ಕನ್ನಡ ತರಗತಿಯಲ್ಲಿ ಡಯಾನಳ ಇಂಗ್ಲಿಷ್ ಟಿಪ್ಪಣಿ

ತರಗತಿಯೆಂದ ಮೇಲೆ ಅಲ್ಲಿ ನಾನಾ ರೀತಿಯ, ನಾನಾ ಸ್ವಭಾವದ ವಿದ್ಯಾರ್ಥಿಗಳು ಇರುವುದು ಸಹಜ. ಕೆಲವು ವಿದ್ಯಾರ್ಥಿನಿಯರು ತಮ್ಮ ಕೆಲವು ವಿಶಿಷ್ಟ ಚರ್ಯೆ, ನಡವಳಿಕೆಗಳಿಂದ ಅಧ್ಯಾಪಕರ ಮನಸ್ಸಿನಲ್ಲಿ ಉಳಿದುಬಿಡುತ್ತಾರೆ. ನನ್ನ ಮನಸ್ಸಿನಲ್ಲಿ ಹೀಗೆ ಉಳಿದುಕೊಂಡ ಒಬ್ಬ ವಿದ್ಯಾರ್ಥಿನಿಯೆಂದರೆ ಡಯಾನಾ. ಈಕೆಯು ಎರಡನೆ ಬಿ.ಎಸ್ಸಿಗೆ ನಾನು ಕನ್ನಡ ಪಾಠ ಮಾಡುತ್ತಿರುವಾಗ ನನಗೆ ಪರಿಚಿತಳಾದವಳು.

Carrier wave

ಒಯ್ಯಕ ಅಲೆ – ಆಕಾಶವಾಣಿ(ರೇಡಿಯೋ) ಪ್ರಸಾರಕವು ಸೂಸುವ ಒಂದು ನಿರಂತರ ವಿದ್ಯುತ್ಕಾಂತೀಯ ವಿಕರಣವಿದು. ಇದಕ್ಕೆ ಸ್ಥಿರವಾದ ಅಲೆಯೆತ್ತರ ಮತ್ತು ಆವರ್ತನ ಗತಿಗಳಿರುತ್ತವೆ. 

Capture

ವಶ – ಕಣಗಳ ಒಂದು ವ್ಯವಸ್ಥೆಯು ತನ್ನದಾಗಿರದಿದ್ದ ಕಣವೊಂದನ್ನು ಹೊರಗಿನಿಂದ ಹೀರಿಕೊಳ್ಳುವ ಪ್ರಕ್ರಿಯೆಗಳಲ್ಲಿ ಯಾವುದಾದರೊಂದು ಪ್ರಕ್ರಿಯೆ.

Carat

ಕ್ಯಾರಟ್ – ಅ. ಚಿನ್ನದ ಶುದ್ಧತೆಯನ್ನು ಅಳೆಯುವ ಮೂಲಮಾನ. ಶುದ್ಧಚಿನ್ನವನ್ನು ೨೪ ಕ್ಯಾರಟ್‌ನದು   ಎನ್ನುತ್ತಾರೆ.

Carbon cycle

ಇಂಗಾಲ ಚಕ್ರ –ಪರಮಾಣು ಬೀಜಕೇಂದ್ರಗಳ ನಡುವೆ ನಡೆಯುವ ರಾಸಾಯನಿಕ ಕ್ರಿಯೆಗಳ ಒಂದು ಸರಣಿ. ಜಲಜನಕ ಬೀಜಕೇಂದ್ರಗಳು ಹೀಲಿಯಂ ಬೀಜಕೇಂದ್ರವಾಗಲು ಸಂಯೋಗಗೊಳ್ಳುವಾಗ ಇಂಗಾಲವು ವೇಗವರ್ಧಕವಾಗಿ ವರ್ತಿಸುವಂತಹ ಕ್ರಿಯಾ ಸರಣಿ ಇದು.

Carbon dating

ಇಂಗಾಲ ಕಾಲನಿರ್ಣಯ – ಜೀವಂತ ವಸ್ತುಗಳನ್ನು ಒಳಗೊಂಡ ಅದರಲ್ಲೂ ಭೂಮಿಯನ್ನು ಅಗೆಯುವುದರಿಂದ ದೊರೆಯುವ ಪಳೆಯುಳಿಕೆಗಳ ಕಾಲವನ್ನು ಕಂಡು ಹಿಡಿಯಲು ಬಳಸುವ ಒಂದು ವಿಧಾನ. ಜೀವಂತ ವಸ್ತುಗಳಲ್ಲಿರುವ ಇಂಗಾಲದ ಪರಮಾಣುವಿನ ವಿಕಿರಣ ಸೂಸುವ ಗುಣವನ್ನು ಆಧಾರವಾಗಿಟ್ಟುಕೊಂಡಂತಹ ವಿಧಾನ ಇದು.

Carbon microphone

ಇಂಗಾಲ ಧ್ವನಿವರ್ಧಕ – ಇಂಗಾಲದ ಹರಳುಗಳನ್ನು ಬಳಸಿಕೊಂಡು ತನ್ನ ಕೆಲಸ ಮಾಡುವಂತಹ ಒಂದು ಧ್ವನಿವರ್ಧಕ. 

ಕುಂಬಾರಂಗೆ ವರುಷ, ದೊಣ್ಣೆಗೆ ನಿಮಿಷ.

ಕನ್ನಡ ಭಾಷೆಯ ಒಂದು ಪ್ರಸಿದ್ಧ ಗಾದೆಮಾತಿದು. ಒಂದು ಮಡಕೆಯನ್ನು ಮಾಡಲು ಕುಂಬಾರ ಅನೇಕ ದಿನಗಳ ಕಾಲ ಕಷ್ಟ ಪಡಬೇಕು. ಸರಿಯಾದ ಮಣ್ಣು ಹುಡುಕಿ ತಂದು, ನೀರು ಹಾಕಿ, ಕಲಸಿ, ತುಳಿತುಳಿದು ಚೆನ್ನಾಗಿ ಹದ ಮಾಡಿ, ಆ ಮೇಲೆ ತನ್ನ ತಿಗರಿಯಲ್ಲಿ ಮಡಕೆಯ ರೂಪಕ್ಕೆ ತಂದು, ನಂತರ ಅದನ್ನು ಒಣಗಿಸಿ, ಸುಟ್ಟು, ಗಿರಾಕಿಗಳು ಬರುವ ತನಕ ಅದು ಒಡೆಯದಂತೆ ಕಾಪಾಡಿಕೊಂಡು .

`ತುಂತುರು’ ಮೂಲಕ ಕನ್ನಡ ಒದಲು ಕಲಿತ ರಶ್ಮಿ ಪುಟ್ಟಿ

ಓದುವ ಆಸಕ್ತಿ ಇರುವ ಮನೆಯಲ್ಲಿ ಹುಟ್ಟಿ ಬೆಳೆಯುವ ಮಕ್ಕಳಿಗೆ ಅವರಿಗೇ ಅರಿವಿಲ್ಲದಂತೆ ಪುಸ್ತಕಗಳು ಸಂಗಾತಿಗಳಾಗಿಬಿಡುತ್ತವೆ. ನಾನು ಇಂತಹದೊಂದು ಮನೆಯಲ್ಲಿ ಹುಟ್ಟಿದ್ದು ನನ್ನ ಅದೃಷ್ಟ ಅನ್ನಬೇಕು. ವೃತ್ತಿಯಿಂದ ನಗರ ಯೋಜನ ಇಲಾಖೆಯಲ್ಲಿ ಕಿರಿಯ ಯಂತ್ರಜ್ಞಾನಿ(ಇಂಜಿನಿಯರ್) ಆಗಿದ್ದ ನನ್ನ ತಂದೆಯವರು, ತಮ್ಮ ಸೋದರರ ಹಾಗೂ ಸೋದರಿಯ ಕಾರಣದಿಂದಾಗಿ, ರಾಮಕೃಷ್ಣಾಶ್ರಮದ ಗಾಢವಾದ ಪರಿಚಯ, ಸಂಪರ್ಕಗಳನ್ನು ಹೊಂದಿದ್ದರು.

Canal rays

ಕಾಲುವೆ ಕಿರಣಗಳು – ಋಣಧ್ರುವದಲ್ಲಿ ಚಿಕ್ಕ ಚಿಕ್ಕ ತೂತುಗಳನ್ನು ಮಾಡುವ ಮೂಲಕ, ವಿಸರ್ಜನ ಕೊಳವೆಯಿಂದ ಪಡೆದುಕೊಳ್ಳಲಾಗುವ ಧನ ಅಯಾನುಗಳ ಪ್ರವಾಹಗಳು.

Page 124 of 140

Kannada Sethu. All rights reserved.