ಮ್ಯಾಗ್ನೆಟಿಕ್ ಪರ್ಮಿಯೆಬಿಲಿಟಿ – ಕಾಂತೀಯ ಪ್ರವೇಶಸಾಧ್ಯತೆ – ಕಾಂತಕ್ಷೇತ್ರವೊಂದು ಎಷ್ಟರ ಮಟ್ಟಿಗೆ ಒಂದು ವಸ್ತುವಿನೊಳಗೆ ಪ್ರವೇಶಿಸಬಹುದು ಎಂಬುದರ ಅಳತೆ ಇದು.
ಮ್ಯಾಗ್ನೆಟಿಕ್ ಪೆಂಡ್ಯುಲಂ – ಕಾಂತೀಯ ಆಂದೋಲಕ – ದಾರದಿಂದ ತೂಗು ಹಾಕಲ್ಪಟ್ಟ ಒಂದು ಸರಳ ಆಯತಾಕಾರದ ಅಯಸ್ಕಾಂತ ಬಿಲ್ಲೆ. ಇದಕ್ಕೆ ಅಡ್ಡ ದಿಕ್ಕಿನಲ್ಲಿರುವ ಕಾಂತಕ್ಷೇತ್ರವನ್ನು ಹಾಯಿಸಿದಾಗ ಇದು ಲೋಲಕದಂತೆ ಆ ಕಡೆಗೊಮ್ಮೆ ಈ ಕಡೆಗೊಮ್ಮೆ ಚಲಿಸಲಾರಂಭಿಸುತ್ತದೆ.
ಮ್ಯಾಗ್ನೆಟಿಕ್ ಮೋನೋಪೋಲ್ – ಕಾಂತೀಯ ಏಕಧ್ರುವ – ಇರಬಹುದು ಎಂದು ಊಹಿಸಲಾದ ಆದರೆ ಇನ್ನೂ ಪತ್ತೆ ಮಾಡಲ್ಪಟ್ಟಿರದ ಒಂದು ಮೂಲಭೂತ ಕಣ. ಇದು ಪ್ರತ್ಯೇಕಿಸಲ್ಪಟ್ಟ ಉತ್ತರ ಧ್ರುವ ಅಥವಾ ದಕ್ಷಿಣ ಧ್ರುವಕ್ಕೆ ಸಮ.
Like us!
Follow us!