ಕನ್ನಡ ಕನ್ನಡಿ

ವಾರಕ್ಕೆ ಐದು ಪದಗಳಂತೆ, ತಾಂತ್ರಿಕ/ವೈಜ್ಞಾನಿಕ ಕ್ಷೇತ್ರದ ಪದಗಳಿಗೆ ಕನ್ನಡ ಸಂವಾದಿ ಪದಗಳ ಪರಿಚಯ ಮಾಡುವ ಅಂಕಣವಿದು. ಕನ್ನಡದಲ್ಲಿ ಹೊಸ ಜ್ಞಾನ ನಿರ್ಮಾಣ ಆಗಬೇಕೆಂದರೆ ಅದರ ಪದಕೋಶವು ವಿಸ್ತಾರಗೊಳ್ಳಬೇಕು. ಈ ದಿಸೆಯಲಿನ್ಲ ಕಿರುಪ್ರಯತ್ನವೇ ಈ ಅಂಕಣ.

Luminosity

ಲ್ಯೂಮಿನಾಸಿಟಿ – ದೀಪ್ತತೆ, ಕಾಂತಿ‌ – ಒಂದು ನಿರ್ದಿಷ್ಟ ದಿಕ್ಲಿನಲ್ಲಿನ ಪ್ರಕಾಶದ ತೀಕ್ಷ್ಣತೆ, ಒಂದು ಬಿಂಬದ ದೃಗ್ಗೋಚರ ಪ್ರಕಾಶಮಾನತೆ, ಹಾಗೂ ಏಕಘಟಕ ಮೂಲಮಾನ ಸಮಯದಲ್ಲಿ ಹೊರಸೂಸಲ್ಪಟ್ಟ ಒಟ್ಟು ಶಕ್ತಿಯ ಲೆಕ್ಕದಲ್ಲಿ ನಿರೂಪಿತವಾದ ಒಂದು ನಕ್ಷತ್ರದ ಪ್ರಕಾಶಮಾನತೆ‌.

Luminous flux

ಲ್ಯೂಮಿನಸ್ ಫ್ಲಕ್ಸ್ – ಬೆಳಕಿನ ಪ್ರವಾಹಗತಿ  – ಬೆಳಕು ಹರಿಯುವ ಗತಿಯನ್ನು ಅಳೆಯುವ ನೆಲೆ. ಇದನ್ನು ಲ್ಯೂಮೆನ್ ಗಳಲ್ಲಿ ಅಳೆಯುತ್ತಾರೆ. ಒಂದು ಪ್ರಮಾಣೀಕೃತ  ಆಕರದಿಂದ ಹೊರಸೂಸಲ್ಪಟ್ಟ ಬೆಳಕಿನ ಆಧಾರದಿಂದ ಇದನ್ನು ಅಳೆಯುತ್ತಾರೆ.

Luminous intensity

ಲ್ಯೂಮಿನಸ್ ಇಂಟೆನ್ಸಿಟಿ – ಪ್ರವಾಹ ತೀಕ್ಷ್ಣತೆ – ಸಾಮಾನ್ಯ ಅರ್ಥದಲ್ಲಿ ಅಥವಾ ಒಂದು ನಿರ್ದಿಷ್ಟ ದಿಕ್ಕಿನಲ್ಲಿ, ಒಂದು ಬೆಳಕಿನ ಆಕರದ ಬೆಳಕು ಸೂಸುವ ಸಾಮರ್ಥ್ಯ. ಇದನ್ನು ಕ್ಯಾಂಡೆಲ್ ಗಳಲ್ಲಿ ಅಳೆಯುತ್ತಾರೆ

Luminous paint

ಲ್ಯೂಮಿನಸ್ ಪೈಂಟ್ – ಪ್ರಕಾಶಮಾನ‌ ಬಣ್ಣ – ಕ್ಯಾಲ್ಶಿಯಂ ಸಲ್ಫೈಡ್ ನಂತಹ, ರಾತ್ರಿಯಲ್ಲಿ ಪ್ರಕಾಶ ಸೂಸಬಲ್ಲ ರಾಸಾಯನಿಕ ಸಂಯುಕ್ತಗಳಿಂದ ಮಾಡಲ್ಪಟ್ಟ ಒಂದು ಬಣ್ಣ (ಉದ್ರೇಕಗೊಳಿಸುವ ಆಕರವನ್ನು ದೂರ ಮಾಡಿದ ಮೇಲೂ ಬೆಳಕು ಸೂಸುವಂತಹ, ಕ್ಯಾಲ್ಶಿಯಂ ಸಲ್ಫೈಡ್ ನಂತಹ ವಸ್ತುಗಳನ್ನು phosphorescent ಅಥವಾ ಬೆಳಕುಧಾರಕ ವಸ್ತುಗಳು ಎಂದು ಕರೆಯುತ್ತಾರೆ).

Mach line or surface

ಮ್ಯಾಕ್ ಲೈನ್ ಆರ್ ಸರ್ಫೇಸ್ – ಮ್ಯಾಕ್ ರೇಖೆ ಅಥವಾ ಮೇಲ್ಮೈ – ಶಬ್ಧದ ಕೆಳಗಿನ ಹರಿವುಗಳ ಪ್ರದೇಶ ( ಅಧೋಶಬ್ಧ)  ಮತ್ತು ಶಬ್ಧಾತೀತ ಹರಿವುಗಳ ಪ್ರದೇಶವನ್ನು ಪ್ರತ್ಯೇಕಿಸುವ ರೇಖೆ ಅಥವಾ ಮೇಲ್ಮೈ. 

Machine

ಮೆಶಿನ್ – ಯಂತ್ರ – ಸಾಮರ್ಥ್ಯ ( power) ವನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ವರ್ಗಾಯಿಸುವ ಉಪಕರಣ. ಕಡಿಮೆ ಬಲವನ್ನು ಹಾಕಿ ಹೆಚ್ಚು ಪರಿಣಾಮವನ್ನು ಪಡೆಯುವುದೇ ಯಂತ್ರವನ್ನು ಬಳಸುವ ಮೂಲ ಉದ್ದೇಶ‌ವಾಗಿರುತ್ತದೆ.

Magento meter

ಮಾಗ್ನೆಟೋ ಮೀಟರ್ – ಕಾಂತಶಕ್ತಿ  ಮಾಪಕ – ಕಾಂತಕ್ಷೇತ್ರವೊಂದರ ಶಕ್ತಿ, ದಿಕ್ಕು ಹಾಗೂ ಏರುಪೇರುಗಳನ್ನು ಅಳೆಯುವಂತಹ ವೈಜ್ಞಾನಿಕ ಉಪಕರಣ.

Magic Numbers

ಮ್ಯಾಜಿಕ್ ನಂಬರ್ಸ್ – ಮಾಂತ್ರಿಕ ಸಂಖ್ಯೆಗಳು – ಪರಮಾಣುವಿನ ಬೀಜಕೇಂದ್ರದಲ್ಲಿ ತುಂಬ ಸ್ಥಿರವಾದ ರಚನೆಗಳನ್ನು ಉತ್ಪತ್ತಿ ಮಾಡುವ ಪ್ರೋಟಾನು ಅಥವಾ ನ್ಯೂಟ್ರಾನು ಸಂಖ್ಯೆಗಳಿವು.

Magn

ಮ್ಯಾಗ್ನ್ – ಮ್ಯಾಗ್ನ್ – ಈ ಪದವನ್ನು ವಿದ್ಯುತ್ಕಾಂತೀಯ ಶಾಸ್ತ್ರದಲ್ಲಿ ಬಳಸುತ್ತಾರೆ. ಒಂದು ಮಾಧ್ಯಮದ ಪರಮ ಪ್ರವೇಶಸಾಧ್ಯತೆಯನ್ನು ಅಳೆಯುವಂತಹ ಮೂಲಮಾನ ಇದು. ಅಂದರೆ, ಎಷ್ಟರ ಮಟ್ಟಿಗೆ ವಸ್ತುವೊಂದು ಕಾಂತವಾಗಬಹುದು ಎಂಬ ಅಳತೆಯ ನೆಲೆ.

1 ಮ್ಯಾಗ್ನ್ = 1 ಮೀಟರ್ ಗೆ 1 ಹೆನ್ರಿ.

Magnadur

ಮ್ಯಾಗ್ನಡರ್- ಮ್ಯಾಗ್ನಡರ್ – ಶಾಶ್ವತ ಅಯಸ್ಕಾಂತಗಳನ್ನು ತಯಾರು ಮಾಡಲು ಬಳಸುವ ಒಂದು ಪಿಂಗಾಣಿ ವಸ್ತುವಿನ ವ್ಯಾಪಾರೀ ಹೆಸರು. ಇದು ಮುದ್ದೆಯಾಗಿಸಿದ ಕಬ್ಬಿಣದ ಆಕ್ಸೈಡು ಮತ್ತು ಬೇರಿಯಂ ಆಕ್ಸೈಡುಗಳನ್ನು ಹೊಂದಿರುತ್ತದೆ.

Page 94 of 100

Kannada Sethu. All rights reserved.