ನನ್ನ ಮಗಳು ಓದುತ್ತಿರುವ ಮಣಿಪಾಲ(ಉಡುಪಿ ಜಿಲ್ಲೆ)ದ ಹೋಟಲೊಂದರಲ್ಲಿ ಹಾಕಿದ್ದ ಪ್ರಕಟಣಾ ಫಲಕದಲ್ಲಿ ನನ್ನ ಕಣ್ಣಿಗೆ ಬಿದ್ದ ವಾಕ್ಯ ಇದು – “ಬಿಸಿ Jalebiಯ Crispy ಬೈಟನ್ನು ಸವಿಯಿರಿ”. ಐದು ಪದಗಳಿರುವ ಕನ್ನಡ ವಾಕ್ಯ ಇದು. ಇದರಲ್ಲಿ ’ಬಿಸಿ’ ಮತ್ತು ‘ಸವಿಯಿರಿ’ ಎರಡೂ ಅಚ್ಚ ಕನ್ನಡದ ಪದಗಳು. ಇನ್ನು ಮೂರು ಪದಗಳಲ್ಲಿ ಎರಡು ಇಂಗ್ಲಿಷ್ ಭಾಷೆಯಲ್ಲಿಯೇ ಬರೆದ ಪದಗಳಾದರೆ( Jalebi, Crispy), ಬೈಟನ್ನು ಪದ bite ಎಂಬ ಇಂಗ್ಲಿಷ್ ಕ್ರಿಯಾಪದವನ್ನು ಕನ್ನಡದ ದ್ವಿತೀಯ ವಿಭಕ್ತಿ ಪ್ರತ್ಯಯವಾದ ‘ಅನ್ನು’ವನ್ನು ಸೇರಿಸಿ – […]
ನಿಯತ ಕ್ಷೇತ್ರ – ಶಕ್ತಿಯು ನಿಯತವಾಗಿರುವ ಭೌತಿಕ ವ್ಯವಸ್ಥೆಗಳ ಬಲಗಳನ್ನು ಸೂಚಿಸುವ ದಿಶಾಯುತ(ದಿಕ್ಕುಳ್ಳ) ಕ್ಷೇತ್ರಗಳು.
ದ್ರವ್ಯರಾಶಿ ಮತ್ತು ಶಕ್ತಿಯ ನಿಯತತೆ – ತನ್ನಷ್ಟಕ್ಕೆ ತಾನು ಪ್ರತ್ಯೇಕವಾಗಿರುವ ವ್ಯವಸ್ಥೆಯಲ್ಲಿ ವಿಶ್ರಾಂತ ದ್ರವ್ಯರಾಶಿ ಶಕ್ತಿ+ಚಲನ ಶಕ್ತಿ+ಅಂತಃ ಸಾಮರ್ಥ್ಯಶಕ್ತಿ ಇವುಗಳ ಮೊತ್ತವು ಯಾವಾಗಲೂ ನಿಯತವಾಗಿರುತ್ತದೆ.
ಶಕ್ತಿಯ ನಿಯತತೆಯ ನಿಯಮ – ಈ ನಿಯಮದ ಪ್ರಕಾರ ಶಕ್ತಿಯನ್ನು ಸೃಷ್ಟಿ ಮಾಡಲೂ ಸಾಧ್ಯವಿಲ್ಲ, ನಾಶ ಮಾಡಲೂ ಸಾಧ್ಯವಿಲ್ಲ. ಆದರೆ ಒಂದು ರೂಪದಿಂದ ಇನ್ನೊಂದು ರೂಪಕ್ಕೆ ಅದನ್ನು ಪರಿವರ್ತಿಸಲು ಸಾಧ್ಯವಿದೆ.
ವಿದ್ಯುದಂಶದ ನಿಯತತೆ – ತನ್ನಷ್ಟಕ್ಕೆ ತಾನು ಪ್ರತ್ಯೇಕವಾಗಿರುವ ಒಂದು ವ್ಯವಸ್ಥೆಯಲ್ಲಿರುವ ವಿದ್ಯುದಂಶವು ನಿಯತವಾಗಿರುತ್ತದೆ(ನಿಯತ = ಸ್ಥಿರ = ಎಂದೂ ಬದಲಾಗದ್ದು).
ಜೋಡಿ ಬಿಂದುಗಳು – ಮಸೂರದ ಎರಡೂ ಬದಿಗಳಲ್ಲಿರುವ ಒಂದು ಜೋಡಿ ಬಿಂದುಗಳಿವು. ಇವು ಹೇಗಿರುತ್ತವೆ ಅಂದರೆ ಒಂದು ಬಿಂದುವಿನಲ್ಲಿ ಇಟ್ಟ ಒಂದು ವಸ್ತುವಿನ ಬಿಂಬವು ಇನ್ನೊಂದರಲ್ಲಿ ಮೂಡುತ್ತದೆ.
ವಾಹಕತೆ – ವಸ್ತುವಿನ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಆ ವಸ್ತುವಿನ ಚಲನೆಯಿಲ್ಲದೆ ಶಕ್ತಿಯು ಹರಿಯುವ ಕ್ರಿಯೆ. ಉದಾಹರಣೆಗೆ – ಉಷ್ಣವಾಹಕತೆ, ವಿದ್ಯುತ್ ವಾಹಕತೆ.
Like us!
Follow us!