Conservation of mass and energy

ದ್ರವ್ಯರಾಶಿ ಮತ್ತು ಶಕ್ತಿಯ ನಿಯತತೆ – ತನ್ನಷ್ಟಕ್ಕೆ ತಾನು ಪ್ರತ್ಯೇಕವಾಗಿರುವ ವ್ಯವಸ್ಥೆಯಲ್ಲಿ ವಿಶ್ರಾಂತ ದ್ರವ್ಯರಾಶಿ ಶಕ್ತಿ+ಚಲನ ಶಕ್ತಿ+ಅಂತಃ ಸಾಮರ್ಥ್ಯಶಕ್ತಿ ಇವುಗಳ‌ ಮೊತ್ತವು ಯಾವಾಗಲೂ ನಿಯತವಾಗಿರುತ್ತದೆ.

Conservation of energy, law of

ಶಕ್ತಿಯ ನಿಯತತೆಯ ನಿಯಮ – ಈ ನಿಯಮದ ಪ್ರಕಾರ ಶಕ್ತಿಯನ್ನು ಸೃಷ್ಟಿ ಮಾಡಲೂ ಸಾಧ್ಯವಿಲ್ಲ, ನಾಶ ಮಾಡಲೂ ಸಾಧ್ಯವಿಲ್ಲ. ‌ಆದರೆ ಒಂದು ರೂಪದಿಂದ ಇನ್ನೊಂದು ರೂಪಕ್ಕೆ ಅದನ್ನು ‌ಪರಿವರ್ತಿಸಲು ಸಾಧ್ಯವಿದೆ.

Conservation of charge

ವಿದ್ಯುದಂಶದ ನಿಯತತೆ – ತನ್ನಷ್ಟಕ್ಕೆ ತಾನು ಪ್ರತ್ಯೇಕವಾಗಿರುವ ಒಂದು‌ ವ್ಯವಸ್ಥೆಯಲ್ಲಿರುವ ವಿದ್ಯುದಂಶವು ನಿಯತವಾಗಿರುತ್ತದೆ(ನಿಯತ = ಸ್ಥಿರ = ಎಂದೂ ಬದಲಾಗದ್ದು).

Conjugate points

ಜೋಡಿ ಬಿಂದುಗಳು‌ – ಮಸೂರದ ಎರಡೂ ಬದಿಗಳಲ್ಲಿರುವ ಒಂದು‌ ಜೋಡಿ ಬಿಂದುಗಳಿವು. ಇವು ಹೇಗಿರುತ್ತವೆ ಅಂದರೆ ಒಂದು ಬಿಂದುವಿನಲ್ಲಿ ಇಟ್ಟ ಒಂದು ವಸ್ತುವಿನ ಬಿಂಬವು ಇನ್ನೊಂದರಲ್ಲಿ ಮೂಡುತ್ತದೆ.

“ಐ ಲವ್ ದ  ನಾಯಿಮರಿ ಸಾಂಗ್ ಮ್ಯಾಮ್”!

ನಮ್ಮ ಚಿತ್ರನಾಟ್ಯ ಫೌಂಡೇಶನ್ ಭರತನಾಟ್ಯ ಶಾಲೆಯ ಪುಟ್ಟ ಚಾರ್ವಿ ಹೇಳಿದ ಮಾತು ಇದು. ಮನೆಯಲ್ಲಿ ‌ಮಾರ್ವಾಡಿ ಭಾಷೆ ಮಾತಾಡುವ, ಬೆಣ್ಣೆ ಬೊಂಬೆಯ ಹಾಗೆ ಮುದ್ದಾಗಿರುವ, ಐದು ವರ್ಷ ವಯಸ್ಸಿನ ಮಗು ಅದು. ಕಳೆದ ಏಳೆಂಟು ತಿಂಗಳಿಂದ ನಮ್ಮಲ್ಲಿ ನಾಟ್ಯ ಕಲಿಯುತ್ತಿದೆ.         ಭರತನಾಟ್ಯದ ಪ್ರಾರಂಭದ ಹಂತದಲ್ಲಿ ಬರೀ ಅಡವು(ಹೆಜ್ಜೆ)ಗಳನ್ನು ಹೇಳಿಕೊಟ್ಟರೆ ಮಕ್ಕಳಿಗೆ ಬೇಸರ ಆಗಬಹುದೆಂದು ಪ್ರತಿ ತರಗತಿಯಲ್ಲೂ ಯಾವುದಾದರೊಂದು ಶಿಶುಗೀತೆಗೆ ಅವರಿಗೆ ನೃತ್ಯ ಹೇಳಿಕೊಡುವ ಅಭ್ಯಾಸ ನಮ್ಮದು. ಇದೇ ರೀತಿಯಲ್ಲಿ, ‘ಕನ್ನಡದ ಮಕ್ಕಳ ಸಾಹಿತ್ಯದ ರಾಜ […]

ಕನ್ನಡ ನಾಣ್ಣುಡಿ  – ಪರಸೊತ್ತು ಪಾಷಾಣ.

ನಾವು ಚಿಕ್ಕಮಕ್ಕಳಿದ್ದಾಗಿನಿಂದ ಕೇಳಿ ನಮ್ಮ ಮನಸ್ಸುಗಳಲ್ಲಿ ಅಚ್ಚೊತ್ತಿರುವ ಮಾತು ಇದು. ಇದರ ಅರ್ಥವೇನೆಂದರೆ, ಬೇರೆಯವರ ಆಸ್ತಿ ಅಥವಾ ಹಣವು ನಮ್ಮ ಮಟ್ಟಿಗೆ ವಿಷ ಇದ್ದ ಹಾಗೆ.‌ ಅದನ್ನು ನಾವು ಮುಟ್ಟಬಾರದು. ಹಣದ ವಿಷಯದಲ್ಲಿ‌ ಪ್ರಾಮಾಣಿಕತೆಯನ್ನು ರೂಢಿಸಿಕೊಳ್ಳುವುದಕ್ಕೆ ಇದಕ್ಕಿಂತ ಉತ್ತಮ ಬುದ್ಧಿಮಾತು ಇರಲು ಸಾಧ್ಯವೇ? ಲಂಚಕೋರರು, ಮೋಸಗಾರರು ಅವಶ್ಯವಾಗಿ ಅರಿಯಬೇಕಾದ ಮಾತೆಂದರೆ ಇದೇ. Kannada saying – Parasoththu Pashaana( Other’s asset or money is poison to us).  This good old saying in Kannada […]

Conduction

ವಾಹಕತೆ – ವಸ್ತುವಿನ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಆ ವಸ್ತುವಿನ ಚಲನೆಯಿಲ್ಲದೆ ಶಕ್ತಿಯು ಹರಿಯುವ ಕ್ರಿಯೆ. ಉದಾಹರಣೆಗೆ –  ಉಷ್ಣವಾಹಕತೆ, ವಿದ್ಯುತ್ ವಾಹಕತೆ.

Conductance

ವಾಹಕತ್ವ – ಒಂದು‌ ವಸ್ತುವಿನಲ್ಲಿ ಎಷ್ಟು ಸುಲಭವಾಗಿ ವಿದ್ಯುತ್ ಹರಿಯಬಲ್ಲುದು‌ ಎಂಬುದರ ಅಳತೆಯೇ ಅದರ ವಾಹಕತ್ವ.

Condensor

ವಿದ್ಯುತ್ ಸಂಗ್ರಾಹಕ – ವಿದ್ಯುದಂಶವನ್ನು ಸಂಗ್ರಹಿಸಬಲ್ಲ  ವಾಹಕ‌ ಅಥವಾ ವಾಹಕಗಳಿಂದ ಕೂಡಿದ ಒಂದು ವ್ಯವಸ್ಥೆ. ಇದಕ್ಕೆ capacitor ಎಂಬ ಹೆಸರೂ ಇದೆ. 

Condensation

ಹನಿಗಟ್ಟುವಿಕೆ ಅಥವಾ ಬಾಷ್ಪೀಭವನ –  ‌ವಸ್ತುವಿನ ಅವಸ್ಥೆಯು ಆವಿಯಿಂದ ದ್ರವರೂಪಕ್ಕೆ ಬದಲಾಗುವುದು.

Page 100 of 130

Kannada Sethu. All rights reserved.