Magnetic flux

ಮ್ಯಾಗ್ನೆಟಿಕ್ ಫ್ಲಕ್ಸ್ –  ಕಾಂತೀಯ ಬಲರೇಖೆಗಳು – ಒಂದು ಮೇಲ್ಮೈ ಯನ್ನು ಹಾದುಹೋಗುವ ಒಟ್ಟು ಪ್ರಚೋದನೆಯ ರೇಖೆಗಳ ಮೊತ್ತಕ್ಕೆ ಸಮ‌ ಇದು. ಇದರ ಮೂಲಮಾನ‌ Weber (ವೆಬರ್).

Magnetic field

ಮ್ಯಾಗ್ನೆಟಿಕ್ ಫೀಲ್ಡ್ – ಕಾಂತಕ್ಷೇತ್ರ – ಯಾವ ಪ್ರದೇಶದಲ್ಲಿ, ಒಂದು ಚಿಕ್ಕ ಅಯಸ್ಕಾಂತ ಅಥವಾ ವಿದ್ಯುತ್ತನ್ನು ಒಯ್ಯುತ್ತಿರುವ ಒಂದು ಮಂಡಲ( ತಂತಿಯ ಕುಣಿಕೆ) ಒಂದು ಬಲವನ್ನು ಅನುಭವಿಸುತ್ತದೋ ಆ ಪ್ರದೇಶ.

ಕನ್ನಡ ಗಾದೆ ಮಾತು – ಎಮ್ಮೆ ಮೇಲೆ ಮಳೆ ಬಿದ್ದಂಗೆ.

 ಎಮ್ಮೆಗೆ ನೀರೆಂದರೆ ಬಹಳ ಇಷ್ಟ ಎಂಬುದು‌ ಎಲ್ಲರಿಗೂ ಗೊತ್ತಿರುವ ವಿಷಯ. ಸದಾ ನೀರಿನಲ್ಲೇ ಇರಲು ಇಷ್ಟ ಪಡುವ ಪ್ರಾಣಿ ಅದು.‌ ಹೀಗಾಗಿ ಮಳೆ ಬಂತೆಂದರೆ ಮನುಷ್ಯರು ಅಥವಾ ಬೇರೆ ಪ್ರಾಣಿಗಳು ತಡಬಡಾಯಿಸಿ‌, ಮಳೆಯಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಸೂರನ್ನು ಹುಡುಕಿಕೊಂಡು  ಓಡುವಂತೆ ಎಮ್ಮೆ ಓಡುವುದಿಲ್ಲ. ತನ್ನ ಮೇಲೆ ಧಾರಾಕಾರ ಮಳೆ ಬೀಳುತ್ತಿದ್ದರೂ ತನಗೆ ಏನೂ ಆಗಿಯೇ ಇಲ್ಲ ಎಂಬಂತೆ ಆರಾಮಾಗಿ ನಿಂತಿರುತ್ತದೆ ಅಥವಾ ನಡೆಯುತ್ತಿರುತ್ತದೆ. ಅದರ ಮೈಯಲ್ಲಿ ಸಾಕಷ್ಟು ಬೆವರು  ಗ್ರಂಥಿಗಳಿಲ್ಲ‌, ತನ್ನ ಮೈಯನ್ನು ತಂಪಾಗಿ ಇಟ್ಟುಕೊಳ್ಳಲು ಅದು […]

ದಕ್ಷಿಣ ಕನ್ನಡದ ಒಂದು ಹೂಕಟ್ಟಿನ  ಹೆಸರು ‘ಚೂಡಿ’‌ – ಈ ಪದದ ಜಾದೂ ನೋಡಿ!

ಮಂಗಳೂರಿನ ನನ್ನ ಬಾಲ್ಯದ ಅನೇಕ ಸ್ಮರಣೀಯ ಸಂಗತಿಗಳಲ್ಲಿ ‘ಚೂಡಿ’ ಒಂದು. ಏನಿದು ಚೂಡಿ? ಹೇಳ್ತೇನೆ ನಿಮ್ಗೆ …. ಆಯ್ತಾ? ಕನ್ನಡ ನಾಡಿನ ಕರಾವಳಿಯ ಭಾಗಗಳಲ್ಲಿ ಗೌಡ ಸಾರಸ್ವತ ಬ್ರಾಹ್ಮಣರು ಎಂಬ ಕೊಂಕಣಿ ಮಾತಾಡುವ ಸಮುದಾಯ ನೆಲೆಸಿದೆ. ಮಂಗಳೂರಿನಲ್ಲಿ ಕೂಡ ಇರುವ ಈ ಜನರು ಕೊಂಕಣಿಯನ್ನು ಮನೆಯಲ್ಲೂ, ಕನ್ನಡ ಹಾಗೂ ತುಳು ಭಾಷೆಗಳನ್ನು ಹೊರ ಪ್ರಪಂಚದ ವ್ಯವಹಾರದಲ್ಲೂ ಬಳಸುತ್ತಾರೆ. ಈ ಮೂರು ಭಾಷೆಗಳಲ್ಲಿ, ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಲೀಲಾಜಾಲವಾಗಿ ಜಿಗಿಯುತ್ತಾ, ಸ್ಥಳೀಯ ತುಳು ಹಾಗೂ ಕನ್ನಡ ಭಾಷಿಗರೊಂದಿಗೆ […]

Magnetic equator

ಮ್ಯಾಗ್ನೆಟಿಕ್ ಈಕ್ವೇಟರ್ – ಕಾಂತೀಯ ಭೂಮಧ್ಯರೇಖೆ – ಭೂಮಿಯ ಸುತ್ತಲೂ ಇರುವ ಅನಿಯಮಿತ, ಕಲ್ಪಿತ ರೇಖೆ ಇದು. ಇಲ್ಲಿ‌ ಭೂಮಿಯ ಕಾಂತೀಯ ಕ್ಷೇತ್ರರೇಖೆಗಳು ಮೇಲ್ಮೈಗೆ, ಬಹು ನಿಖರವಾಗಿ ಸಮಾನಾಂತರವಾಗಿರುತ್ತವೆ. 

Magnetic elements

ಮ್ಯಾಗ್ನೆಟಿಕ್ ಎಲಿಮೆಂಟ್ಸ್ – ಕಾಂತೀಯ ಅಂಶಗಳು – ಕಾಂತೀಯ ಇಳಿಜಾರು, ಕಾಂತೀಯ ಇಳಿಜಾರು ಕೋನ ಮತ್ತು ಭೂಮಿಯ ಕಾಂತಕ್ಷೇತ್ರದ ಅಡ್ಡರೇಖೆಯ ಭಾಗಾಂಶ – ಇವು, ಭೂಮಿಯ ಕಾಂತಕ್ಷೇತ್ರವನ್ನು ಸಂಪೂರ್ಣವಾಗಿ ನಿಷ್ಕರ್ಷೆ ಮಾಡುತ್ತವೆ.

Magnetic domain

ಮ್ಯಾಗ್ನೆಟಿಕ್ ಡೊಮೇನ್ – ಕಾಂತೀಯ ಪ್ರಾಂತ್ಯ – ಪ್ರಬಲಕಾಂತ ವಸ್ತುಗಳಲ್ಲಿ 1- 0.1  ಮಿಮೀ ಅಗಲವಿರುವ ಅಯಸ್ಕಾಂತಗೊಂಡ ಪ್ರದೇಶಗಳಿರುತ್ತವೆ. ಇವನ್ನು ಕಾಂತೀಯ ಪ್ರಾಂತ್ಯಗಳು ಎನ್ನುತ್ತಾರೆ.

Magnetic disk

ಮ್ಯಾಗ್ನೆಟಿಕ್ ಡಿಸ್ಕ್ – ಕಾಂತೀಯ ಬಿಲ್ಲೆ ಅಥವಾ ಕಾಂತೀಯ ತಲೆಚಕ್ರ – ಗಣಕಯಂತ್ರದಲ್ಲಿ ಧ್ವನಿಮುದ್ರಿಸುವ ಮಾಧ್ಯಮವಾಗಿ ಬಳಸುವ, ಸಾಮಾನ್ಯವಾಗಿ 35.6 ಸೆಂ.ಮೀ. ವ್ಯಾಸವನ್ನು ಹೊಂದಿರುವ ಒಂದು ತೆಳ್ಳನೆಯ ಅಲ್ಯೂಮಿನಿಯಂ ಬಿಲ್ಲೆ. ಇದರ ಎರಡೂ ಮೇಲ್ಮೈಗಳಿಗೆ ಕಾಂತೀಯ ಕಬ್ಬಿಣದ ಆಕ್ಸೈಡನ್ನು ಲೇಪಿಸಿರುತ್ತಾರೆ.

Magnetic dipole

ಮ್ಯಾಗ್ನೆಟಿಕ್ ಡೈಪೋಲ್ – ಕಾಂತೀಯ ದ್ವಿಧ್ರುವ – ಪರಸ್ಪರ ತುಸು ದೂರವಿರುವ, ಯಾವಾಗಲೂ ಜೊತೆಯಲ್ಲೇ ಬರುವ ಅಯಸ್ಕಾಂತೀಯ ಉತ್ತರ ಹಾಗೂ ದಕ್ಷಿಣ ಧ್ರುವಗಳು‌.

ಕನ್ನಡ ಗಾದೆಮಾತು – ಗಂಗಾಳ ತೊಳೆಯಕ್ಕೆ ಮಂಗಳವಾರ ಯಾಕೆ ಬರಬೇಕು?

ಗಂಗಾಳ ಎಂದರೆ ತಟ್ಟೆ.‌ ಊಟ ಮಾಡಿದ ನಂತರ ಗಂಗಾಳ ಅಂದರೆ ತಟ್ಟೆ ತೊಳೆಯುವುದು ಸಾಮಾನ್ಯ ಅಲ್ಲವೆ? ಈ ಕೆಲಸ ಮಾಡಲು ಮೀನಮೇಷ ಎಣಿಸುವ ಅಗತ್ಯ ಇಲ್ಲ. ಇದನ್ನು ತಕ್ಷಣ ಮಾಡಿದರೆ ಮುಂದಿನ ಊಟಕ್ಕೆ ಸ್ವಚ್ಛ ತಟ್ಟೆ ಇರುತ್ತದೆ. ‌ತೊಳೆಯಲು ಸೋಮಾರಿತನ ಮಾಡಿದರೆ, ಆ  ದಿನ ಕಳೆಯುವಷ್ಟರಲ್ಲಿ ತೊಳೆಯದ ತಟ್ಟೆಗಳ ಸಂಖ್ಯೆ ತುಂಬ ಹೆಚ್ಚಾಗಿ ಅಡುಗೆಮನೆಯಲ್ಲಿ ಸಮಸ್ಯೆ ಉಂಟಾಗುತ್ತದೆ. ಇಲ್ಲಿ ತಟ್ಟೆ ತೊಳೆಯುವುದು ಎಂಬುದು ತಕ್ಷಣ ಮಾಡಿ‌ ಮುಗಿಸಬೇಕಾದ ಕೆಲಸಗಳಿಗೆ ಒಂದು ಸಂಕೇತವಾಗಿದೆ.  Kannada proverb – Gangala tholeyakke […]

Page 2 of 3

Kannada Sethu. All rights reserved.