ಲಾಂಗಿಟ್ಯೂಡಿನಲ್ ವೇವ್ – ರೇಖೀಯ ಅಲೆ (ನೀಳ ಅಲೆ ಅಥವಾ ಉದ್ದಕ್ಕೆ ಕಂಪಿಸುವ ಅಲೆ) – ಅಲೆಯು ಚಲಿಸುತ್ತಿರುವ ದಿಕ್ಲಿನಲ್ಲೇ ಕಣಗಳ ಸ್ಥಳಾಂತರವೂ ಆಗುತ್ತಿದ್ದರೆ ಅಂತಹ ಅಲೆಯನ್ನು ರೇಖೀಯ ಅಲೆ ಎನ್ನುತ್ತಾರೆ. ಉದಾಹರಣೆಗೆ ಶಬ್ಧದ ಅಲೆ.
ಲೋಕಲ್ ಆಸ್ಸಿಲೇಟರ್ – ಸ್ಥಳೀಯ ಆಂದೋಲಕ – ಅಲೆ ಸಂಯೋಜಕ ಅಥವಾ ಉಚ್ಚತರ ಅಲೆಸಂಯೋಜಕವಾಗಿರುವಂತಹ ಅಲೆಗ್ರಾಹಕದಲ್ಲಿರುವ ಆಂದೋಲಕ ಇದು. ಈ ಉಪಕರಣವು ರೇಡಿಯೊ ಅಲೆಗಳ ಆವರ್ತನ ಆಂದೋಲನವನ್ನು ಉತ್ಪತ್ತಿ ಮಾಡುತ್ತದೆ.
ಲಾಜಿಕ್ ಗೇಟ್ – ತರ್ಕ ವಿದ್ಯುದ್ವಾರ – ಸರಳವಾದ ತಾರ್ಕಿಕ ಕ್ರಿಯೆಗಳನ್ನು ಮಾಡುವ ಸಾಮರ್ಥ್ಯ ಇರುವ ಒಂದು ವಿದ್ಯುನ್ಮಂಡಲ ಇದು. ಉದಾಹರಣೆಗೆ, ‘ಮತ್ತು’, ‘ಇದು ಅಥವಾ ಅದು’, ‘ಇದೂ ಅಲ್ಲ – ಅದೂ ಅಲ್ಲ’ ಇಂಥ ಸೂಚನೆಗಳು.
ಲೋಡ್ ಲೈನ್ – ವಿದ್ಯುದ್ಬಲ ರೇಖೆ – ಒಂದು ವಿದ್ಯುನ್ಮಂಡಲವು ಪಡೆದುಕೊಳ್ಳುತ್ತಿರುವ ವಿದ್ಯುದ್ಬಲದ ಹಂಚಿಕೆಯ ಚಿತ್ರರೂಪೀ ಪ್ರಸ್ತುತಿ ಇದು.
ಲಾಯ್ಡ್ಸ್ ಮಿರರ್ – ಲಾಯ್ಡ್ ರ ಕನ್ನಡಿ – ಹಂಫ್ರಿ ಲಾಯ್ಡ್ ಎಂಬ ಐರ್ಲೆಂಡ್ ನ ವಿಜ್ಞಾನಿಯು 1834 ರಲ್ಲಿ ಕಂಡುಹಿಡಿದ ವಿದ್ಯಮಾನ ಇದು. ಒಂದೇ ಬೆಳಕಿನ ಆಕರವನ್ನು ಬಳಸಿ ಸುಂದರವಾದ ಕಪ್ಪು – ಬಿಳುಪು ಪಟ್ಟಿಗಳನ್ನು (interference fringes) ಪಡೆಯಲು ಸಾಧ್ಯ ಆಗುವಂತೆ ಇದನ್ನು ರಚಿಸಲಾಗಿರುತ್ತದೆ ; ಆದರೆ ಎರಡು ಬೆಳಕಿನ ಆಕರಗಳಿರುವಂತೆ ಭಾಸವಾಗುತ್ತದೆ.
ಲಿಕ್ವಿಡ್ ಏರ್ – ದ್ರವರೂಪೀ ನೆಲ – ದ್ರವಾನಿಲ – ಮಾಸಿದ ನೀಲಿ ಬಣ್ಣವುಳ್ಳ ಒಂದು ದ್ರವ. ಇದರಲ್ಲಿ ಮುಖ್ಯವಾಗಿ ದ್ರವರೂಪೀ ಆಮ್ಲಜನಕ (ಕುದಿಬಿಂದು : -183 ಡಿಗ್ರಿ ಸೆಂಟಿಗ್ರೇಡ್), ದ್ರವರೂಪೀ ಜಲಜನಕ ( ಕುದಿಬಿಂದು : -196 ಡಿಗ್ರಿ ಸೆಂಟಿಗ್ರೇಡ್) ಇರುತ್ತವೆ.
ಲಿಕ್ವಿಡ್ – ದ್ರವ – ವಸ್ತುವಿನ ಹರಳುರೂಪೀ ಸ್ಥಿತಿ ಮತ್ತು ಅನಿಲಸ್ಥಿತಿಗಳ ನಡುವೆ ಇರುವಂತಹ (ವಸ್ತು)ಸ್ಥಿತಿ ಇದು. ಈ ಸ್ಥಿತಿಯ ವಸ್ತುವಿಗೆ ತಾನಿರುವ ಪಾತ್ರೆಯ ಆಕಾರವನ್ನು ಪಡೆದುಕೊಳ್ಳುವ ಗುಣವಿದೆ.
Like us!
Follow us!