ಮ್ಯಾಕ್ ಲೈನ್ ಆರ್ ಸರ್ಫೇಸ್ – ಮ್ಯಾಕ್ ರೇಖೆ ಅಥವಾ ಮೇಲ್ಮೈ – ಶಬ್ಧದ ಕೆಳಗಿನ ಹರಿವುಗಳ ಪ್ರದೇಶ ( ಅಧೋಶಬ್ಧ) ಮತ್ತು ಶಬ್ಧಾತೀತ ಹರಿವುಗಳ ಪ್ರದೇಶವನ್ನು ಪ್ರತ್ಯೇಕಿಸುವ ರೇಖೆ ಅಥವಾ ಮೇಲ್ಮೈ.
ಮೆಶಿನ್ – ಯಂತ್ರ – ಸಾಮರ್ಥ್ಯ ( power) ವನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ವರ್ಗಾಯಿಸುವ ಉಪಕರಣ. ಕಡಿಮೆ ಬಲವನ್ನು ಹಾಕಿ ಹೆಚ್ಚು ಪರಿಣಾಮವನ್ನು ಪಡೆಯುವುದೇ ಯಂತ್ರವನ್ನು ಬಳಸುವ ಮೂಲ ಉದ್ದೇಶವಾಗಿರುತ್ತದೆ.
ಲಿಕ್ವಿಡ್ ಕ್ರಿಸ್ಟಲ್ – ದ್ರವ ಹರಳು – ದ್ರವದಂತೆ ಹರಿದರೂ ಸಹ ತನ್ನ ಅಣುಗಳ ರಚನೆಯಲ್ಲಿ ಒಂದು ರೀತಿಯ ವ್ಯವಸ್ಥೆಯನ್ನು ಹೊಂದಿರುವ ಒಂದು ವಸ್ತು. ಉದಾಹರಣೆಗೆ, ಸಾಬೂನಿನ ದ್ರಾವಣ
ಲ್ಯೂಮಿನಸ್ ಪೈಂಟ್ – ಪ್ರಕಾಶಮಾನ ಬಣ್ಣ – ಕ್ಯಾಲ್ಶಿಯಂ ಸಲ್ಫೈಡ್ ನಂತಹ, ರಾತ್ರಿಯಲ್ಲಿ ಪ್ರಕಾಶ ಸೂಸಬಲ್ಲ ರಾಸಾಯನಿಕ ಸಂಯುಕ್ತಗಳಿಂದ ಮಾಡಲ್ಪಟ್ಟ ಒಂದು ಬಣ್ಣ (ಉದ್ರೇಕಗೊಳಿಸುವ ಆಕರವನ್ನು ದೂರ ಮಾಡಿದ ಮೇಲೂ ಬೆಳಕು ಸೂಸುವಂತಹ, ಕ್ಯಾಲ್ಶಿಯಂ ಸಲ್ಫೈಡ್ ನಂತಹ ವಸ್ತುಗಳನ್ನು phosphorescent ಅಥವಾ ಬೆಳಕುಧಾರಕ ವಸ್ತುಗಳು ಎಂದು ಕರೆಯುತ್ತಾರೆ).
ಲ್ಯೂಮಿನಸ್ ಇಂಟೆನ್ಸಿಟಿ – ಪ್ರವಾಹ ತೀಕ್ಷ್ಣತೆ – ಸಾಮಾನ್ಯ ಅರ್ಥದಲ್ಲಿ ಅಥವಾ ಒಂದು ನಿರ್ದಿಷ್ಟ ದಿಕ್ಕಿನಲ್ಲಿ, ಒಂದು ಬೆಳಕಿನ ಆಕರದ ಬೆಳಕು ಸೂಸುವ ಸಾಮರ್ಥ್ಯ. ಇದನ್ನು ಕ್ಯಾಂಡೆಲ್ ಗಳಲ್ಲಿ ಅಳೆಯುತ್ತಾರೆ
ಲ್ಯೂಮಿನಸ್ ಫ್ಲಕ್ಸ್ – ಬೆಳಕಿನ ಪ್ರವಾಹಗತಿ – ಬೆಳಕು ಹರಿಯುವ ಗತಿಯನ್ನು ಅಳೆಯುವ ನೆಲೆ. ಇದನ್ನು ಲ್ಯೂಮೆನ್ ಗಳಲ್ಲಿ ಅಳೆಯುತ್ತಾರೆ. ಒಂದು ಪ್ರಮಾಣೀಕೃತ ಆಕರದಿಂದ ಹೊರಸೂಸಲ್ಪಟ್ಟ ಬೆಳಕಿನ ಆಧಾರದಿಂದ ಇದನ್ನು ಅಳೆಯುತ್ತಾರೆ.
ಲ್ಯೂಮಿನಾಸಿಟಿ – ದೀಪ್ತತೆ, ಕಾಂತಿ – ಒಂದು ನಿರ್ದಿಷ್ಟ ದಿಕ್ಲಿನಲ್ಲಿನ ಪ್ರಕಾಶದ ತೀಕ್ಷ್ಣತೆ, ಒಂದು ಬಿಂಬದ ದೃಗ್ಗೋಚರ ಪ್ರಕಾಶಮಾನತೆ, ಹಾಗೂ ಏಕಘಟಕ ಮೂಲಮಾನ ಸಮಯದಲ್ಲಿ ಹೊರಸೂಸಲ್ಪಟ್ಟ ಒಟ್ಟು ಶಕ್ತಿಯ ಲೆಕ್ಕದಲ್ಲಿ ನಿರೂಪಿತವಾದ ಒಂದು ನಕ್ಷತ್ರದ ಪ್ರಕಾಶಮಾನತೆ.
Like us!
Follow us!