ಕನ್ನಡದ ಬಹು ಪ್ರಸಿದ್ಧ ಗಾದೆಮಾತು ಇದು. ಮಕ್ಕಳ ಅಥವಾ ಮನೆ ಮಂದಿಯ ವಿಷಯದಲ್ಲಿ ತಂದೆ, ತಾಯಿ ಅಥವಾ ಯಾರಾದರೂ, ಎಲ್ಲಾದರೂ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಪಕ್ಷಪಾತ ಧೋರಣೆ ತೋರಿದರೆ, ಅದರಿಂದ ನೊಂದವರು ಈ ಗಾದೆ ಮಾತನ್ನು ಬಳಸುತ್ತಾರೆ. ‘ಮನುಷ್ಯನ ಕಣ್ಣುಗಳು ಒಂದೇ ರೀತಿಯಲ್ಲಿ ಒಟ್ಟಿಗೆ, ಒಂದೇ ಮುಖದ ಮೇಲೆ ಇರುತ್ತವೆ, ಮತ್ತು ಎರಡೂ ಒಂದೇ ಕೆಲಸವನ್ನು ಮಾಡುತ್ತವೆ.
ಅಂದ ಮೇಲೆ ಅವನ್ನು ಒಂದೇ ರೀತಿಯಲ್ಲಿ ನೋಡಿಕೊಳ್ಳಬೇಕು ಅಲ್ಲವೆ? ಅವುಗಳಲ್ಲಿ ಒಂದಕ್ಕೆ ತಂಪಾದ, ನಯವಾದ ಬೆಣ್ಣೆ ಹಾಗೂ ಇನ್ನೊಂದಕ್ಕೆ ಉರಿಯುವ, ಅಪಾಯಕರ ಸುಣ್ಣವನ್ನು ಏಕೆ ಹಚ್ಚಬೇಕು?’ ಎಂಬ ತರ್ಕ ಇಲ್ಲಿ ಕೆಲಸ ಮಾಡುತ್ತದೆ. ಬೆಣ್ಣೆ ಮತ್ತು ಸುಣ್ಣವನ್ನು ಹೋಲಿಕೆ ಮಾಡುವಲ್ಲಿ ನಮ್ಮ ಹಿರಿಯರ ಸೃಜನಶೀಲ ಪ್ರತಿಭೆ ತೋರಿಬರುವ ಗಾದೆಮಾತು ಇದು. ಅಲ್ಲವೆ?
Kannada proverb – Ondu kanninge benne, innondu kannige sunna (Butter for one eye and slaked lime for another).
This is a very popular proverb in Kannada. If mother, father or anybody in a responsible position anywhere makes a bias or discrimination, the aggrieved person uses this proverb.Two eyes of a human being are similar to each other in every way, they stay on the same face and do the same job. Therefore if preferential treatment is given to them by applying cool butter on one and burning slaked lime on another, it is definitely questionable. Isn’t it?The usage of simile where butter and slaked lime are compared is very creative. From the outside they look similar but their effects on eyes are opposite!
Like us!
Follow us!