ಕನ್ನಡ ವಿವೇಕ

ಬದುಕನ್ನು ಹಸನು ಮಾಡಲು ಕನ್ನಡ ಭಾಷೆ, ಸಂಸ್ಕೃತಿಯು ನಮಗೆ ನೀಡಿದ ಕೆಲವು ಗಾದೆ, ಸೂಕ್ತಿ, ನಾಣ್ಣುಡಿ, ಲೋಕೋಕ್ತಿ, ನಲ್ವಾತು ಇವುಗಳಲ್ಲಿ ವಾರಕ್ಕೆ ಒಂದರ ಕಿರು ಪರಿಚಯವನ್ನು ಈ ಅಂಕಣದಲ್ಲಿ ಮಾಡಿಕೊಡಲಾಗುತ್ತದೆ.

ಇರಲಾರದೆ ಇರುವೆ ಬಿಟ್ಟುಕೊಂಡರಂತೆ.

ಇದು ಕನ್ನಡ ಭಾಷೆಯ ಒಂದು ಸ್ವಾರಸ್ಯಕರ ಗಾದೆಮಾತು. ಜನರು ಕೆಲವು ಸಲ ಅನಗತ್ಯವಾಗಿ ತೊಂದರೆಗಳನ್ನು ಆಹ್ವಾನಿಸಿಕೊಂಡಾಗ ಈ ಗಾದೆಮಾತನ್ನು ನೆನಪಿಸಿಕೊಳ್ಳಲಾಗುತ್ತದೆ. ಗೊತ್ತಿದ್ದೂ ಗೊತ್ತಿದ್ದೂ ಜಗಳಗಂಟರೊಡನೆ ಜಗಳಕ್ಕೆ ಹೋಗುವುದು, ಇಷ್ಟವಿಲ್ಲದ ಕೆಲಸವನ್ನು ಮಾಡಲು ಒಪ್ಪಿಕೊಂಡು ಆಮೇಲೆ ಪೇಚಾಡುವುದು, ಮಲಗಿದ್ದ ನಾಯಿಗೆ ಕಲ್ಲೆಸೆದು ಅದಕ್ಕೆ ಕೋಪ ಬರಿಸಿ ಅದರಿಂದ ಕಚ್ಚಿಸಿಕೊಂಡು ಒದ್ದಾಡುವುದು ಇಂತಹ ಬುದ್ಧಿಹೀನ ಕೆಲಸಗಳನ್ನು ತಮ್ಮ ಪರಿಚಿತರು ಮಾಡಿದಾಗ “ನೋಡು, ಇರಲಾರದೆ ಇರುವೆ ಬಿಟ್ಕೊಂಡ್ರು!’ ಎಂದು ಜನ ಮಾತಾಡಿಕೊಳ್ಳುತ್ತಾರೆ. ಇರುವೆಗಳು ಮೈಮೇಲೆ ತಾವಾಗಿ ಬಂದಾಗಲೇ ಎಷ್ಟು ಹಿಂಸೆ, ಕಿರಿಕಿರಿ, […]

`ಬೆಟ್ಟಕ್ಕೆ ಮಣ್ಣು ಹೊತ್ತಂಗೆ’

ಕನ್ನಡದಲ್ಲಿ ಬಹಳವಾಗಿ ಬಳಕೆಯಾಗುವ ಗಾದೆಮಾತುಗಳಲ್ಲಿ ಇದೂ ಒಂದು. ಮಾಡುವ ಕೆಲಸವು ಯಾವುದೇ ಫಲ ನೀಡದಿದ್ದಾಗ ಜನರು ಈ ಗಾದೆಮಾತನ್ನು ಬಳಸುತ್ತಾರೆ. ವರ್ಷವಿಡೀ ಓದಿ ವಿದ್ಯಾರ್ಥಿಯೊಬ್ಬ ಅನುತ್ತೀರ್ಣನಾದಾಗ, ಅಥವಾ ಬಹಳ ಕಾಲ ಕಷ್ಟ ಪಟ್ಟರೂ ಅಂದುಕೊಂಡದ್ದನ್ನು ಸಾಧಿಸಲಾಗದಿದ್ದಾಗ `ಅಯ್ಯೋ, ಇಷ್ಟು ವರ್ಷ ಮಾಡಿದ್ದು ಬೆಟ್ಟಕ್ಕೆ ಮಣ್ಣು ಹೊತ್ತ ಹಾಗಾಯಿತು ನೋಡಿ’’ ಎನ್ನುತ್ತಾರೆ. ಪ್ರಕೃತಿಯಲ್ಲಿ ಸಹಜ ಬೆಟ್ಟವು ನಿರ್ಮಿತವಾಗಿರುವುದೇ ಮಣ್ಣಿನಿಂದ. ಅದಕ್ಕೆ ಹೊಸದಾಗಿ ಮಣ್ಣು ಹೊರುವುದರಿಂದ ಏನೂ ಪ್ರಯೋಜನವಿಲ್ಲ. ಒಟ್ಟಿನಲ್ಲಿ ನಿಷ್ಪ್ರಯೋಜಕವಾದ ಕೆಲಸವು ಹುಟ್ಟಿಸುವ ಹತಾಶ ಭಾವವನ್ನು ತುಂಬ ಚಿತ್ರಕವಾಗಿ […]

ಅತ್ತೂ ಕರೆದು ಔತಣ ಹಾಕಿಸಿಕೊಂಡರಂತೆ.

ಕನ್ನಡ ಭಾಷೆಯಲ್ಲಿನ ಒಂದು ಪ್ರಸಿದ್ಧ ಗಾದೆಮಾತಿದು. ಸಮಾರಂಭಗಳಲ್ಲಿ ಆಗಮಿಸಿದವರಿಗೆ ನೀಡುವ ವಿಶೇಷ ಆಹಾರಕ್ಕೆ ಔತಣ ಎನ್ನುತ್ತಾರಲ್ಲವೇ. ಇಂತಹ ಔತಣವು ಸಾಮಾನ್ಯವಾಗಿ ಅಪರೂಪದ್ದೂ, ಅತ್ಯಂತ ರುಚಿಕರವಾದದ್ದೂ ಆಗಿರುತ್ತದೆ. ಈ ರೀತಿಯ ವಿಶೇಷ ಸಂದರ್ಭದ ಊಟಕ್ಕೆ ಅತಿಥೇಯರು ಅಥವಾ ಸಮಾರಂಭದ ಆಯೋಜಕರು ತಮ್ಮಿಚ್ಛೆಯಿಂದ ಆಹ್ವಾನ ನೀಡಿದಾಗ ಅದನ್ನು ಸ್ವೀಕರಿಸಲು ಹೋಗುವುದು ಗೌರವದಿಂದ ಬಾಳುವ, ಬದುಕುವ ಜನರ ರೀತಿಯಾಗಿರುತ್ತದೆ. ಆದರೆ ಔತಣವಿರುವ ಸುದ್ದಿ ಗೊತ್ತಾಗಿ ಅದಕ್ಕೆ ನಮ್ಮನ್ನು ಕರೆಯದಿದ್ದಾಗ, ನಾವು ಅದನ್ನು ಏರ್ಪಡಿಸಿದವರ ಬಳಿ ಹೋಗಿ ನಮ್ಮನ್ನು ಕರೆಯುವಂತೆ ನೇರವಾಗಿ ಅಥವಾ […]

ಅತ್ತೆಗೂ ಒಂದು ಕಾಲ ಸೊಸೆಗೂ ಒಂದು ಕಾಲ.

ಭಾರತದಲ್ಲಿರುವ ಪುರುಷ ಪ್ರಧಾನ ವ್ಯವಸ್ಥೆಗಳಲ್ಲಿ ಮದುವೆಯಾದ ಹೆಣ್ಣು ತನ್ನ ಗಂಡನ ಮನೆಗೆ ಬಂದು ಜೀವನ ಮಾಡುವ ಸನ್ನಿವೇಶವಿರುವುದರಿಂದ ಅತ್ತೆ-ಸೊಸೆ ಸಮೀಕರಣವು ರೂಪುಗೊಳ್ಳುತ್ತದೆ. ಮನೆಯ ವಾತಾವರಣದಲ್ಲಿ ಒಂದೇ ಗಂಡುವ್ಯಕ್ತಿಯ ಜೊತೆಗೆ ಎರಡು ಪೀಳಿಗೆಯ ಹೆಂಗಸರ ಆಪ್ತ ಸಂಬಂಧವು (ತಾಯಿ–ಮಗ, ಗಂಡ-ಹೆಂಡತಿ) ಉಂಟಾಗಿರುವ ಕಾರಣ ಅಲ್ಲಿ ಒಂದು ರೀತಿಯ ಸ್ಪರ್ಧೆ, ಅಭದ್ರತೆ, ತಾಕಲಾಟಗಳು ಕಾಣಿಸಿಕೊಳ್ಳುವುದು ಸಹಜ. ಇದೇ ಪ್ರಸಿದ್ಧವಾದ `ಅತ್ತೆ-ಸೊಸೆ’ ಜಗಳಕ್ಕೆ ಹೇತು! ವಾಸ್ತವದಲ್ಲಿ ಇದು ಒಂದು ಅಧಿಕಾರ ಚಲಾವಣೆಯ ಪ್ರಶ್ನೆಯಾಗಿಬಿಡುತ್ತದೆ. `ನನ್ನ ಮಾತು ನಡೆಯಬೇಕು’ ಎಂಬ ಇಚ್ಛೆ ಅತ್ತೆ-ಸೊಸೆ […]

ಹಲ್ಲಿದ್ರೆ ಕಡಲೆಯಿಲ್ಲ, ಕಡಲೆ ಇದ್ರೆ ಹಲ್ಲಿಲ್ಲ.

ಬದುಕಿನ ವಿಪರ್ಯಾಸವೊಂದನ್ನು ತುಂಬ ಚಿತ್ರಕವಾಗಿ ಹೇಳುವ ಒಂದು ಜನಪ್ರಿಯ ಗಾದೆ ಮಾತಿದು. ಅಗಿದೇ ತಿನ್ನಬೇಕಾದ ಅಂದರೆ ಹಾಗೇ ನುಂಗಲಾಗದ  ಕಡಲೆಬೀಜವನ್ನು ತಿನ್ನಲು ಹಲ್ಲು ಬೇಕೇ ಬೇಕು. ಜೀವನ ಕೆಲವು ಸಲ ಹೇಗಿರುತ್ತದೆ ಅಂದರೆ ಕಡಲೆ ತಿನ್ನಲು ಶಕ್ತಿ ಇರುವ ಹಲ್ಲು ಇದ್ದಾಗ ಕಡಲೆಯೇ ನಮ್ಮ ಬಳಿ ಇರುವುದಿಲ್ಲ. ಮತ್ತು ಬೇಕಾದಷ್ಟು ಕಡಲೆಯನ್ನು ಕೊಳ್ಳುವ ಅಥವಾ ಇಟ್ಟುಕೊಳ್ಳುವ ಸಾಮರ್ಥ್ಯ ಬಂದಾಗ ಹಲ್ಲೇ ಇರುವುದಿಲ್ಲ, ಅವು ಅಷ್ಟರಲ್ಲಿ ಉದುರಿ ಹೋಗಿರುತ್ತವೆ!  ಎಂತಹ ವಿಚಿತ್ರವಲ್ಲವೇ ಇದು!? ಜೀವನದ ಸುಖ, ಸೌಲಭ್ಯಗಳನ್ನು ಅನುಭವಿಸುವ […]

ಆಸೆಗೆ ಮಿತಿಯಿಲ್ಲ, ಆಕಾಶಕ್ಕೆ ಅಳತೆಯಿಲ್ಲ.

ಕನ್ನಡದ ಈ ಗಾದೆಮಾತು ಮನುಷ್ಯನ ಮನಸ್ಸಿನ ಕಡೆಗೆ ಒಂದು ಒಳನೋಟ ಬೀರುತ್ತದೆ. ಆಕಾಶಕ್ಕೆ ಹೇಗೆ ಅಳತೆಯಿಲ್ಲವೋ ಹಾಗೆಯೇ ಮನುಷ್ಯನ ಆಸೆಗೆ ಮಿತಿಯಿಲ್ಲ. ಮಿತಿಯಿಲ್ಲದ ಆಸೆ ಮನುಷ್ಯನನ್ನು ವಿನಾಶಗಳ ಸರಮಾಲೆಗೆ ಸಿಕ್ಕಿಸುತ್ತದೆ. ದುರಾಸೆ ಪಟ್ಟ ದರ‍್ಯೋಧನ, ಚಿನ್ನದ ಮೊಟ್ಟೆ ಕೊಡುತ್ತದೆಂಧು ತನ್ನ ಸಂಪತ್ತಿನ ಮೂಲವಾದ ಬಾತುಕೋಳಿಯನ್ನೇ ಕೊಂದ ರೈತ ಹಾಗೂ ತಾನು ಮುಟಿದ್ದೆಲ್ಲ ಚಿನ್ನವಾಗಬೇಕೆಂಬ ವರ ಬೇಡಿ ಕೊನೆಗೆ ಅನ್ನವೂ ಚಿನ್ನವಾಗಿ ಅದನ್ನು ತಿನ್ನಲಾರದೆ ಒದ್ದಾಡಿದ ಮಿದಾಸನ ಕಥೆಗಳು ನಮಗೆ ಎಚ್ಚರಿಕೆಯ ಗಂಟೆಗಳಾಗಬೇಕು. ನಮ್ಮ ಮನಸ್ಸು ಅತಿಯಾಸೆಗೆ ಅಡಿಯಾಳಾಗದಂತೆ […]

 ದಿನಾ ಸಾಯೋರಿಗೆ ಅಳರ‍್ಯಾರು?

ಲೋಕದೊಂದಿಗೆ ನಾವು ವ್ಯವಹರಿಸುವಾಗ ನಮ್ಮ ಸುಖದುಃಖಗಳನ್ನು ಯಾರೊಂದಿಗೆ, ಎಷ್ಟರ ಮಟ್ಟಿಗೆ, ಯಾವಾಗ, ಹೇಗೆ ಹಂಚಿಕೊಳ್ಳುತ್ತೇವೆ ಎಂಬುದರ ಬಗ್ಗೆ ಲಕ್ಷ್ಯ ಕೊಡಬೇಕಾಗುತ್ತದೆ. ಸದಾಕಾಲ ತಮ್ಮ ಗೋಳುಗಳನ್ನು ಹೇಳುತ್ತಾ ಇರುವವರ ಬಗ್ಗೆ ಜನರು ಗೌರವ ಕಳೆದುಕೊಂಡು ಅವರ ಮಾತುಗಳಿಗೆ ಗಮನ ಕೊಡುವುದನ್ನು ನಿಲ್ಲಿಸಿಬಿಡುತ್ತಾರೆ – “ಅಯ್ಯೋ, ಅವರದ್ದು ದಿನಾ ಇದ್ದಿದ್ದೇ ಬಿಡು. ಒಂದಲ್ಲ ಒಂದು ವಿಷಯಕ್ಕೆ ಗೋಳಾಡ್ತಾನೇ ಇರ್ತಾರೆ. ದಿನಾ ಸಾಯೋರಿಗೆ ಅಳರ‍್ಯಾರು!’’ ಎನ್ನುತ್ತಾರೆ. ಈ ಗಾದೆಮಾತು ಎಷ್ಟು ಪರಿಣಾಮಕಾರಿಯಾದ ಉಕ್ತಿಯೆಂದರೆ ಸಾವು ಎನ್ನುವುದು ವ್ಯಕ್ತಿಗೆ ದಿನಾ ಬರುವಂತಹದ್ದಲ್ಲ ಎಂಬ […]

ಆಳಾಗ ಬಲ್ಲವನೇ ಅರಸಾಗುವ.

ಒಬ್ಬ ಯಶಸ್ವಿ ಅರಸ ಅಥವಾ ನಾಯಕನು ಹೇಗಿರಬೇಕು ಎಂಬುದನ್ನು ಸೊಗಸಾಗಿ ಹೇಳುವ ಗಾದೆಮಾತಿದು. ಅರಸ ಅಥವಾ ನಾಯಕ ಅಂದರೆ ಕೇವಲ ಕೆಲಸ ಹೇಳುವವನು, ಆಜ್ಞೆ ಮಾಡಿ ಆದೇಶ ಕೊಟ್ಟು ಬೇರೆಯವರಿಂದ ಕೆಲಸ ಮಾಡಿಸುವವನು ಎಂಬ ಭಾವನೆ ಸರ್ವೇಸಾಧಾರಣವಾಗಿ ಇರುತ್ತದೆ. ಆದರೆ ಕೆಲಸ ಮಾಡಲು ತಿಳಿದವನು ಮಾತ್ರ ಚೆನ್ನಾಗಿ ಕೆಲಸ ಮಾಡಿಸಬಲ್ಲ. ಏಕೆಂದರೆ ತಾನು ಹೇಳುತ್ತಿರುವ ಕೆಲಸದ ವಿಧಿವಿಧಾನ, ಮೂಲಚೂಲಗಳು ಅವನಿಗೆ ಗೊತ್ತಿರುತ್ತವೆ. ಕೆಲಸ ಮಾಡುವವರು ಕೆಲಸ ಕದಿಯಲೆಂದು ಹೇಳುವ ಸುಳ್ಳುಗಳು, ಕುಂಟು ನೆಪಗಳು ಸಹ ಅವನಿಗೆ ಗೊತ್ತಿರುತ್ತವೆ. […]

ಯಾರನ್ನ ನಂಬಿದರೂ ಆರೈದು ನಂಬಬೇಕು

ಯಾರಾದರೂ ಹೊಸದಾಗಿ ಪರಿಚಯವಾದಾಗ ಅಥವಾ ತುಂಬ ಅಂದವಾಗಿರುವವರು, ಬುದ್ಧಿವಂತರು ಅನ್ನಿಸಿಕೊಂಡವರು, ಬಣ್ಣ ಬಣ್ಣವಾಗಿ ಮಾತಾಡುವವರು ತಮ್ಮ ಸಂಪರ್ಕಕ್ಕೆ ಬಂದಾಗ ತಕ್ಷಣ ಅವರನ್ನು ಒಳ್ಳೆಯುವರು ಎಂದು ನಂಬಿಬಿಡುವ ಮುಗ್ಧತೆ ಕೆಲವು ಜನರಲ್ಲಿ ಇರುತ್ತದೆ. ಇಂತಹ ಸ್ವಭಾವವುಳ್ಳವರಿಗೆ ಎಚ್ಚರಿಕೆ ಕೊಡುವ ಗಾದೆ ಮಾತಿದು. ಮನುಷ್ಯರಲ್ಲಿ ಒಳ್ಳೆಯವರು ಇರುವಂತೆಯೇ ಒಳ್ಳೆಯವರಂತೆ ನಟಿಸುವವರೂ ಅಂದರೆ ತಮ್ಮ ನಿಜ ಮುಖದ ಮೇಲೆ ಮುಖವಾಡ ತೊಟ್ಟವರೂ ಇರುತ್ತಾರೆ. ಹಾಗೆಯೇ ದೇವರಂತಹ ಜನಗಳು ಇರುವಂತೆ, ಸ್ವಾರ್ಥಿಗಳೂ, ಸಮಯ ಸಾಧಕರೂ, ಬೆನ್ನ ಹಿಂದೆ ಚೂರಿ ಹಾಕುವವರೂ ಇರುತ್ತಾರೆ. ಹೀಗಾಗಿ […]

ಸಾವಿರ ಉಳಿ ಪೆಟ್ಟು, ಒಂದು ಚಿತ್ತಾರ

ಕಲ್ಲಿನಲ್ಲಿ ಒಂದು ಚಿತ್ರ ಅಥವಾ ಶಿಲ್ಪ ಮೂಡಿಸುವುದೆಂದರೆ ಸಾಮಾನ್ಯವಾದ ಮಾತಲ್ಲ. ಚಿತ್ರಕಾರ ಅಥವಾ ಶಿಲ್ಪಿಯು ಉಳಿ, ಚಾಣಗಳನ್ನು ಹಿಡಿದು ಸಾವಿರಾರು ಪೆಟ್ಟು ಕೊಟ್ಟು ಅನೇಕ ದಿನ ತಾಳ್ಮೆಯಿಂದ ಕೆಲಸ ಮಾಡಬೇಕು. ಇನ್ನು ಕಲ್ಲಿನ ದೃಷ್ಟಿಕೋನದಿಂದ ನೋಡಿದರೂ ಸರ್ವೇಸಾಧಾರಣವಾದ ಕಲ್ಲು ಒಂದು ಚಿತ್ರ ಅಥವಾ ಶಿಲ್ಪ ರೂಪವನ್ನು ಪಡೆಯಬೇಕಾದರೆ ಸಾವಿರ ಪೆಟ್ಟುಗಳನ್ನು ತಿನ್ನಬೇಕು. ನಮ್ಮ ಗ್ರಾಮಸ್ಥರ ಅನುಭವದ ಖಜಾನೆಯಿಂದ ಮೂಡಿ ಬಂದಿರುವ ಈ ಮಾತು, ಸೌಂದರ್ಯವನ್ನು ಸೃಷ್ಟಿಸುವುದು ಎಂತಹ ಪರಿಶ್ರಮ ಮತ್ತು ತಾಳ್ಮೆ ಬೇಡುವ ಕೆಲಸ ಎಂಬುದನ್ನು ಹೇಳುತ್ತವೆ. […]

Page 17 of 20

Kannada Sethu. All rights reserved.