ಲೌಡ್ ನೆಸ್ ಆಫ್ ಸೌಂಡ್ – ಶಬ್ಧದ ಗಟ್ಟಿತನ – ಶಬ್ಧದ ಒಂದು ಆಕರವು ಕೇಳುಗನಲ್ಲಿ ಉಂಟುಮಾಡುವ ಒಂದು ಇಂದ್ರಿಯ ಸವೇದನೆ. ಇದು ಒಂದು ದತ್ತ ಆವರ್ತನಗತಿಯ ಸಂದರ್ಭದಲ್ಲಿ, ಶಬ್ಧದ ತೀಕ್ಷ್ಣತೆ ಮತ್ತು ಶಬ್ಧದ ಆವರ್ತನಗತಿಯನ್ನು ಸಹ ಅವಲಂಬಿಸಿರುತ್ತದೆ.
ಕನ್ನಡ ಕನ್ನಡಿ
ವಾರಕ್ಕೆ ಐದು ಪದಗಳಂತೆ, ತಾಂತ್ರಿಕ/ವೈಜ್ಞಾನಿಕ ಕ್ಷೇತ್ರದ ಪದಗಳಿಗೆ ಕನ್ನಡ ಸಂವಾದಿ ಪದಗಳ ಪರಿಚಯ ಮಾಡುವ ಅಂಕಣವಿದು. ಕನ್ನಡದಲ್ಲಿ ಹೊಸ ಜ್ಞಾನ ನಿರ್ಮಾಣ ಆಗಬೇಕೆಂದರೆ ಅದರ ಪದಕೋಶವು ವಿಸ್ತಾರಗೊಳ್ಳಬೇಕು. ಈ ದಿಸೆಯಲಿನ್ಲ ಕಿರುಪ್ರಯತ್ನವೇ ಈ ಅಂಕಣ.
ಲೌಡ್ ಸ್ಪೀಕರ್ – ಧ್ವನಿವರ್ಧಕ – ವಿದ್ಯುತ್ ಅಲೆಗಳನ್ನು, ಕಿವಿಗೆ ಕೇಳಿಸುವಷ್ಟು ಮಟ್ಟಿಗೆ ಗಟ್ಟಿಯಾಗಿರುವಂತಹ ಶಬ್ಧಕಂಪನಗಳನ್ನಾಗಿ ಪರಿವರ್ತಿಸುವಂತಹ ಉಪಕರಣ.
ಲೋ ಫ್ರೀಕ್ವೆನ್ಸಿ – ಕಡಿಮೆ ಆವರ್ತನಗತಿ – 30-300 ಕಿಲೋಹರ್ಟ್ಝ್ ಶ್ರೇಣಿಯಲ್ಲಿನ ರೇಡಿಯೋ ( ತ್ರಿಜ್ಯಾತ್ಮಕ) ಅಲೆಯ ಆವರ್ತನಗತಿ. ಇದು 1-10 ಕಿಲೋಮೀಟರ್ ನಷ್ಟು ಅಲೆಯುದ್ದ (ತರಂಗಾಂತರ) ವನ್ನು ಹೊಂದಿರುತ್ತದೆ.
ಲೋ ಪಾಸ್ ಫಿಲ್ಟರ್ – ಕೆಳಶ್ರೇಣಿಯನ್ನು ದಾಟಿಸುವ ಅಲೆವಿಂಗಡಕ – ಸೊನ್ನೆ ಆವರ್ತನಗತಿಯಿಂದ ಹಿಡಿದು ಒಂದು ಗರಿಷ್ಠಮಿತಿಯ ಆವರ್ತನಗತಿ ( ಆದರೆ ಅನಂತವಲ್ಲ) ಹೊಂದಿರುವ, ಏಕಪ್ರಸಾರ ಪಟ್ಟಿಯನ್ನು ಇರಿಸಿಕೊಂಡಿರುವ ಅಲೆವಿಂಗಡಕ.
ಲೋ ಟೆನ್ಶನ್ – ಕಡಿಮೆ ಕರ್ಷಣ – ಕಡಿಮೆ ವಿದ್ಯುದ್ಬಲ
ಲೋವರಿಂಗ್ ಆಫ್ ವೇಪರ್ ಪ್ರಶರ್ – ಆವಿಯೊತ್ತಡದ ಇಳಿತ – ಒಂದು ಕರಗುವಸ್ತುವನ್ನು ಸೇರಿಸಿದಾಗ ಒಂದು ಶುದ್ಧ ದ್ರವದ ಪರ್ಯಾಪ್ತ ( ಸ್ಯಾಚುರೇಟೆಡ್) ಆವಿಯೊತ್ತಡವು ಕಡಿಮೆಯಾಗುವಂಥದ್ದು.
ಲ್ಯೂಬ್ರಿಕೇಷನ್ – ತೈಲ ಲೇಪನ – ಒಂದನ್ನೊಂದು ಸ್ಪರ್ಶಿಸಿ ಚಲಿಸುತ್ತಿರುವ ಎರಡು ಘನ ಮೇಲ್ಮೈ ಗಳ ನಡುವಿನ ನೇರಸಂಪರ್ಕವನ್ನು ತಪ್ಪಿಸಲು ಅವುಗಳ ನಡುವೆ ಒಂದು ವಸ್ತುವನ್ನು ಹಚ್ಚುವುದು. ಇದರಿಂದಾಗಿ ಆ ಘನಮೇಲ್ನೈಗಳ ನಡುವಿನ ಘರ್ಷಣೆ ಕಡಿಮೆ ಆಗುತ್ತದೆ.
ಲ್ಯೂಮೆನ್, ಸಿಂಬಲ್ lm – ಲ್ಯೂಮೆನ್, ಸಂಕೇತ lm – ಪ್ರಕಾಶಮಾನ ಬಲದ ಎಸ್.ಐ.ಮೂಲಮಾನ. ಬೆಳಕಿನ ಆಕರವು ಸೂಸುವ ಪ್ರಕಾಶಮಾನ ಬಲದ ಅಳತೆಯನ್ನು ಈ ಮೂಲಮಾನದಿಂದ ಹೇಳಲಾಗುತ್ತದೆ.
Lv – ಲ್ಯೂಮಿನೆನ್ಸ್ : ಸಿಂಬಲ್ ಎಲ್ ವಿ – ಪ್ರಕಾಶಮಾನತೆ, ಸಂಕೇತ ಎಲ್ ವಿ – ಬಿಂದು ಆಕರವಲ್ಲದ, ವಿಸ್ತರಿತ ಬೆಳಕು ನೀಡುವ ಬೆಳಕಿನ ಆಕರದ ಪ್ರಕಾಶಮಾನತೆಯ ಅಳತೆ. ಒಂದು ದತ್ತ ದಿಕ್ಕಿನಲ್ಲಿ, ಏಕಘಟಕ ವಿಸ್ತೀರ್ಣದ ಪ್ರದೇಶಕ್ಕೆ ಆ ಆಕರವು ಲಂಬಕೋನದಲ್ಲಿ ಬೀರಿದಂತಹ ಪ್ರಕಾಶದ ತೀಕ್ಷ್ಣತೆ ಇದು.
ಲ್ಯೂಮಿನಿಸೆನ್ಸ್ – ಸ್ವಯಂಪ್ರಕಾಶ – ಒಂದು ವಸ್ತುವು ಶಕ್ತಿಯನ್ನು ಹೀರಿಕೊಂಡು ಉದ್ರೇಕಿತ ಸ್ಥಿತಿಗೆ ಹೋದಾಗ ಅದರಿಂದ ಸೂಸುವ ಬೆಳಕು ಅಥವಾ ವಿಕಿರಣ. ಹೀಗೆ ವಿದ್ಯುತ್ಕಾಂತೀಯ ಅಲೆಗಳನ್ನು ಹೊರಸೂಸಿದ ಬಳಿಕ ಆ ವಸ್ತುಗಳು ಕಡಿಮೆ ಶಕ್ತಿ ಮಟ್ಟಕ್ಕೆ ಮರಳುತ್ತವೆ. ಸ್ವಯಂಪ್ರಕಾಶದಲ್ಲಿ ಜೈವಿಕ ಸ್ವಯಂ ಪ್ರಕಾಶದಿಂದ ಹಿಡಿದು ರಾಸಾಯನಿಕ ಸ್ವಯಂಪ್ರಕಾಶದ ತನಕ ಅನೇಕ ವಿಧಗಳಿರುತ್ತವೆ.
Like us!
Follow us!