ಕೈನೆಟಿಕ್ ಮೊಮೆಂಟಮ್ – ಚಲನಾತ್ಮಕ ದ್ರವ್ಯವೇಗ – ಒಂದು ಕಣದ ಚಲನೆಯಿಂದಾಗಿ ಅದು ಹೊಂದಿರುವ ದ್ರವ್ಯ ವೇಗ.
ಕನ್ನಡ ಕನ್ನಡಿ
ವಾರಕ್ಕೆ ಐದು ಪದಗಳಂತೆ, ತಾಂತ್ರಿಕ/ವೈಜ್ಞಾನಿಕ ಕ್ಷೇತ್ರದ ಪದಗಳಿಗೆ ಕನ್ನಡ ಸಂವಾದಿ ಪದಗಳ ಪರಿಚಯ ಮಾಡುವ ಅಂಕಣವಿದು. ಕನ್ನಡದಲ್ಲಿ ಹೊಸ ಜ್ಞಾನ ನಿರ್ಮಾಣ ಆಗಬೇಕೆಂದರೆ ಅದರ ಪದಕೋಶವು ವಿಸ್ತಾರಗೊಳ್ಳಬೇಕು. ಈ ದಿಸೆಯಲಿನ್ಲ ಕಿರುಪ್ರಯತ್ನವೇ ಈ ಅಂಕಣ.
ಕೈನೆಟಿಕ್ ಥಿಯರಿ ಆಫ್ ಗ್ಯಾಸಸ್ – ಅನಿಲಗಳ ಚಲನ ಸಿದ್ಧಾಂತ – ಅನಿಲಗಳ ವರ್ತನೆಯನ್ನು ವಿವರಿಸುವ ಒಂದು ಸಿದ್ಧಾಂತ. ಪ್ರತಿಯೊಂದು ಅನಿಲದ ಅಣುವೂ ಸಹ ಚಲಿಸುತ್ತಿರುತ್ತದೆ ಎಂಬ ಊಹೆಯನ್ನು ಆಧರಿಸಿರುವ ಸಿದ್ಧಾಂತವಿದು.
ಕ್ಲಿಸ್ಟ್ರಾನ್ – ಅಲೆ ಜನಕ – ಮೈಕ್ರೋವೇವ್ ( ಒಂದು ರೀತಿಯ ವಿದ್ಯುತ್ಕಾಂತೀಯ ಅಲೆ)ಪ್ರದೇಶದಲ್ಲಿ ವಿದ್ಯುತ್ಕಾಂತೀಯ ಅಲೆಗಳನ್ನು ಉತ್ಪಾದಿಸಲು ಬಳಸುವ ಸಾಧನ.
ನೈಫ್ ಎಡ್ಜ್ – ಕತ್ತಿ ಮೊನೆ – ಕೇಟರ್ ರ ಆಂದೋಲಕ ಮಾಪಕ ಮುಂತಾದವುಗಳಲ್ಲಿ ಬಳಸುವ ಒಂದು ಚೂಪಾದ ಅಲಗು. ಇದರ ಚೂಪುತುದಿಯಿಂದಾಗಿ ಇದು ಸಂಪರ್ಕ ಉಂಟುಮಾಡುವ ಎರಡು ಭಾಗಗಳ ಪ್ರದೇಶವು ಅತಿ ಕನಿಷ್ಠ ಮಟ್ಟದಲ್ಲಿರುತ್ತದೆ.
ನಾಕ್ ಆನ್ ಕೊಲಿಷನ್ – ನೂಕಿ ತಳ್ಳುವ ಢಿಕ್ಕಿ- ತುಂಬ ಹೆಚ್ಚಿನ ಶಕ್ತಿಯುಳ್ಳ ಕಣವು ಢಿಕ್ಕಿ ಹೊಡೆದದ್ದರಿಂದಾಗಿ ಒಂದು ಮೂಲಭೂತ ಕಣ, ಅಥವಾ ಪರಮಾಣುವಿನ ಬೀಜಕೇಂದ್ರವು ಚಲಿಸಲು ಪ್ರಾರಂಭಿಸಿದರೆ ಅಂತಹ ಢಿಕ್ಕಿಯನ್ನು ನೂಕಿ ತಳ್ಳುವ ಢಿಕ್ಕಿ ಎಂದು ಕರೆಯುತ್ತಾರೆ. ಎಲೆಕ್ಟ್ರಾನೊಂದು ತನ್ನ ಪಥದಿಂದ ತಳ್ಳಲ್ಪಡುವುದೂ ಇದೇ ಢಿಕ್ಕಿಯಿಂದ.
ನಾಕಿಂಗ್ – ಹೊಡೆತ ಶಬ್ದ – ಕೆಲವು ಸನ್ನಿವೇಶಗಳಲ್ಲಿ ಕಿಡಿ-ಪೆಟ್ರೋಲು ಆಧಾರಿತ ಚಾಲಕಯಂತ್ರದಿಂದ ಹುಟ್ಟುವಂತಹ, ಲೋಹ ಕುಟ್ಟಿದಂತೆ ಕೇಳಿಸುವ ಶಬ್ದ. ದಹನಪಾತ್ರೆಯಲ್ಲಿನ ಇನ್ನೂ ಸುಟ್ಟಿಲ್ಲದ ಸ್ಫೋಟಕ ಮಿಶ್ರಣದ ಶೀಘ್ರ ದಹನದಿಂದ ಈ ಶಬ್ಧ ಹುಟ್ಟುತ್ತದೆ.
ನುಡ್ಸೆನ್ ಫ್ಲೋ – ನುಡ್ಸೆನ್ ಹರಿವು – ತಾನಿರುವ ಪಾತ್ರೆಯ ಅಳತೆಗಿಂತ ಹೆಚ್ಚು ಸರಾಸರಿ ಮುಕ್ತ ಚಲನೆಯುಳ್ಳ ಪರಮಾಣುಗಳ ಹರಿವು ಇದು.
ಕೋವಾರ್ – ಕೋವಾರ್ – ಕಬ್ಬಿಣ, ಕೋಬಾಲ್ಟ್ ಮತ್ತು ನಿಕ್ಕಲ್ ಗಳು ಸೇರಿರುವಂತಹ ಒಂದು ಮಿಶ್ರಲೋಹದ ವ್ಯಾಪಾರೀ ಹೆಸರು ಇದು. ಈ ಮಿಶ್ರಲೋಹದ ಗುಣವು ಗಾಜಿನಂತೆಯೇ ಇರುತ್ತದೆ. ಉಷ್ಣತೆಯಲ್ಲಿ ತುಂಬ ವ್ಯತ್ಯಾಸಗಳುಂಟಾಗುತ್ತವೆ ಎಂಬ ನಿರೀಕ್ಷೆ ಇರುವ ಸನ್ನಿವೇಶಗಳಲ್ಲಿ ಇದನ್ನು ಬಳಸುತ್ತಾರೆ.
ಕೈಮೋಗ್ರಾಫ್ – ಅಲೆಮಾಪಕ – ನಿಯತಕಾಲಿಕ ಚಲನೆಗಳನ್ನು ಅದರಲ್ಲೂ ವಿಶೇಷವಾಗಿ ಸ್ನಾಯುಗಳಲ್ಲಿನ ನಿಯತಕಾಲಿಕ ಚಲನೆಗಳನ್ನು ದಾಖಲಿಸಲು ಬಳಸುವ ಒಂದು ಉಪಕರಣ.
ಲೇಬಲ್ – ಜಾಡುಪತ್ತೆ ಬೀಜಕೇಂದ್ರ – ಒಂದು ರಾಸಾಯನಿಕ ಕ್ರಿಯೆ ಅಥವಾ ಯಾವುದಾದರೂ ಒಂದು ಪ್ರಕ್ರಿಯೆಯನ್ನು ಜಾಡು ಹಿಡಿದು ಪರಿಶೀಲಿಸಲು ಬಳಸುವ ಒಂದು ಸ್ಥಿರ ಅಥವಾ ವಿಕಿರಣೀಯ ಬೀಜಕೇಂದ್ರ.
Like us!
Follow us!