ಎಮ್ಮೆಗೆ ನೀರೆಂದರೆ ಬಹಳ ಇಷ್ಟ ಎಂಬುದು‌ ಎಲ್ಲರಿಗೂ ಗೊತ್ತಿರುವ ವಿಷಯ. ಸದಾ ನೀರಿನಲ್ಲೇ ಇರಲು ಇಷ್ಟ ಪಡುವ ಪ್ರಾಣಿ ಅದು.‌ ಹೀಗಾಗಿ ಮಳೆ ಬಂತೆಂದರೆ ಮನುಷ್ಯರು ಅಥವಾ ಬೇರೆ ಪ್ರಾಣಿಗಳು ತಡಬಡಾಯಿಸಿ‌, ಮಳೆಯಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಸೂರನ್ನು ಹುಡುಕಿಕೊಂಡು  ಓಡುವಂತೆ ಎಮ್ಮೆ ಓಡುವುದಿಲ್ಲ. ತನ್ನ ಮೇಲೆ ಧಾರಾಕಾರ ಮಳೆ ಬೀಳುತ್ತಿದ್ದರೂ ತನಗೆ ಏನೂ ಆಗಿಯೇ ಇಲ್ಲ ಎಂಬಂತೆ ಆರಾಮಾಗಿ ನಿಂತಿರುತ್ತದೆ ಅಥವಾ ನಡೆಯುತ್ತಿರುತ್ತದೆ. ಅದರ ಮೈಯಲ್ಲಿ ಸಾಕಷ್ಟು ಬೆವರು  ಗ್ರಂಥಿಗಳಿಲ್ಲ‌, ತನ್ನ ಮೈಯನ್ನು ತಂಪಾಗಿ ಇಟ್ಟುಕೊಳ್ಳಲು ಅದು ಹೀಗೆ ಮಾಡುತ್ತೆ ಇದಕ್ಕಿರುವ ವೈಜ್ಞಾನಿಕ ವಿವರಣೆ. ಅದು ಹಾಗಿರಲಿ, ಜನರಿಗೆ ಮಾತ್ರ ತನ್ನ ಮೇಲೆ ಮಳೆ ಬಿದ್ದರೂ ಸುಮ್ಮನೆ ಆರಾಮಾಗಿರುವ ಎಮ್ಮೆಯನ್ನು‌‌ ನೋಡಿದರೆ ಅದು ತೀರಾ ನಿರ್ಲಕ್ಷ ್ಯದ ಪ್ರಾಣಿ ಎಂಬ ಭಾವನೆ ಬರುತ್ತದೆ, ಅದರ ಮೇಲೆ ಸ್ವಲ್ಪ ಸಿಟ್ಟು ಕೂಡ ಬರುತ್ತೆ! 

ಅಂದ ಹಾಗೆ, ಕೆಲವು ಜನರು ಯಾರೇ ತಮ್ಮನ್ನು  ಬಯ್ದರೂ, ಹೀಯಾಳಿಸಿದರೂ, ಚುಚ್ಚು ಮಾತಾಡಿದರೂ ಏನೂ ಆಗಿಯೇ ಇಲ್ಲ ಎಂಬಂತೆ ಇರುತ್ತಾರೆ. ಇಂಥ ಸ್ವಭಾವದವರನ್ನು ನೋಡಿದಾಗ ಜನರು ‘ಅಯ್ಯೋ, ಎಷ್ಟು ಹೇಳಿದ್ರೂ ಅಷ್ಟೆ. ‌ಅವ್ನೇನೂ ಜಗ್ಗಲ್ಲ, ಬಗ್ಗಲ್ಲ. ಎಮ್ಮೆ ಮೇಲೆ ಮಳೆ ಬಿದ್ದಂಗೆ.‌ ಏನಂದ್ರೂ ಮಿಸುಕಾಡಲ್ಲ ಬಿಡಿ ಅವ್ನು’ ಎನ್ನುತ್ತಾರೆ. ಒಟ್ಟಿನಲ್ಲಿ, ಮನುಷ್ಯರ ದೃಷ್ಟಿಯಿಂದ, ಗ್ರಾಮೀಣ ಬದುಕಿನ‌ ಅನುಭವಾಧಾರಿತ ಜಾಣ್ಣುಡಿ‌ ಅಲ್ಲವೆ ಈ‌ ಗಾದೆಮಾತು? ಆದರೆ, ಎಮ್ಮೆಗೆ ಈ ಮಾತು ಅರ್ಥ ಆಗಿಬಿಟ್ಟರೆ ಏನನ್ನಿಸುತ್ತೋ!! 

Kannada proverb – Emme mele male biddange (It is just Like raining on buffalo).

In villages of Karnataka, it is a common sight to see buffalos roaming around everywhere. It is observed that, it it rains, unlike other animals cow, dog and cat, the buffalo does not run for cover! It keeps standing as it is, or keeps walking as if nothing has happened! It looks like even it enjoys the rain drops falling on it. 

The scientific reason behind this is to compensate for the lack of sweat glands on its body. But people of Kannada region take this nature of buffalo to critisize men and women who do not bother or care when some instruction is given to them. This proverb is used many times in day-to-day conversations. For example,  “Oh…no use telling him. It is like raining on Buffalo”.