ಮಾಲ್ಟರ್ ಎಫೆಕ್ಟ್ – ಮಾಲ್ಟರ್ ಪರಿಣಾಮ‌- ಅಮೇರಿಕಾದ ಭೌತವಿಜ್ಞಾನಿ ಲ್ಯೂಯಿಸ್ ಮಾಲ್ಟರ್ (28-04-1907 ರಿಂದ 07-05-1985) ಕಂಡುಹಿಡಿದು ಮೊದಲು ವಿವರಿಸಿದ ಪರಿಣಾಮ ಇದು‌. ಒಂದು ಅವಾಹಕ ಮೇಲ್ಮೈ ಪೊರೆಯುಳ್ಳ ಲೋಹವೊಂದು ಹೆಚ್ಚಿನ‌ ಪ್ರಮಾಣದಲ್ಲಿ ಎಲೆಕ್ಟ್ರಾನುಗಳನ್ನು‌ ಹೊತಸೂಸುವ ಪ್ರಕ್ರಿಯೆ ಇದು‌. ಉದಾಹರಣೆಗೆ ಉತ್ಕರ್ಷಿಸಿದ  ( ಆಕ್ಸೈಡೀಕರಿಸಿದ)   ನಂತರ ಸೀಸಿಯಂ ಆಕ್ಸೈಡನ್ನು ಲೇಪಿಸಿದ ಅಲ್ಯುಮಿನಿಯಂ ಲೋಹ.