Carnot’s Principle

ಕರ‍್ನಾಟ್‌ರ ಸಿದ್ಧಾಂತ – ಯಾವುದೇ ತಾಪಯಂತ್ರದ ಸಾಮರ್ಥ್ಯವು ಅದೇ ತಾಪಮಾನ ಶ್ರೇಣಿಯಲ್ಲಿ ಕೆಲಸ ಮಾಢುತ್ತಿರುವ, ಹಿಮ್ಮರಳಿಸಬಹುದಾದ ತಾಪಯಂತ್ರದ ಸಾಮರ್ಥ್ಯಕ್ಕಿಂತ ಹೆಚ್ಚಾಗಿರಲು ಸಾಧ್ಯ ಇಲ್ಲ.

Cascade 

 ಸಂಗ್ರಾಹಕ ಸರಣಿ – ಒಂದಕ್ಕೊಂದು ಜೋಡಿಸಲ್ಪಟ್ಟ ವಿದ್ಯುತ್ ಸಂಗ್ರಾಹಕಗಳ ಸರಣಿ.

Case hardening

ಮೇಲ್ಮೈಯ ಕಠಿಣಗೊಳಿಸುವಿಕೆ – ಉಪಕರಣಗಳಲ್ಲಿ ಮತ್ತು ಕೆಲವು ಯಂತ್ರಭಾಗಗಳಲ್ಲಿ ಬಳಸುವುದಕ್ಕಾಗಿ ಉಕ್ಕಿನ ಮೇಲ್ಮೈಯನ್ನು ಕಠಿಣಗೊಳಿಸುವುದು.

Cassegranian telescope

ಕನ್ನಡಿಯುತ ದೂರದರ್ಶಕ – ತನ್ನ ಕೆಲಸ ಮಾಡಲು ಕನ್ನಡಿಯೊಂದನ್ನು ಬಳಸಿಕೊಳ್ಳುವ ಒಂದು ರೀತಿಯ ಪ್ರತಿಫಲಿಸುವ ದೂರದರ್ಶಕ.

Cast iron

ಎರಕ ಹೊಯ್ದ ಕಬ್ಬಿಣ – ೧.೮-೪.೫% ಇಂಗಾಲವನ್ನು ಹೊಂದಿರುವ ಕಬ್ಬಿಣದ ಮಿಶ್ರಲೋಹಗಳ ಒಂದು ಗುಂಪು. ಇವನ್ನು ನಿರ್ದಿಷ್ಟ ಆಕಾರ ಬರುವಂತೆ ಅಚ್ಚಿನಲ್ಲಿ ಎರಕ ಹೊಯ್ಯಬಹುದಾಗಿದೆ. 

Cardinal points

ಪ್ರಧಾನ ಬಿಂದುಗಳು – ಒಂದು ದಪ್ಪ ಮಸೂರದ ಅಥವಾ ಸಮಾನ ಅಕ್ಷವುಳ್ಳ ಮಸೂರಗಳ ವ್ಯವಸ್ಥೆಯಲ್ಲಿನ ಆರು ಮುಖ್ಯ ಬಿಂದುಗಳು.

Carburettor

ಮಿಶ್ರಕ ಕೊಳವೆ – ಆಂತರಿಕ ದಹನವುಳ್ಳ ಕಲ್ಲೆಣ್ಣೆ(ಪೆಟ್ರೋಲ್)ಯ ಚಾಲಕ ಯಂತ್ರದಲ್ಲಿ ವಾಯು ಮತ್ತು ಕಲ್ಲೆಣ್ಣೆಯನ್ನು ಸ್ಫೋಟನಕ್ಕೆ ಮುಂಚೆ ಬೆರೆಸುವ ಉಪಕರಣ.

Carnot cycle

ಕರ‍್ನಾಟ್ ಚಕ್ರ – ಒಂದು ಪರಿಪೂರ್ಣವಾದ ತಾಪಯಂತ್ರದಲ್ಲಿ ಕಂಡುಬರುವ, ಒಂದು ಇನ್ನೊಂದನ್ನು ಹಿಂಬಾಲಿಸುವAತಹ ನಾಲ್ಕು ಭೌತಿಕ ಕ್ರಿಯೆಗಳ ಒಂದು ಚಕ್ರ.

Carrier

ಒಯ್ಯಕ – ಒಂದು ಅರೆವಾಹಕದಲ್ಲಿ ಎಲೆಕ್ಟಾçನುಗಳು ಅಥವಾ ರಂಧ್ರಗಳು ತಮ್ಮ ಚಲನೆಯಿಂದಾಗಿ ವಿದ್ಯುತ್ ಉತ್ಪತ್ತಿಯಾಗಲು ಕಾರಣವಾಗುತ್ತವೆ. ಇವುಗಳನ್ನು ಒಯ್ಯಕಗಳು ಎಂದು ಕರೆಯುತ್ತಾರೆ.

ಚೆಲ್ಲಿದ ಹಾಲಿಗೆ ಅತ್ತು ಪ್ರಯೋಜನವಿಲ್ಲ.

ಜೀವನದಲ್ಲಿ ಕೆಲವೊಮ್ಮೆ ಅವಘಡಗಳು, ಅಘಟಿತಗಳು ಘಟಿಸುತ್ತವೆ, ಕಷ್ಟ ನಷ್ಟಗಳು ಸಂಭವಿಸುತ್ತವೆ. ಆಗ ನಮಗೆ ಬೇಸರವಾಗುವುದು ಸಹಜ. ನಮ್ಮ ಮನಸ್ಸು ಆಗ ಮತ್ತೆ ಮತ್ತೆ ಆದ ನಷ್ಟದ ಬಗ್ಗೆ ಕೊರಗುತ್ತಾ, ಹಳಹಳಿಸುತ್ತಾ ಇರುತ್ತದೆ. ಆದರೆ ಆಗಿ ಹೋದದ್ದರ ಬಗ್ಗೆ ವಿಪರೀತ ಕೊರಗುವುದರಿಂದ ಪ್ರಯೋಜನವೇನೂ ಆಗುವುದಿಲ್ಲ. ಮತ್ತಷ್ಟು ಬೇಸರವಾಗುತ್ತದೆ ಅಷ್ಟೆ.

Page 123 of 140

Kannada Sethu. All rights reserved.