ಸತ್ಯನಾರಾಯಣ ಪೂಜೆಗೆ ಹೋಗಿದ್ದಕ್ಕೆ ಪ್ರಾಪ್ತಿಯಾಯ್ತು ಹೊಸಪದ ಫಲ!

ಇದು ವಾಸ್ತವಿಕವಾಗಿ ನಡೆದ ಘಟನೆ. 12-07-2026ನೇ ಭಾನುವಾರ ನಮ್ಮ ಕುಟುಂಬ ಸ್ನೇಹಿತರಾದ ಶ್ರೀ ಶಂಕರ್ ಶಾಸ್ತ್ರಿಯವರು, ತಮ್ಮ ಮಗಳು ಶರ್ಮಿಳಾ, ( ನನ್ನ ಭರತನಾಟ್ಯ ಶಿಷ್ಯೆ) ಹತ್ತನೇ ತರಗತಿಯಲ್ಲಿ ಗರಿಷ್ಠ ಅಂಕಗಳನ್ನು ಗಳಿಸಿ ತೇರ್ಗಡೆಯಾದ ಸಂತೋಷಕ್ಕಾಗಿ, ವಿಜಯನಗರದ ಹತ್ತಿರದ ಪಿಎಫ್ ಬಡಾವಣೆಯಲ್ಲಿನ ತಮ್ಮ ಮನೆಯಲ್ಲಿ ಸತ್ಯನಾರಾಯಣ ಸ್ವಾಮಿಯ ಪೂಜೆಯನ್ನು ಏರ್ಪಡಿಸಿದ್ದರು‌. ಸಾಂಗವಾಗಿ ನಡೆದ ಪೂಜೆಯ ನಂತರ ಅವರು ಏರ್ಪಡಿಸಿದ್ದ ಭೋಜನದ ಸಮಯದಲ್ಲಿ ನಡೆದದ್ದು ಈಗ ನಾನು ವಿವರಿಸಲಿರುವ ಪದಪ್ರಾಪ್ತಿ ಘಟನೆ. ಆ ಸಮಾರಂಭಕ್ಕೆ ಶಂಕರ್ ಶಾಸ್ತ್ರಿಯವರಿಗೆ ಪರಿಚಿತರಾದ […]

Magnetic shielding

ಮ್ಯಾಗ್ನೆಟಿಕ್ ಶೀಲ್ಡಿಂಗ್ – ಕಾಂತೀಯ ತೆರೆ – ಅತಿ ಹೆಚ್ಚು ಪ್ರವೇಶಸಾಧ್ಯತೆ ಇರುವ ಒಂದು ವಸ್ತುವಿನಿಂದ ಮಾಡಲ್ಪಟ್ಟಂತಹ ಒಂದು‌ ಪರದೆ. ಇದನ್ನು ಯಾವುದಾದರೂ ಉಪಕರಣಗಳನ್ನು ಅನಗತ್ಯ ಕಾಂತಕ್ಷೇತ್ರಗಳ‌ ಪರಿಣಾಮದಿಂದ ರಕ್ಷಿಸಲು ಬಳಸುತ್ತಾರೆ.

Magnetic scattering

ಮ್ಯಾಗ್ನೆಟಿಕ್ ಸ್ಕ್ಯಾಟರಿಂಗ್ – ಕಾಂತೀಯ ಚದುರುವಿಕೆ – ಪರಮಾಣುಗಳ ತಿರುಗುಬಲದೊಂದಿಗೆ ನ್ಯೂಟ್ರಾನುಗಳ ತಿರುಗುಬಲವು ಅಂತರ್ ಕ್ರಿಯೆ ನಡೆಸಿ ( ಅಂದರೆ ತೊಡಗಿಕೊಂಡು) ನ್ಯೂಟ್ರಾನುಗಳು ಚದುರುವಂತಹ ಪ್ರಕ್ರಿಯೆ ಇದು.

Magnetic resistance

ಮ್ಯಾಗ್ನೆಟಿಕ್ ರೆಸಿಸ್ಟೆನ್ಸ್ – ಕಾಂತೀಯ ಪ್ರತಿರೋಧ – ಇದು ಕಾಂತೀಯ ಚಾಲಕ ಬಲಕ್ಕೂ ಕಾಂತೀಯ ಬಲರೇಖೆಗಳಿಗೂ ಇರುವ ಅನುಪಾತ. ಇದು ಕಾಂತೀಯ ಬಲರೇಖೆಗಳಿಗಿರುವ ವಿರೋಧವನ್ನು ಸೂಚಿಸುತ್ತದೆ.

Magnetic probe

ಮ್ಯಾಗ್ನೆಟಿಕ್ ಪ್ರೋಬ್ – ಕಾಂತೀಯ ಪತ್ತೆ ಸಾಧನ – ಒಂದು ಚಿಕ್ಕ ವಾಹಕ ಸುರುಳಿ ಇದು. ಇದನ್ನು ಒಂದು ಕಾಂತಕ್ಷೇತ್ರದಲ್ಲಿ‌ ಇಟ್ಟು ಆ ಕಾಂತಕ್ಷೇತ್ರದ ಸಾಮರ್ಥ್ಯದಲ್ಲಿ‌ ಆಗುವ ಬದಲಾವಣೆಗಳನ್ನು ಅಳೆಯುತ್ತಾರೆ.

Magnetic potential

ಮ್ಯಾಗ್ನೆಟಿಕ್ ಪೊಟೆನ್ಶಿಯಲ್ – ಕಾಂತೀಯ ಅಂತಸ್ಥ ಬಲ – ಕಾಂತೀಯ ಚಾಲಕ ಬಲ‌. ಇದು ಒಂದು ವಿದ್ಯುನ್ಮಂಡಲದಲ್ಲಿನ ಚಾಲಕ ಬಲಕ್ಕೆ  ಸಂವಾದಿಯಾಗಿರುವಂಥದ್ದು ಎನ್ನಬಹುದು.

ಕನ್ನಡ ಗಾದೆಮಾತು – ಧೈರ್ಯವಿದ್ದವರಿಗೇ ದೈವದ ಸಹಾಯ.

ಧೈರ್ಯ ಎಂಬುದು ಜೀವನದಲ್ಲಿ ತುಂಬ ಮುಖ್ಯ. ಈಜು ಕಲಿಯುವುದರಿಂದ ಹಿಡಿದು ಮೇಲಧಿಕಾರಿಗಳು ಮಾಡಿದ ತಪ್ಪನ್ನು ತಪ್ಪು ಎಂದು ಅವರ ಎದುರಿಗೇ ಅನ್ನುವುದರ ತನಕ, ವಾಹನ ತುಂಬಿರುವ ರಸ್ತೆ ದಾಟುವುದರಿಂದ ಹಿಡಿದು, ಕಹಿಯಾದರೂ ಸತ್ಯವನ್ನು ಬಾಯಿಬಿಟ್ಟು ಹೇಳುವ ತನಕ  ಪ್ರತಿಯೊಂದಕ್ಕೂ ಧೈರ್ಯ ಬೇಕು‌. ಅದಕ್ಕೇ ಧೈರ್ಯವನ್ನು ಎಲ್ಲ ಸದ್ಗುಣಗಳ ತಾಯಿ ಅನ್ನುತ್ತದೆ ಒಂದು ಇಂಗ್ಲಿಷ್ ಸೂಕ್ತಿ. ಆಸ್ತಿಕರು ಅಂದರೆ ದೇವರನ್ನು ನಂಬುವವರು ಸಹ ಧೈರ್ಯ ಇದ್ದವರಿಗೆ ಮಾತ್ರ ದೈವವು ಸಹಾಯ ಮಾಡುತ್ತದೆ ಎನ್ನುತ್ತಾರೆ! ಅಂದರೆ ಯಾವುದೇ ಸವಾಲಿನ ಕೆಲಸವಾದರೂ […]

ಸೌಂದರ್ಯ ಮೀಮಾಂಸೆಯ ಮೊದಲ ಪಾಠ ಹೇಳಿಕೊಟ್ಟ ನಮ್ಮ ಸರೋಜಿನಿ ಮೇಡಂ 

ನಾನು ಮಂಗಳೂರಿನ ಕೆನರಾ  ಶಾಲೆಯಲ್ಲಿ, ಮಾಧ್ಯಮಿಕ ಹಂತದಲ್ಲಿ ಓದುತ್ತಿದ್ದಾಗ ನಮಗೆ ‘ಸರೋಜಿನಿ ಟೀಚರ್’  ಎಂಬ ಕನ್ನಡ ಅಧ್ಯಾಪಕಿ ಇದ್ದರು‌. ಎತ್ತರಕ್ಕೆ, ಬೆಳ್ಳಗಿದ್ದು, ತುಸು ಸ್ಥೂಲ ಕಾಯದ, ದೊಡ್ಡ ಹಣೆಬೊಟ್ಟು ಇಡುತ್ತಿದ್ದವರು ಆಕೆ. ನಗುತ್ತಾ, ನಗಿಸುತ್ತಾ, ತಮಾಷೆಗೆ ಗದರುತ್ತಾ ಖುಷಿಖುಷಿ ಲಹರಿಯಲ್ಲಿ ಪಾಠ ಮಾಡುತ್ತಿದ್ದ ಶಿಕ್ಷಕಿ ಅವರು. ಅವರಿಂದ ಕಲಿತ ಸೌಂದರ್ಯ ಪ್ರಜ್ಞೆಯ ಮೊದಲ ಪಾಠ ಈಗಲೂ ನೆನಪಿದೆ ನನಗೆ.  ಒಂದು ದಿನ ಈ ಮೇಡಂ ಅವರು  ನಮ್ಮನ್ನು ಅಂದರೆ ಎಂಟು-ಹತ್ತು ಜನ ವಿದ್ಯಾರ್ಥಿನಿಯರನ್ನು ಬೇರೆ ಶಾಲೆಯಲ್ಲಿ ನಡೆಯುತ್ತಿದ್ದ […]

Magnetic pole strength

ಮ್ಯಾಗ್ನೆಟಿಕ್ ಪೋಲ್ ಸ್ಟ್ರೆಂಗ್ತ್ – ಕಾಂತೀಯ ಧ್ರುವ ಶಕ್ತಿ – ಒಂದು ಅಯಸ್ಕಾಂತದ ಧ್ರುವಶಕ್ತಿಯನ್ನು ಆ ಅಯಸ್ಕಾಂತಕ್ಕೆ ವಸ್ತುಗಳು ಆಕರ್ಷಿತವಾಗುವ ಬಲವೆಂದು ವ್ಯಾಖ್ಯಾನಿಸಲಾಗುತ್ತದೆ.

Magnetic pole

ಮ್ಯಾಗ್ನೆಟಿಕ್ ಪೋಲ್ – ಕಾಂತೀಯ ಧ್ರುವ ( ಕಾಂತ ಧ್ರುವ) – ಒಂದು ಅಯಸ್ಕಾಂತದ ಪ್ರತಿಯೊಂದು ತುದಿಯಲ್ಲೂ ಕಾಂತಕ್ಷೇತ್ರವು ಅತ್ಯಂತ ಪ್ರಬಲವಾಗಿರುತ್ತದೆ‌. ಈ ತುದಿಯನ್ನು ಕಾಂತೀಯ ಧ್ರುವ ಅಥವಾ ಕಾಂತ ಧ್ರುವ ಎನ್ನುತ್ತಾರೆ.

Page 3 of 4

Kannada Sethu. All rights reserved.