ನಾವು ಮನುಷ್ಯರು ಕಷ್ಟಪಟ್ಟು ದುಡಿದು ನಮ್ಮ ಅನ್ನ ಸಂಪಾದಿಸಬೇಕು ಎಂಬ ಉತ್ತಮ ನೀತಿಯನ್ನು ನಾಲ್ಕೇ ಪದಗಳಲ್ಲಿ ಹೇಳುವ ಗಾದೆ ಮಾತಿದು. ರೆಟ್ಟೆ ಎಂಬ ನಾಮಪದಕ್ಕೆ ನಿಘಂಟಿನಲ್ಲಿ ಇರುವ ಅರ್ಥ ತೋಳು, ಬಾಹು ಎಂದು. ರೆಟ್ಟೆ ಮುರಿಯುವುದು ಅಂದರೆ ಶ್ರಮ ಪಟ್ಟು ಕೆಲಸ ಮಾಡುವುದು ಎಂದರ್ಥ. ನಾವು ತಿನ್ನುವ ರೊಟ್ಟಿಯು ನಮ್ಮ ರೆಟ್ಟೆ ಮುರಿದು ದುಡಿದು ಗಳಿಸಿದ ಹಣದಿಂದ ಬರಬೇಕೇ ಹೊರತು, ಇನ್ನೊಬ್ಬರ ಮರ್ಜಿ, ಭಿಕ್ಷೆ, ದಾನದಿಂದ ಬರಬಾರದು. ದುಡಿದು ಗಳಿಸಿ ತನ್ನ ಪರಿಶ್ರಮದ ಕೂಳನ್ನು ತಾನು ಉಣ್ಣುವುದರಲ್ಲಿ […]

ಕನ್ನಡ ಗಾದೆಮಾತು –  ಗಣೇಶನ್ನ ಮಾಡು ಅಂದ್ರೆ ಅವರಪ್ಪನ್ನ ಮಾಡಿದ್ರಂತೆ!

ಕೆಲವರಿಗೆ ಯಾವ ಕೆಲಸ ಕೊಟ್ಟರೂ ಅವರು ಅದನ್ನು ಸರಿಯಾಗಿ ಮಾಡುವುದಿಲ್ಲ. ಉದಾಹರಣೆಗೆ ಯಾವುದೋ ಸಾಮಾನು ತಾ ಅಂದರೆ ಇನ್ಯಾವುದನ್ನೋ‌ ತರುವುದು, ಅಡಿಗೆಗೆ ಒಂದು‌‌ ಹಿಡಿ‌ ಉಪ್ಪು ಹಾಕೆಂದರೆ ಮೂರು ಹಿಡಿ ಹಾಕಿಬಿಡುವುದು…..ಹೀಗೆ. ಇಂಥವರು ಪ್ರತಿಯೊಂದು ಕೆಲಸದಲ್ಲೂ ಯಡವಟ್ಟು ಮಾಡುತ್ತಾರೆ. ಇಂಥವರ ಬಗ್ಗೆ ಹೇಳಿರುವ ಮಾತಿದು. ಗಣೇಶನ ಮೂರ್ತಿಯನ್ನು ಮಾಡು ಎಂದರೆ ಅವರ ತಂದೆಯಾದ ಶಿವನ ಮೂರ್ತಿಯನ್ನು ಮಾಡಿದರೆ ಏನು ಮಾಡಬೇಕು ನೀವೇ ಹೇಳಿ! ಇಂತಹ ಯಡವಟ್ಟರಿಗಾಗಿಯೇ ಮಾಡಿರುವ ಗಾದೆ ಮಾತಿದು.  Kannada proverb – Ganeshanna maadu […]

ಕನ್ನಡ ಗಾದೆಮಾತು –  ಬೆಕ್ಕಿಗೆ ಚೆಲ್ಲಾಟ, ಇಲಿಗೆ ಪ್ರಾಣ ಸಂಕಟ.

ಕೆಲವು ಸಂದರ್ಭಗಳಿರುತ್ತವೆ‌‌. ಅಪಹರಣಕಾರರು ತಾವು ಹಿಡಿದಿಟ್ಟುಕೊಂಡ ಒತ್ತೆಯಾಳುಗಳನ್ನು, ಶತ್ರು ದೇಶದ ಸೈನಿಕರನ್ನು ಸೆರೆ ಹಿಡಿದ ಸೈನ್ಯಾಧಿಕಾರಿಗಳು ತಮ್ಮ ಸೆರೆಯಾಳುಗಳನ್ನು ನಡೆಸಿಕೊಳ್ಳುವ ಕ್ರಮವು ಮೇಲೆ ಹೇಳಿದ ಗಾದೆ ಮಾತನ್ನು ನೆನಪಿಸಬಹುದು.‌ ಬೆಕ್ಕು ಇಲಿಯನ್ನು ತಿನ್ನುವ ಮೊದಲು ಚಿನ್ನಾಟ, ಚೆಲ್ಲಾಟ ಆಡಬಹುದು, ಆದರೆ ಇಲಿಗೆ ತನಗೆ ಸಾವು ಕಾದಿದೆ ಎಂದು ಗೊತ್ತಿರುವುದರಿಂದ ಕ್ಷಣಕ್ಷಣವೂ  ಆ ಪಾಪದ ಜೀವಿಗೆ ಪ್ರಾಣವೇ ಬಾಯಿಗೆ ಬಂದ ಹಾಗೆ ಆಗುತ್ತಿರುತ್ತದೆ.  Kannada proverb – Bekkige chellata, ilige praana Sankata( It is a […]

ಕನ್ನಡ ದಾಸವಾಣಿ – “ಅಲ್ಲಿದೆ ನಮ್ಮನೆ ಇಲ್ಲಿರುವುದು ಸುಮ್ಮನೆ”

ಇದು ಪುರಂದರದಾಸರ ಒಂದು ಪ್ರಸಿದ್ಧ ಕೀರ್ತನೆಯ ಮೊದಲ ಸಾಲು‌‌. ಇಂದು ಇದ್ದು, ನಾಳೆ ಇಲ್ಲವಾಗುವ    ಭೂಮಿಯ ಜೀವನದ ಅರ್ಥಹೀನತೆ, ನಶ್ವರತೆಗಳನ್ನು ಈ ಸಾಲು ಅತ್ಯಂತ ಸರಳವಾಗಿ  ಹೇಳುತ್ತದೆ. ಮಾಳಿಗೆ ಮನೆ, ಮಡದಿ ಮಕ್ಕಳು ಎಂದು ಒದ್ದಾಡುವ ಮನುಷ್ಯನು ತನ್ನ ನಿಜವಾದ ಮನೆಯಾದ ದೇವರ ಮನೆಯನ್ನು ಮರೆತುಬಿಡುತ್ತಾನೆ, ಹಾಗೆ ಮಾಡಬಾರದು ಎಂಬುದೇ ಇದರ ತಾತ್ಪರ್ಯವಾಗಿದೆ. Kannada poet speak – Allide nammane, illuruvudu summane( My actual home is there, I am simply […]

ಕನ್ನಡ ಗಾದೆಮಾತು – ಹೊಸದರಲ್ಲಿ ಅಗಸ ಗೋಣಿ ಎತ್ತಿ ಎತ್ತಿ ಒಗೆದನಂತೆ. 

ಲೋಕಾನುಭವದ ಸಾರರೂಪವೇ ಗಾದೆಮಾತುಗಳು. ಅದಕ್ಕೆ  ಮೇಲಿನದೂ  ಅಪವಾದ ಅಲ್ಲ.  ಜನ ಏನಾದರೂ ಕೆಲಸವನ್ನು ಪ್ರಾರಂಭಿಸುವಾಗ ಬಲು ಉತ್ಸಾಹದಿಂದ ಪ್ರಾರಂಭಿಸುತ್ತಾರೆ, ನೋಡುವವರು ಆಹಾ ಎನ್ನುವಂತೆ. ಪ್ರಾರಂಭದಲ್ಲಿ ಅಗಸನು ಯಕಃಶ್ಚಿತ್ ಗೋಣಿಚೀಲವನ್ನು ಸಹ ಎತ್ತಿ ಎತ್ತಿ ಒಗೆದಂತೆ.‌ ಆದರೆ, ದಿನ ಕಳೆಯುತ್ತಾ ಹೋದಂತೆ ಅವರ ಉತ್ಸಾಹ ಕುಗ್ಗಿ ಕೆಲಸದ ಗುಣಮಟ್ಟವು ಕಡಿಮೆ ಆಗುತ್ತದೆ. ಇಂತಹ ಮಾತಿಗೆ ಅವಕಾಶ ಕೊಡದಂತೆ ನಾವು ಕೆಲಸದ ಗುಣಮಟ್ಟ‌ ಮತ್ತು‌ ನಮ್ಮ ಉತ್ಸಾಹವನ್ನು ಯಾವಾಗಲೂ ಒಂದೇ ಸಮನಾಗಿರುವಂತೆ  ಕಾಪಾಡಿಕೊಳ್ಳಬೇಕು. Kannada proverb – Hosadaralli agasa […]

ಮಣದಷ್ಟು ಮಾತಿಗಿಂತ ಕಣದಷ್ಟು ಕೆಲಸ ಲೇಸು.

ಮಣ ಅಂದರೆ ಕನ್ನಡ ನಾಡಿನಲ್ಲಿ ಹಿಂದಿನ ಕಾಲದಲ್ಲಿ ಬಳಸುತ್ತಿದ್ದ ತೂಕದ ಒಂದು ಅಳತೆ. ಇದು ಸುಮಾರು ನಲವತ್ತು ಸೇರಿನಷ್ಟು ಇರುತ್ತದೆ. ಕಣ ಅಂದರೆ ಪದಾರ್ಥವೊಂದರ ತೀರಾ ಸಣ್ಣ ಚೂರು ಅಥವಾ ಅತ್ಯಂತ ಸೂಕ್ಷ್ಮವಾದ ಅಂಶ ಎಂದು ಅರ್ಥ. ‌ಕೆಲವರು ತಾನು ಹಾಗೆ ಮಾಡುತ್ತೇನೆ ಹೀಗೆ ಮಾಡುತ್ತೇನೆ ಎಂದು  ಬಡಾಯಿ ಕೊಚ್ಚುತ್ತಾ ಮಾತಿನಲ್ಲೇ ಮಹಲು‌ ಕಟ್ಟುತ್ತಾರೆ. ಇದರಿಂದ ಯಾರಿಗೂ ಏನೂ ಪ್ರಯೋಜನವಿಲ್ಲ, ಪ್ರಯೋಜನವಿರಲಿ ಬೇಡದೆ ಇರುವ ಮಾತು ಕೇಳಿದ ಬೇಸರ ಬರುತ್ತದೆ ಅಷ್ಟೇ. ಇದರ ಬದಲು ಒಂದೇ ಒಂದು ಕಣದಷ್ಟು […]

Page 14 of 20

Kannada Sethu. All rights reserved.