ಕನ್ನಡ ಕನ್ನಡಿ

ವಾರಕ್ಕೆ ಐದು ಪದಗಳಂತೆ, ತಾಂತ್ರಿಕ/ವೈಜ್ಞಾನಿಕ ಕ್ಷೇತ್ರದ ಪದಗಳಿಗೆ ಕನ್ನಡ ಸಂವಾದಿ ಪದಗಳ ಪರಿಚಯ ಮಾಡುವ ಅಂಕಣವಿದು. ಕನ್ನಡದಲ್ಲಿ ಹೊಸ ಜ್ಞಾನ ನಿರ್ಮಾಣ ಆಗಬೇಕೆಂದರೆ ಅದರ ಪದಕೋಶವು ವಿಸ್ತಾರಗೊಳ್ಳಬೇಕು. ಈ ದಿಸೆಯಲಿನ್ಲ ಕಿರುಪ್ರಯತ್ನವೇ ಈ ಅಂಕಣ.

Impact strength

ಇಂಪ್ಯಾಕ್ಟ್ ಸ್ಟ್ರೆಂಗ್ತ್  – ಒಂದು ವಸ್ತುವಿಗೆ ಇರುವ ಆಘಾತಧಾರಣ ಸಾಮರ್ಥ್ಯ ( ಇದ್ದಕ್ಕಿದ್ದಂತೆ ಉಂಟಾಗುವ ಆಘಾತವನ್ನು ತಡೆದುಕೊಳ್ಳುವ ಶಕ್ತಿ).

Impact stress

ಇಂಪ್ಯಾಕ್ಟ್ ಸ್ಟ್ರೆಸ್ – ಆಘಾತಮೂಲೀ ಒತ್ತಡ – ಏಕಘಟಕ ವಿಸ್ತೀರ್ಣದ ಮೇಲೆ ಇದ್ದಕ್ಕಿದ್ದಂತೆ ಬಿದ್ದ ಹೊರೆಯಿಂದಾಗಿ ಅನುಭವಕ್ಕೆ ಬರುವ ಬಲ‌.

Impact velocity

 ಇಂಪ್ಯಾಕ್ಟ್ ವೆಲಾಸಿಟಿ – ಅಪ್ಪಳಿಸುವ ವೇಗ – ಮುಂದಕ್ಕೆ ಚಿಮ್ಮಿಸಿದಂತಹ ವಸ್ತುವು( ಉದಾಹರಣೆಗೆ  ಕ್ಷಿಪಣಿ ) ಅಪ್ಪಳುಸುವ ಕ್ಷಣದಲ್ಲಿ ಹೊಂದಿರುವಂತಹ ದಿಶಾವೇಗ.  ಇದನ್ನು ಅಪ್ಪಳಿಸುವ ದಿಕ್ವೇಗ ಎಂದೂ ಕರೆಪದಪ್ರಯೋಗ

Impedence ( symbol Z)

 ಇಂಪೀಡೆನ್ಸ್ ( ಸಿಂಬಲ್ Z) – ಅಡ್ಡಿ ( ಸಂಕೇತ Z) – ವಿದ್ಯುನ್ಮಂಡಲವೊಂದು  ಪರ್ಯಾಯ ವಿದ್ಯುತ್ ಗೆ ಒಡ್ಡುವ ಪ್ರತಿರೋಧದ ಅಳತೆ.

Impedence bridge

ಇಂಪೀಡೆನ್ಸ್ ಬ್ರಿಡ್ಜ್ – ಅಡ್ಡಿಯ ಸೇತುವೆ – ವ್ಹೀಟ್ ಸ್ಟೋನ್ ವಿದ್ಯುನ್ಮಂಡಲಕ್ಕೆ ತುಂಬ ಹೋಲಿಕೆ ಇರುವ ಒಂದು ವಿದ್ಯುತ್ ಉಪಕರಣ. ಇದನ್ನು ಅಡ್ಡಿಗಳನ್ನು ತುಲನೆ ಮಾಡಲು ಬಳಸಲಾಗುತ್ತದೆ.

Imperial units

ಇಂಪೀರಿಯಲ್ ಯೂನಿಟ್ಸ್ – ರಾಜಪ್ರಭುತ್ವದ ಮೂಲಮಾನಗಳು – ಗಜ ( ಯಾರ್ಡ್) ಮತ್ತು ಪೌಂಡ್ ಗಳ ಮೇಲೆ ಆಧಾರಿತವಾದ ಅಳತೆಯ ವ್ಯವಸ್ಥೆ. IPS – ಇಂಚು – ಪೌಂಡ್ – ಸೆಕೆಂಡ್ ವ್ಯವಸ್ಥೆಯು ಈ ರಾಜಪ್ರಭುತ್ವದ ಮೂಲಮಾನಗಳ ಮೇಲೆ ಆಧಾರಿತವಾದ ಅಳತೆ ವ್ಯವಸ್ಥೆಯಾಗಿದೆ.

Impulse (Impulsive force)

ಇಂಪಲ್ಸ್ ( ಇಂಪಲ್ಸಿವ್ ಫೋರ್ಸ್) – ಹಠಾತ್ತಾದ ಕ್ರಿಯೆ (ಹಠಾತ್ತಾಗಿ ವರ್ತಿಸುವ ಬಲ) – ಢಿಕ್ಕಿ ಹೊಡೆದಾಗ ಆಗುವಂತೆ ತುಂಬ ಕಡಿಮೆ ಕಾಲದಲ್ಲಿ ವರ್ತಿಸುವ ಬಲ.

Incandescence

ಇನ್ಕಾಂಡೆಸೆನ್ಸ್- ಪ್ರಜ್ವಲ ಬೆಳಕು  – ತುಂಬ ಹೆಚ್ಚು ತಾಪಮಾನ ಹೊಂದಿರುವ ಮೇಲ್ಮೈಯಿಂದ ಸೂಸುವಂತಹ ಬೆಳಕು. ನಾವು ಮನೆಗಳಲ್ಲಿ ಬಳಸುವ, ಟಂಗ್ಸ್ಟನ್ ತಂತುವನ್ನು ಹೊಂದಿರುವ ವಿದ್ಯುತ್ ದೀಪವು ಇದಕ್ಕೆ ಉದಾಹರಣೆಯಾಗಿದೆ.

Inclination ( Angle of dip)

ಇನ್ಕ್ಲಿನೇಷನ್( ಆಂಗಲ್ ಆಫ್ ಡಿಪ್) – ಇಳಿಜಾರು ( ಇಳಿಜಾರು ಕೋನ) – ಭೂಮಿಯ ಕಾಂತಕ್ಷೇತ್ರಕ್ಕೂ ಮತ್ತು ಅದರ ಮೇಲ್ಮೈಯಲ್ಲಿನ ಅಡ್ಡರೇಖೆಗೂ, ಬಿಂದುವೊಂದರಲ್ಲಿ ಉಂಟಾಗುವ ಕೋನ. ಸಮಯದೊಂದಿಗೆ ಇದು ತುಸು ಬದಲಾಗುತ್ತದೆ.

Incoherent holography

ಇನ್ಕೋಹೆರೆಂಟ್ ಹೋಲೋಗ್ರಫಿ – ಸುಸಂಬದ್ಧವಲ್ಲದ ಪೂರ್ಣಚಿತ್ರಗ್ರಹಣ –  ಪ್ರಾರಂಭದಲ್ಲಿ ತೆಗೆಯಲಾಗುತ್ತಿದ್ದ ಸುಸಂಬದ್ಧವಲ್ಲದ ಪೂರ್ಣಚಿತ್ರಗಳು‌.‌ ಇವುಗಳನ್ನು ಸಾಂಪ್ರದಾಯಿಕ ಛಾಯಾಚಿತ್ರಗಳನ್ನು ಹಾಗೂ ಸುಸಂಬದ್ಧವಲ್ಲದ ದೃಶ್ಯವಿಜ್ಞಾನದ ವ್ಯವಸ್ಥೆಗಳನ್ನು ಬಳಸಿ ತೆಗೆಯುತ್ತಿದ್ದರು.

Page 72 of 92

Kannada Sethu. All rights reserved.