ಕನ್ನಡ ಕನ್ನಡಿ

ವಾರಕ್ಕೆ ಐದು ಪದಗಳಂತೆ, ತಾಂತ್ರಿಕ/ವೈಜ್ಞಾನಿಕ ಕ್ಷೇತ್ರದ ಪದಗಳಿಗೆ ಕನ್ನಡ ಸಂವಾದಿ ಪದಗಳ ಪರಿಚಯ ಮಾಡುವ ಅಂಕಣವಿದು. ಕನ್ನಡದಲ್ಲಿ ಹೊಸ ಜ್ಞಾನ ನಿರ್ಮಾಣ ಆಗಬೇಕೆಂದರೆ ಅದರ ಪದಕೋಶವು ವಿಸ್ತಾರಗೊಳ್ಳಬೇಕು. ಈ ದಿಸೆಯಲಿನ್ಲ ಕಿರುಪ್ರಯತ್ನವೇ ಈ ಅಂಕಣ.

Laevorotatory

ಲೇವೋರೊಟೇಟರಿ – ಎಡಮುರಿ – ಧ್ರುವೀಕರಣದ ಮೇಲ್ಮೈಯನ್ನು ಎಡದಿಂದ ಬಲಕ್ಕೆ ತಿರುಗಿಸುವುದು‌.

Lag

ಲ್ಯಾಗ್ – ಹಿಂದೆ ಬೀಳುವಿಕೆ – ಇನ್ನೊಂದು ನಿಯತಕಾಲಿಕ ಪರಿಮಾಣಕ್ಕೆ ಹೋಲಿಸಿದಾಗ ಒಂದು ನಿಯತಕಾಲಿಕ ಪರಿಮಾಣವು ವಿಳಂಬಗೊಂಡ ಸಮಯ ಅಥವಾ ಕೋನ.

Lamb wave

ಲ್ಯಾಂಬ್ ವೇವ್ – ಲ್ಯಾಂಬ್ ಅಲೆ – ಒಂದು ಘನವಸ್ತುವಿನ ಮೇಲ್ಮೈಯ ಮೇಲೆ ಚಲಿಸುತ್ತಿರುವ ವಿದ್ಯುತ್ಕಾಂತೀಯ ಅಲೆ. ಇಲ್ಲಿನ ಅಗತ್ಯತೆ ಏನೆಂದರೆ  ಘನವಸ್ತುವಿನ ದಟ್ಟತೆ ಹಾಗೂ ಅಲೆಯ ತರಂಗಾಂತರಗಳು ಒಂದಕ್ಕೊಂದನ್ನು ಹೋಲಿಸಲಾಗುವಂತೆ ಇರಬೇಕು‌. ( ಲ್ಯಾಂಬ್ = ಸರ್ ಹೊರೇಸ್ ಲ್ಯಾಂಬ್. 27-11-1849 ರಿಂದ 04-12-1934. ಒಬ್ಬ ಬ್ರಿಟಿಷ್ ಗಣಿತ ಶಾಸ್ತ್ರಜ್ಞ ಹಾಗೂ ಲೇಖಕ).

Lambert

ಲ್ಯಾಂಬರ್ಟ್ – ಲ್ಯಾಂಬರ್ಟ್ – ಪ್ರಕಾಶಮಾನೀಯತೆ ಅಥವಾ ದೀಪ್ತತೆಯ ಹಳೆಯ ಮೂಲಮಾನ ಇದು‌. (ಲ್ಯಾಂಬರ್ಟ್ ಎಂಬುದು, ಹದಿನೆಂಟನೆಯ ಶತಮಾನದಲ್ಲಿ ಜೀವಿಸಿದ್ದ, ಜೊಹಾನ್ ಹೆನ್ರಿಚ್ ಲ್ಯಾಂಬರ್ಟ್ ಎಂಬ,  ಮಲ್ ಹೌಸ್ ಪ್ರದೇಶ ( ಇಂದಿನ ಫ್ರಾನ್ಸ್) ಕ್ಕೆ ಸೇರಿದ, ಭೌತಶಾಸ್ತ್ರ, ಗಣಿತ ಹಾಗೂ ತತ್ವಶಾಸ್ತ್ರ ಪರಿಣತ ವಿಜ್ಞಾನಿಯ ನೆನಪಿನಲ್ಲಿ ಇಟ್ಟ ಹೆಸರು).

Lamina

ಲ್ಯಾಮಿನಾ – ತೆಳುಹಾಳೆ/ ತೆಳು ಹಲಗೆ – ಯಾವುದಾದರೂ ವಸ್ತುವಿನ‌ ತೆಳುಹಾಳೆ ಅಥವಾ ತೆಳು ಹಲಗೆ.

Laminar flow

ಲ್ಯಾಮಿನಾರ್ ಫ್ಲೋ‌ – ಶಾಂತವಾದ ಹರಿವು‌ – ಮಟ್ಟಸವಾದ ಮೇಲ್ಮೈಯುದ್ದಕ್ಕೂ ಯಾವುದೇ ಪ್ರಕ್ಷುಬ್ಧತೆ ಇಲ್ಲದೆ ಒಂದು ದ್ರವದ ಹರಿವು‌ (ಹರಿಯುವಿಕೆ).

Laminated iron

ಲ್ಯಾಮಿನೇಟೆಡ್ ಐರನ್ – ತೆಳುಹಾಳೆಯಾಗಿಸಿದ ಕಬ್ಬಿಣ – ಕಬ್ಬಿಣದ ತೆಳುವಾದ ಹಾಳೆಗಳಿಂದ ಮಾಡಲ್ಪಟ್ಟ ಒಂದು ಕಬ್ಬಿಣದ ತುಂಡು‌ ಇದು. ಇದನ್ನು ಸುಳಿರೂಪೀ ವಿದ್ಯುತ್ ಪ್ರವಾಹವನ್ನು ಕನಿಷ್ಠ ಮಟ್ಟದಲ್ಲಿ ಇರಿಸುವುದಕ್ಕಾಗಿ ವಿದ್ಯುತ್ ಪರಿವರ್ತಕಗಳಲ್ಲಿ ಬಳಕೆ ಮಾಡುತ್ತಾರೆ.

Land line

ಲ್ಯಾಂಡ್ ಲೈನ್ – ನೆಲ ತಂತಿ‌ – ಭೂಮಿಯ ಮೇಲ್ಮೈಗೆ ಅಂಟಿದಂತೆ ಅಥವಾ ಭೂಮಿಯ ಕೆಳಗೆ ಹಾಕಿರುವಂತಹ ಸಂಪರ್ಕ ತಂತಿ.

Lapse rate

ಲ್ಯಾಪ್ಸ್ ರೇಟ್ – ಅಳಿಯುವಿಕೆಯ ಗತಿ‌ – ಬೆಳಕಿನೊಂದಿಗೆ ಹವಾಮಾನದ ತಾಪಮಾನವು ಬದಲಾಗುವ ಗತಿ.

Laser ( Light amplification by stimulated emission of radiation)

ಲೇಸರ್ – ಲೇಸರ್ – ಪ್ರಚೋದಿತ ವಿಕಿರಣವನ್ನು ಹಾಯಿಸುವುದರ ಮೂಲಕ ಶಕ್ತಿಯನ್ನು ಹೆಚ್ಚಿಸಿಕೊಂಡಂತಹ ಬೆಳಕು ಹಾಗೂ 

 ಸುಸಂಬದ್ಧವಾದ, ಒಂದೇ ತರಂಗಾಂತರವುಳ್ಳ, ಸಮಾನಾಂತರ ಹಾಗೂ ತೀಕ್ಷ್ಣವಾದ ಮತ್ತು ಅತಿ ಹೆಚ್ಚು ಶಕ್ತಿಯನ್ನು ಹೊಂದಿರುವ ವಿಕಿರಣದ ಪುಂಜವೊಂದನ್ನು ಉತ್ಪತ್ತಿ‌ ಮಾಡುವ ಶಕ್ತಿಯುಳ್ಳ  ಸಾಧನ. ಯುಕ್ತವಾದ ‌ಒಂದು ವಸ್ತುವಿಗೆ ( ಘನ, ದ್ರವ ಅಥವಾ ಅನಿಲ) ತುಂಬ ವೇಗವಾಗಿ ಶಕ್ತಿಯನ್ನು ಹಾಯಿಸಿ ಈ ಲೇಸರ್ ಅನ್ನು ಉತ್ಪತ್ತಿ ಮಾಡುತ್ತಾರೆ.

Page 86 of 92

Kannada Sethu. All rights reserved.