Epithermal neutron

ಎಪಿಥರ್ಮಲ್ ನ್ಯೂಟ್ರಾನ್ –  ಹೆಚ್ಚು ತಾಪದ ನ್ಯೂಟ್ರಾನು ‌- ತಾಪ ನ್ಯೂಟ್ರಾನಿನ ಶಕ್ತಿಗಿಂತ ಹೆಚ್ಚಾದ ಮತ್ತು ವೇಗದ ನ್ಯೂಟ್ರಾನಿಗಿಂತ ಕಡಿಮೆ ಶಕ್ತಿಯುಳ್ಳ ನ್ಯೂಟ್ರಾನು. 

Epitaxy

ಎಪಿಟ್ಯಾಕ್ಸಿ – ಪದರ ಬೆಳೆಸುವಿಕೆ – ಒಂದು ವಸ್ತುವಿನ ಏಕ ಹರಳಿನ ಮೇಲೆ ಇನ್ನೊಂದು ವಸ್ತುವಿನ ಪದರವೊಂದನ್ನು ಬೆಳೆಸುವುದು.

Epidiascope

ಎಪಿಡಿಯಾಸ್ಕೋಪ್  – ಬಿಂಬ ದರ್ಶಕ – ಬೋಧನಾ ವೃತ್ತಿಯಲ್ಲಿರುವವರು ಬಳಸುವ ಒಂದು ದೃಶ್ಯೋಪಕರಣ ಇದು. ಒಂದು ಪಾರದರ್ಶಕ ಅಥವಾ ಅಪಾರದರ್ಶಕ ವಸ್ತುವೊಂದರ  ಹಿಗ್ಗಲಿಸಿದ  ಬಿಂಬವನ್ನು ಪರದೆಯ ಮೇಲೆ ಬೀರಲು ಈ ಉಪಕರಣವನ್ನು ಬಳಸುತ್ತಾರೆ.

ಕನ್ನಡ ಗಾದೆಮಾತು – ಆಡಿ ಉಂಡ ಮೈ ಅಟ್ಟು ಉಂಡೀತೇ?

ಮನುಷ್ಯ ಅಂದರೆ ಅವನ ಮಾಡಿಕೊಂಡ ಅಭ್ಯಾಸಗಳ ಮೊತ್ತ ಅನ್ನುತ್ತಾರೆ.‌ ಆಟ ಆಡಿದಂತೆ ಬೇಜವಾಬ್ದಾರಿಯಿಂದ ಜೀವನ ಮಾಡುತ್ತಾ ಬೇರೆಯವರು ಮಾಡಿ ಇರಿಸಿದ್ದನ್ನು ಆರಾಮಾಗಿ ತಿನ್ನುತ್ತಾ ಜೀವನ ಮಾಡುವವರು, ಎಂದಾದರೂ ಕಷ್ಟ ಪಟ್ಟು ತಾವೇ ಅಟ್ಟು( ಅಡಿಗೆ ಮಾಡಿ) ಊಟ ಮಾಡುತ್ತಾರೆಯೇ? ಇಲ್ಲ. ಅವರು ಆ ಸಾಮರ್ಥ್ಯವನ್ನೇ ಬೆಳೆಸಿಕೊಂಡಿರುವುದಿಲ್ಲ.‌ ಜನರ ಜೀವನ ಕ್ರಮ, ಅಭ್ಯಾಸಗಳನ್ನು  ದೀರ್ಘ ಕಾಲ ಗಮನಿಸಿ ನಮ್ಮ ಹಿರಿಯರು ಬಳಕೆಗೆ ತಂದಿರುವ ಗಾದೆ ಮಾತು ಇದು, ಅವರ ಅನುಭವದ ಸಾರ. ಇದರಿಂದ ನಾವು ಕಲಿಯುವುದು ಬಹಳ ಇದೆ.  […]

‘ಇವ ನಮ್ಮವ ಇವ ನಮ್ಮವ’ ಎನ್ನುವ ಕನ್ನಡ ವಿಭಾಗಗಳ ಸೊಗಸು.

ಒಬ್ಬ ಕಾಲೇಜು ಅಧ್ಯಾಪಕಿಯಾಗಿ ಏಳೆಂಟು ಕಾಲೇಜುಗಳಲ್ಲಿ ಕೆಲಸ ಮಾಡಿರುವ ಹಾಗೂ ಮೌಲ್ಯಮಾಪನ, ವಿಚಾರ ಸಂಕಿರಣ, ಪರೀಕ್ಷಾ ಮಂಡಳಿ ಮುಂತಾದವುಗಳ ದೆಸೆಯಿಂದಾಗಿ ಬೇರೆ ಅನೇಕ ಕಾಲೇಜುಗಳ ಅಧ್ಯಾಪಕರೊಡನೆ ಒಡನಾಡುವ ಅವಕಾಶ ಪಡೆದಿರುವ ನನಗೆ, ಕಾಲೇಜುಗಳ ಕನ್ನಡ ವಿಭಾಗಗಳ ಬಗ್ಗೆ,  ಓದುಗರೊಡನೆ ಹಂಚಿಕೊಳ್ಳಬೇಕೆನ್ನಿಸುವ ಒಂದು ಅನುಭವ ಇದೆ. ಅದೇನೆಂದರೆ, ಕನ್ನಡ ವಿಭಾಗಗಳ ಮನುಷ್ಯ ಪ್ರೀತಿ ಮತ್ತು ಅವು ಜನರನ್ನು ಒಳಗೊಳ್ಳುವ ರೀತಿ.   ನಾನು ಕೆಲಸ ಮಾಡಿದ ಕಾಲೇಜುಗಳಲ್ಲಿ ( ಮತ್ತು ಸಾಮಾನ್ಯವಾಗಿ  ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ) ಗರಿಷ್ಠ ಸಂಖ್ಯೆಯ ಉದ್ಯೋಗಿಗಳು […]

Page 4 of 4

Kannada Sethu. All rights reserved.