ಕಲರ್ ಕ್ಯಾಪ್ಸಿಕಂ, ಬೀನ್ಸ್,, ಪಿಯರ್, ಪೋಮೊಗ್ರಾನೇಟ್, ಪಪಾಯ, ಲಿಚೀ, ಬಟರ್ ಫ್ರೂಟ್ …. ಕರ್ನಾಟಕದ ರಾಜಧಾನಿ ಬೆಂಗಳೂರಿನ ಹಣ್ಣು ತರಕಾರಿ ಮಳಿಗೆಗಳಿಗೆ ಹೋದರೆ ಕಿವಿಗೆ ಬೀಳುವ ಪದಗಳಿವು. ಹುರುಳಿಕಾಯಿ, ಚವುಳಿಕಾಯಿ, ದೊಣ್ಣೆಮೆಣಸು, ಪರಂಗಿ ಹಣ್ಣು, ಕಣ್ಗುಡ್ಡೆ ಕಾಯಿ, ಬೆಣ್ಣೆಹಣ್ಣು…ಈ ಕನ್ನಡ ಪದಗಳು ಕಿವಿಗೆ ಬೀಳುವುದು ತೀರಾ ಅಪರೂಪ. ಇದಕ್ಕೆ ಕಾರಣ ಏನಿರಬಹುದು ಎಂದು ಯೋಚಿಸಿದೆ. ಎರಡು ಕಾರಣಗಳಿವೆ ಅನ್ನಿಸಿತು. 1. ಬೆಂಗಳೂರಿನಲ್ಲಿ ಕನ್ನಡಿಗರಲ್ಲದೆ ಹಿಂದಿ, ಮಾರ್ವಾಡಿ, ತಮಿಳು, ತೆಲುಗು, ಮಲೆಯಾಳಿ ಮುಂತಾದ ಕನ್ನಡೇತರ ಭಾಷೆಗಳನ್ನು ಮಾತಾಡುವ ಜನರ […]
ಲ್ಯೂಮಿನಿಸೆನ್ಸ್ – ಸ್ವಯಂಪ್ರಕಾಶ – ಒಂದು ವಸ್ತುವು ಶಕ್ತಿಯನ್ನು ಹೀರಿಕೊಂಡು ಉದ್ರೇಕಿತ ಸ್ಥಿತಿಗೆ ಹೋದಾಗ ಅದರಿಂದ ಸೂಸುವ ಬೆಳಕು ಅಥವಾ ವಿಕಿರಣ. ಹೀಗೆ ವಿದ್ಯುತ್ಕಾಂತೀಯ ಅಲೆಗಳನ್ನು ಹೊರಸೂಸಿದ ಬಳಿಕ ಆ ವಸ್ತುಗಳು ಕಡಿಮೆ ಶಕ್ತಿ ಮಟ್ಟಕ್ಕೆ ಮರಳುತ್ತವೆ. ಸ್ವಯಂಪ್ರಕಾಶದಲ್ಲಿ ಜೈವಿಕ ಸ್ವಯಂ ಪ್ರಕಾಶದಿಂದ ಹಿಡಿದು ರಾಸಾಯನಿಕ ಸ್ವಯಂಪ್ರಕಾಶದ ತನಕ ಅನೇಕ ವಿಧಗಳಿರುತ್ತವೆ.
Lv – ಲ್ಯೂಮಿನೆನ್ಸ್ : ಸಿಂಬಲ್ ಎಲ್ ವಿ – ಪ್ರಕಾಶಮಾನತೆ, ಸಂಕೇತ ಎಲ್ ವಿ – ಬಿಂದು ಆಕರವಲ್ಲದ, ವಿಸ್ತರಿತ ಬೆಳಕು ನೀಡುವ ಬೆಳಕಿನ ಆಕರದ ಪ್ರಕಾಶಮಾನತೆಯ ಅಳತೆ. ಒಂದು ದತ್ತ ದಿಕ್ಕಿನಲ್ಲಿ, ಏಕಘಟಕ ವಿಸ್ತೀರ್ಣದ ಪ್ರದೇಶಕ್ಕೆ ಆ ಆಕರವು ಲಂಬಕೋನದಲ್ಲಿ ಬೀರಿದಂತಹ ಪ್ರಕಾಶದ ತೀಕ್ಷ್ಣತೆ ಇದು.
ಲ್ಯೂಮೆನ್, ಸಿಂಬಲ್ lm – ಲ್ಯೂಮೆನ್, ಸಂಕೇತ lm – ಪ್ರಕಾಶಮಾನ ಬಲದ ಎಸ್.ಐ.ಮೂಲಮಾನ. ಬೆಳಕಿನ ಆಕರವು ಸೂಸುವ ಪ್ರಕಾಶಮಾನ ಬಲದ ಅಳತೆಯನ್ನು ಈ ಮೂಲಮಾನದಿಂದ ಹೇಳಲಾಗುತ್ತದೆ.
ಲ್ಯೂಬ್ರಿಕೇಷನ್ – ತೈಲ ಲೇಪನ – ಒಂದನ್ನೊಂದು ಸ್ಪರ್ಶಿಸಿ ಚಲಿಸುತ್ತಿರುವ ಎರಡು ಘನ ಮೇಲ್ಮೈ ಗಳ ನಡುವಿನ ನೇರಸಂಪರ್ಕವನ್ನು ತಪ್ಪಿಸಲು ಅವುಗಳ ನಡುವೆ ಒಂದು ವಸ್ತುವನ್ನು ಹಚ್ಚುವುದು. ಇದರಿಂದಾಗಿ ಆ ಘನಮೇಲ್ನೈಗಳ ನಡುವಿನ ಘರ್ಷಣೆ ಕಡಿಮೆ ಆಗುತ್ತದೆ.
ಲೋ ಟೆನ್ಶನ್ – ಕಡಿಮೆ ಕರ್ಷಣ – ಕಡಿಮೆ ವಿದ್ಯುದ್ಬಲ
Like us!
Follow us!