ಈ ಸಲ ತಾಪದ ಅಲೆಗಳೊಡನೆ ಬೆಂಗಳೂರನ್ನು ಕಾಡಿದ ಬೇಸಗೆಯ ಶಾಖಕ್ಕೆ ಹೆದರಿ, ಮನೆಯಲ್ಲಿ ಧರಿಸಲು ಒಂದೆರಡು ಹತ್ತಿ ಬಟ್ಟೆಗಳ ಖರೀದಿಗೆಂದು ರಾಜಾಜಿನಗರದ ಬಟ್ಟೆಯಂಗಡಿಯೊಂದಕ್ಕೆ ಹೋಗಿದ್ದೆ. ಇಪ್ಪತ್ತು- ಇಪ್ಪತ್ತೈದು ವಯಸ್ಸಿನ ಮೂವರು ಯುವತಿಯರು ನಿರ್ವಹಿಸುತ್ತಿದ್ದ ಸಣ್ಣ ಬಟ್ಟೆ ಅಂಗಡಿ ಅದು. ಸರಿ. ಉಡುಪುಗಳನ್ನು ನಾನು ಆಯ್ಕೆ ಮಾಡಲು ತೊಡಗಿದ್ದಾಗ ನನಗೆ ಸಹಾಯ ಮಾಡುವ ಉದ್ದೇಶದಿಂದ ಅವರಲ್ಲಿ ಒಬ್ಬ ಹುಡುಗಿ ನನ್ನ ಬಳಿ ಬಂದು, ಅಲ್ಲಿನ ಗೂಟಗಳಲ್ಲಿ ನೇತು ಹಾಕಿದ್ದ ಉಡುಪೊಂದನ್ನು ತೆಗೆದು “ಅಲ್ಯಾ ಕಟ್ ತಗೊಳ್ಳಿ ಮೇಡಂ, ತುಂಬ […]
ಈಕ್ವಿವೇಲೆಂಟ್ ಸರ್ಕ್ಯೂಟ್ – ಸಮಸಮಾನ ವಿದ್ಯುನ್ಮಂಡಲ – ತನಗಿಂತ ಹೆಚ್ಚು ಸಂಕೀರ್ಣವಾದ ವಿದ್ಯುನ್ಮಂಡಲ ಅಥವಾ ಉಪಕರಣದ ವಿದ್ಯುತ್ತೀಯ ಗುಣಲಕ್ಷಣಗಳನ್ನೇ ಕೆಲವು ನಿರ್ದಿಷ್ಟೀಕೃತ ಸನ್ನಿವೇಶಗಳಲ್ಲಿ ಹೊಂದಿರುವ, ಆದರೆ ಹೋಲಿಕೆಯಲ್ಲಿ ಸರಳವಾಗಿರುವ ಒಂದು ವಿದ್ಯುನ್ಮಂಡಲ.
ಈಕ್ವಿನಾಕ್ಸ್ – ಸಮಕಾಲ – ಸೂರ್ಯನು ಭೂಮಧ್ಯರೇಖೆಯನ್ನು ದಾಟುವ ಕಾಲ, ಹಗಲು ಮತ್ತು ರಾತ್ರಿಗಳು ಸಮ ಅವಧಿಯನ್ನು ಹೊಂದಿರುವ ಕಾಲ.
ಈಕ್ವಿಪೊಟೆನ್ಶಿಯಲ್ – ಸಮವಿದ್ಯುತ್ ಅಂತಃಸಾಮರ್ಥ್ಯ – ತನ್ನ ಮೇಲಿರುವ ಎಲ್ಲ ಬಿಂದುಗಳೂ ಸಮಾನ ವಿದ್ಯುತ್ ಅಂತಃಸಾಮರ್ಥ್ಯವನ್ನು ಹೊಂದಿರುವಂತೆ ವಿನ್ಯಾಸಗೊಳಿಸಿದ ಒಂದು ಮೇಲ್ಮೈ.
ಈಕ್ವಿಲಿಬ್ರಿಯಂ – ಸಮತೋಲನ – ಒಂದು ವಸ್ತುವಿನ ಮೇಲೆ ವರ್ತಿಸುತ್ತಿರುವ ಬಲಗಳ ಮೊತ್ತ ಸೊನ್ನೆ ಆಗಿದ್ದಾಗ ಆ ವಸ್ತು ಸಮತೋಲನದಲ್ಲಿದೆ ಎಂದು ಹೇಳಲಾಗುತ್ತದೆ.
ಈಕ್ವಿಲಿಬ್ರೆಂಟ್ – ಸಮತೋಲಕ – ಒಂದು ವಸ್ತುವಿನ ಮೇಲೆ ವರ್ತಿಸುತ್ತಿರುವ ವಿವಿಧ ಬಲಗಳ ಫಲಿತಾಂಶಬಲಕ್ಕೆ ಸಮವಾದ ಮತ್ತು ವಿರುದ್ದವಾದ ಬಲ.
ಈಕ್ವೇಟರ್ – ಭೂಮಧ್ಯರೇಖೆ – ಭೂಮಿಯ ಸುತ್ತಲೂ ಇರುವ ಮಹಾರೇಖೆ ಇದು, ಭೂಮಿಯ ಮಹಾವರ್ತುಲ. ಇದು ಭೂಮಿಯ ಅಕ್ಷಕ್ಕೆ ಲಂಬವಾಗಿರುವ ಮೇಲ್ಮೈಯಲ್ಲಿರುತ್ತದೆ ಮತ್ತು ಎರಡೂ ಧ್ರುವಗಳಿಂದ ಸಮಾನ ದೂರದಲ್ಲಿರುತ್ತದೆ.
ಎಲೆಕ್ಟ್ರಾನ್ ಪ್ರೋಬ್ ಮೈಕ್ರೋಅನಾಲಿಸಿಸ್ -ಎಲೆಕ್ಟ್ರಾನು ಬಿಂಬಾಧಾರಿತ ವಸ್ತು ವಿಶ್ಲೇಷಣೆ – ಒಂದು ವಸ್ತುವಿನಲ್ಲಿ ಯಾವ ಯಾವ ಮೂಲವಸ್ತುಗಳಿವೆ ಎಂದು ಪತ್ತೆ ಹಚ್ಚಲು, ಆ ವಸ್ತುವಿನೊಳಗೆ ಎಲೆಕ್ಟ್ರಾನು ಕಿರಣಪುಂಜವನ್ನು ಹರಿಸಿ, ಹೊರಬರುವಂತಹ ವಸ್ತುವಿಶಿಷ್ಟ ಕ್ಷಕಿರಣವನ್ನು ಅಳೆಯುವುದು.
Like us!
Follow us!