ಕಳೆದ ವಾರ ಪದವಿಪೂರ್ವ ಶಿಕ್ಷಣದ ಫಲಿತಾಂಶ ಬಂತಲ್ಲ, ಎಲ್ಲ ಮಾಧ್ಯಮಗಳಲ್ಲೂ ಅದರದೇ ಸುದ್ದಿ. ಎಲ್ಲರೂ ಇದರ ಬಗ್ಗೆಯೇ ಮಾತಾಡುತ್ತಾ, ಚರ್ಚಿಸುತ್ತಾ ಇದ್ದ ಸಂದರ್ಭದಲ್ಲಿ, ನನಗೆ ಪರಿಚಿತರಾದ ಕನ್ನಡ ಅಧ್ಯಾಪಕ ಮಿತ್ರರೊಬ್ಬರು ತಮ್ಮ ಮಗಳ ಪ.ಪೂ. ತರಗತಿಯ ಫಲಿತಾಂಶದ ಬಗ್ಗೆ ಹೇಳುತ್ತಾ, “ಅವ್ಳಿಗೆ 69% ಅಂಕ ಬಂದಿದೆ ಮೇಡಂ . ಕನ್ನಡ, ಇಂಗ್ಲಿಷ್ ನಲ್ಲೇ ಕಡಿಮೆ. ಅವರ ಕಾಲೇಜಲ್ಲಿ ಕನ್ನಡ, ಇಂಗ್ಲಿಷ್ ಗೆ ಸರಿಯಾಗಿ ಅಧ್ಯಾಪಕರೇ ಇಲ್ಲ. ನಾನೇ ಒಂದಿಷ್ಟು ಭಾಷಾಭ್ಯಾಸ ಹೇಳ್ಕೊಟ್ಟಿದ್ದೆ ಅವಳಿಗೆ ಕೊನೆಯಲ್ಲಿ, ಆದ್ರೂ ಹೇಳಿಕೊಳ್ಳುವಂತಹ […]
ಲಿಕ್ವಿಫೈಡ್ ಪೆಟ್ರೋಲಿಯಂ ಗ್ಯಾಸ್ – ದ್ರವೀಕೃತ ಪೆಟ್ರೋಲಿಯಂ ಅನಿಲ – ವಿವಿಧ ಪೆಟ್ರೋಲಿಯಂ ಅನಿಲಗಳು, ಮುಖ್ಯವಾಗಿ ಪ್ರೋಪೇನ್ ಮತ್ತು ಬ್ಯೂಟೇನ್ ಗಳನ್ನು ಒತ್ತಡ ಹಾಕಿ ದ್ರವಸ್ಥಿತಿಯಲ್ಲಿ ಇಟ್ಟಿರುವಂಥದ್ದು. ಇದನ್ನು ಚಾಲಕಯಂತ್ರದ ಇಂಧನವಾಗಿ ಬಳಸುತ್ತಾರೆ. ‘ಸಿಲಿಂಡರ್ ಹೆಡ್’ ಎಂಬ ಯಂತ್ರಭಾಗದಲ್ಲಿ ಈ ವಸ್ತುವು ತುಂಬ ಕಡಿಮೆ ಗಷ್ಟು ಅಥವಾ ಶೇಷ ಉಳಿಸುತ್ತದೆ ಎಂಬುದು ಇದಕ್ಕಿರುವ ಉತ್ತಮ ಗುಣವಾಗಿದೆ.
ಲಿಕ್ವಿಫಿಕೇಷನ್ ಆಫ್ ಗ್ಯಾಸಸ್ – ಅನಿಲಗಳ ದ್ರವೀಕರಣ – ಒಂದು ಅನಿಲದ ತಾಪಮಾನವು ಅದರ ನಿರ್ಧಾರಕ ತಾಪಮಾನಕ್ಕಿಂತ ಕಡಿಮೆ ಇದ್ದಾಗ, ಆ ಅನಿಲದ ಮೇಲೆ ಬಾಹ್ಯ ಒತ್ತಡವನ್ನು ಹಾಕಿದಾಗಷ್ಟೇ ಅದನ್ನು ದ್ರವೀಕರಿಸಬಹುದು.
ಲೈನ್ ಸ್ಪೆಕ್ಟ್ರಮ್ – ರೇಖಾತ್ಮಕ ವರ್ಣಪಟಲ – ಪ್ರತ್ಯೇಕ ಏಕರೇಖೆಗಳಿಂದ ಕೂಡಿರುವಂತಹ ಹೊರಸೂಸುವಿಕೆಯ ಅಥವಾ ಹೀರುವಿಕೆಯ ವರ್ಣಪಟಲ. ಇದರಲ್ಲಿ ಪ್ರತಿಯೊಂದು ಗೆರೆಯೂ ಒಂದು ಸ್ಪಷ್ಟವಾಗಿ ನಿರೂಪಿತವಾದ ತರಂಗಾಂತರಕ್ಕೆ ಸಂಬಂಧಿಸಿರುತ್ತದೆ.
ಲೈನ್ ಆಫ್ ಫೋರ್ಸ್ ( ಎಲೆಕ್ಟ್ರಿಕ್) – ಬಲರೇಖೆ (ವಿದ್ಯುತ್) – ಒಂದು ವಿದ್ಯುತ್ ಕ್ಷೇತ್ರ ಅಥವಾ ಕಾಂತಕ್ಷೇತ್ರದಲ್ಲಿನ ಕಲ್ಪಿತ ರೇಖೆ ಇದು. ಇದರ ಯಾವುದೇ ಬಿಂದುವಿನಲ್ಲಿನ ಸ್ಪರ್ಶರೇಖೆಯು ( ಟ್ಯಾಂಜೆಂಟ್) ಆ ಬಿಂದುವಿನಲ್ಲಿನ ವಿದ್ಯುತ್ ಕ್ಷೇತ್ರದ ದಿಕ್ಕನ್ನು ತೋರಿಸುತ್ತದೆ . ಈ ಬಲರೇಖೆಗಳು ಎಂದೂ ಒಂದನ್ನೊಂದು ದಾಟುವುದಿಲ್ಲ.
ಲೀನಿಯರ್ ಮೋಟಾರ್ – ರೇಖಾತ್ಮಕ ಯಂತ್ರಚಾಲಕ (ರೇಖಾತ್ಮಕ ಮೋಟಾರು) – ಒಂದು ರೀತಿಯ ವಿದ್ಯುತ್ ಪ್ರೇರಕ ಯಂತ್ರಚಾಲಕ. ಇದರಲ್ಲಿನ ಚಲಿಸದ ಭಾಗ(ಸ್ಟೇಟರ್) ಮತ್ತು ಚಲಿಸಿವ ಭಾಗ ( ರೋಟರ್) ಗಳು ಗುಂಡುಕಂಬದಂತಿರದೆ ನೇರವಾಗಿರುತ್ತವೆ ಹಾಗೂ ಸಮ ಅಕ್ಷವನ್ನು ಹೊಂದಿರುವ ಬದಲು ಸಮಾನಾಂತರವಾಗಿರುತ್ತವೆ.
ಲೀನಿಯರ್ ಮಾಡ್ಯುಲೇಷನ್ – ರೇಖಾತ್ಮಕ ಅಲೆಪರಿವರ್ತನೆ – ಒಯ್ಯಕ ಅಲೆಯ ಪರಿವರ್ತಿತ ಗುಣಲಕ್ಷಣವು ಶ್ರವ್ಯ ಆವರ್ತನಗತಿಯ ಒಂದು ಶ್ರೇಣಿಯ ಮೌಲ್ಯಕ್ಕೆ ಸಂಬಂಧಿಸಿದಂತೆ ಸಮಾನುಪಾತದಲ್ಲಿದ್ದರೆ, ಅದನ್ನು ರೇಖಾತ್ಮಕ ಅಲೆ ಪರಿವರ್ತನೆ ಎನ್ನುತ್ತಾರೆ.
ಲೀನಿಯರ್ ಎಕ್ಸ್ ಪ್ಯಾನ್ಶನ್ – ರೇಖಾತ್ಮಕ ವಿಸ್ತರಣೆ – ಒಂದು ವಸ್ತುವನ್ನು ಕಾಯಿಸಿದಾಗ ಅದರ ಉದ್ದದಲ್ಲಿ ಆಗುವ ಬದಲಾವಣೆ.
Like us!
Follow us!