ಕನ್ನಡ ನಾಡಿನಲ್ಲಿ, ಮಕ್ಕಳನ್ನು ಬೆಳೆಸುವ ಸಂದರ್ಭದಲ್ಲಿ ಬಳಸುವ ಒಂದು ಗಾದೆಮಾತು ಇದು. ಬೀದಿಯಲ್ಲಿ ಆಟ ಆಡಿಕೊಂಡು, ಜನರ ಜೊತೆ ಮಾತಾಡಿಕೊಂಡು, ತಪ್ಪು ಮಾಡಿದಾಗ ಬೈಸಿಕೊಂಡು, ಒಳ್ಳೆಯದನ್ನು ಮಾಡಿದಾಗ ಮೆಚ್ಚುಗೆ ಪಡೆದು….ಒಟ್ಟಿನಲ್ಲಿ ಪ್ರಪಂಚಕ್ಕೆ ತೆರೆದುಕೊಳ್ಳುವ ಮಕ್ಕಳು ಜೀವನದಲ್ಲಿ ಪ್ರಗತಿ ಸಾಧಿಸುತ್ತಾರೆ. ಅದೇ ಹೊತ್ತಿನಲ್ಲಿ, ಸದಾ ಮನೆಯ ನಾಲ್ಕು ಗೋಡೆಗಳಲ್ಲಿ ಬಂಧಿಯಾಗಿ, ಜನರೊಡನೆ ಬೆರೆಯದೆ, ಪ್ರಪಂಚದ ಪರಿಚಯ ಇಲ್ಲದೆ ಹೋಗುವ ಮಕ್ಕಳ ಮನಸ್ಸು ನಿಂತ ನೀರಿನಂತೆ ಕೊಳೆಯುತ್ತದೆ. ಆದುದರಿಂದ ಮಕ್ಕಳನ್ನು ಅವರ ತಾಯ್ತಂದೆಯರು ಮನೆಯಲ್ಲಿ ಕೂಡಿ ಹಾಕದೆ ನಾಲ್ಕು ಜನರೊಡನೆ […]
ಕನ್ನಡ ವಿವೇಕ
ಬದುಕನ್ನು ಹಸನು ಮಾಡಲು ಕನ್ನಡ ಭಾಷೆ, ಸಂಸ್ಕೃತಿಯು ನಮಗೆ ನೀಡಿದ ಕೆಲವು ಗಾದೆ, ಸೂಕ್ತಿ, ನಾಣ್ಣುಡಿ, ಲೋಕೋಕ್ತಿ, ನಲ್ವಾತು ಇವುಗಳಲ್ಲಿ ವಾರಕ್ಕೆ ಒಂದರ ಕಿರು ಪರಿಚಯವನ್ನು ಈ ಅಂಕಣದಲ್ಲಿ ಮಾಡಿಕೊಡಲಾಗುತ್ತದೆ.
Like us!
Follow us!