ಪ್ರಣತಿ ಮತ್ತು ಕರ್ವಾಲೋ

ಪ್ರಣತಿ ನನ್ನ ಇಬ್ಬರು ಮಕ್ಕಳಲ್ಲಿ ಚಿಕ್ಕವಳು. ಈಗ ಅವಳಿಗೆ ಹದಿನೆಂಟು ವರ್ಷ. ಎರಡು ವರ್ಷಗಳ ಹಿಂದೆ ಅಂದರೆ ಅವಳಿಗೆ ಹದಿನಾರು ವರ್ಷವಾಗಿದ್ದಾಗ ನಡೆದಿದ್ದ ಪ್ರಸಂಗವೊಂದನ್ನು ಇಲ್ಲಿ ಬರೆಯುತ್ತಿದ್ದೇನೆ.

Bipolar electrode 

ದ್ವಿಧ್ರುವ ವಿದ್ಯುದ್ವಾರ  ವಿದ್ಯುತ್ ರಾಸಾಯನಿಕ ಕೋಶವೊಂದರಲ್ಲಿ ವಿದ್ಯುತ್ ಹರಿಯುವ ಒಂದು ಲೋಹದ ಪಟ್ಟಿ. ಆದರೆ ಇದನ್ನು ಆ ಕೋಶದ ಧನವಿದ್ಯುದ್ವಾರಕ್ಕಾಗಲೀ ಋಣವಿದ್ಯುದ್ವಾರಕ್ಕಾಗಲೀ ಜೋಡಿಸಿರುವುದಿಲ್ಲ. ಏಕೆಂದರೆ ವಿದ್ಯುತ್ ಹರಿಯುವಾಗ ಈ ಪಟ್ಟಿಯ ಒಂದು ಮುಖವು ಸಹಕಾರೀ ಋಣವಿದ್ಯುದ್ವಾರವಾಗಿ ಕೆಲಸ ಮಾಡಿದರೆ ಇನ್ನೊಂದು ಮುಖವು ಧನವಿದ್ಯುದ್ವಾರವಾಗಿ ಕೆಲಸ ಮಾಡುತ್ತದೆ.

Bipolar transistor

ದ್ವಿಧ್ರುವ ಟ್ರ್ಯಾನ್ಸಿಸ್ಟರು _ ಎಲೆಕ್ಟ್ರಾನುಗಳು ಮತ್ತು ರಂಧ್ರಗಳು ತುಂಬ ಅವಶ್ಯಕವಾದ ಪಾತ್ರಗಳನ್ನು ನಿರ್ವಹಿಸುವ ಒಂದು ಟ್ರ್ಯಾನ್ಸಿಸ್ಟರು, ಉದಾಹರಣೆಗೆ ಒಂದು ಕೂಡುಸ್ಥಳ(ಜಂಕ್ಷನ್) ಟ್ರ್ಯಾನ್ಸಿಸ್ಟರು.

Biprism(Fresnel’s)

(ಪ್ರೆಸ್ನೆಲ್‌ರ) ಇಮ್ಮಡಿ ಪಟ್ಟಕ – ಬೆಳಕಿನ ಪ್ರವೇಶದ ಅಗತ್ಯವುಳ್ಳ ಪ್ರಯೋಗಗಳಲ್ಲಿ ಎರಡು ನಿಜಭಾಸ(ವರ್‍ಚುವಲ್) ಹಾಗೂ  ಸಮಂಜಸ(ಕೊಹೆರೆಂಟ್) ಆಕರಗಳನ್ನು ಉತ್ಪತ್ತಿ ಮಾಡುವಂತಹ ದೊಡ್ಡ ಕೋನವುಳ್ಳ ಒಂದು ಗಾಜಿನ ಪಟ್ಟಕ. ಪ್ರಾನ್ಸಿನ ಕಟ್ಟಡ ಯಂತ್ರಜ್ಞಾನಿಯಾಗಿದ್ದ ಆಗಸ್ಟಿನ್ ಜೀನ್ ಫ್ರೆಸ್ನೆಲ್‌ರು(ಕಾಲ : ೧೦-೦೫-೧೭೮೮ ರಿಂದ ೧೪-೦೭-೧೮೨೭) ಇದನ್ನು ಕಂಡುಹಿಡಿದರು.

Birefringence 

ಇಮ್ಮಡಿ ವಕ್ರೀಭವನ  ಕ್ಯಾಲ್ಸೈಟ್‌ನಂತಹ ಕೆಲವು ವಸ್ತುಗಳ ಹರಳುಗಳ ಮೂಲಕ ಬೆಳಕು ಹಾಯುವಾಗ ಪರಸ್ಪರ ಲಂಬವಾಗಿರುವ ಎರಡು ದಿಕ್ಕುಗಳಲ್ಲಿ ಸೀಳಿಕೊಳ್ಳುತ್ತದೆ. ಇವುಗಳಲ್ಲಿ ಒಂದನ್ನು ಸಾಮಾನ್ಯ ಕಿರಣ ಮತ್ತು ಇನ್ನೊಂದನ್ನು ಅಸಾಮಾನ್ಯ ಕಿರಣ ಎನ್ನುತ್ತಾರೆ. ಇದೇ ಇಮ್ಮಡಿ ವಕ್ರೀಭವನ.

Bistable(Flip plop) circuit

ದ್ವಿಸ್ಥಿರಸ್ಥಿತಿ(ಹೀಗೊಮ್ಮೆ ಹಾಗೊಮ್ಮೆ ಲಾಗ ಹೊಡೆವ) ವಿದ್ಯುನ್ಮಂಡಲ – ಇದು ಎರಡೆರಡು ಸ್ಥಿರಸ್ಥಿತಿಯುಳ್ಳ ವಿದ್ಯುನ್ಮಂಡಲ. ಸಾಮಾನ್ಯವಾಗಿ ಇದು ಒಮ್ಮೆ ಹೀಗೆ ಒಮ್ಮೆ ಹಾಗೆ ಲಾಗ ಹೊಡೆಯುವ ಬಹುಕಂಪಕವಾಗಿರುತ್ತದೆ. ಇದನ್ನು ಗಣಕಯಂತ್ರಗಳಲ್ಲಿ ೦ ಮತ್ತು ೧ (ಜೋಡಿ ಅಂಕಿಗಳು) ಗಳನ್ನು ಸಂಗ್ರಹಿಸಲು ಮತ್ತು ಎಣಿಸಲು ಬಳಸುತ್ತಾರೆ.

ಊರು ಹೋಗು ಅನ್ನುತ್ತೆ, ಕಾಡು ಬಾ ಅನ್ನುತ್ತೆ.

ಹಳ್ಳಿಗರ ಬಾಯಲ್ಲಿ ಆಗಾಗ ಕೇಳಿ ಬರುವ ಗಾದೆಮಾತಿದು. ವಯಸ್ಸಾದವರು, ತಮಗೆ ಸಾವು ಸನ್ನಿಹಿತವಾಗಿದೆ ಎಂಬ ಭಾವನೆ ಬಂದಾಗ ಬಳಸುವ ಮಾತು. ಹಿಂದಿನ ಕಾಲದಲ್ಲಿ ನಮ್ಮ ದೇಶದಲ್ಲಿ ಹಸಿರು ಕಾಡುಗಳು ವಿಪುಲವಾಗಿದ್ದಾಗ ಯಾರಾದರೂ ಸತ್ತರೆ ಅವರ ದೇಹವನ್ನು ಊರಿನ ಪಕ್ಕದಲ್ಲಿದ್ದ ಕಾಡಿನಲ್ಲಿ ಹೂಳುತ್ತಿದ್ದರು ಅಥವಾ ಸುಡುತ್ತಿದ್ದರು.

ವರ್ಷ್‌ತೊಡ್ಕು, ಹೊಸ್ತೊಡ್ಕು  ವರ್ಷದ ತೊಡಗು(ತೊಡಕು)

ಯುಗಾದಿ ಹಬ್ಬದ ಮಾರನೆಯ ದಿನ ಎಲ್ಲ ಕಡೆ ರಜೆಯ ಮನಸ್ಥಿತಿ ಇರುವುದನ್ನು ನಾವು ಗಮನಿಸಿದ್ದೇವೆ ಅಲ್ಲವೇ? “ಇವತ್ತು ವರ್ಷ್‌ತೊಡ್ಕಲ್ವಾ, ಖಾರದೂಟ ಇರುತ್ತೆ. ನಿಮ್ಮನೇಲಿ ಏನು ವಿಶೇಷ? ॒॒ ॒“ಇಲ್ಲಪ್ಪಾ ನಾವು ಖಾರದೂಟದವರಲ್ಲ, ಹೊಸ್ತೊಡಕಿಗೆ ನಮ್ಮನೇಲಿ ಇವತ್ತು ಪಾಯ್ಸ ಮಾಡ್ತಾರೆ ಇಂತಹ ಮಾತುಗಳು ಕಿವಿ ಮೇಲೆ ಅಂದು ಬೀಳುತ್ತವೆ.

Binoculars

ಜೋಡಿಕೊಳವೆ ದೂರದರ್ಶಕ – ಎರಡು ಕಣ್ಣುಗಳಿಗೂ ಒಂದೊಂದು ನೋಡುಕೊಳವೆಯನ್ನು ನೀಡಿ, ದೂರದಲ್ಲಿರುವ ವಸ್ತುಗಳು ದೊಡ್ಡದಾಗಿ ಮತ್ತು ಸ್ಪಷ್ಟವಾಗಿ ಕಾಣುವಂತೆ ಮಾಡುವ ದೃಷ್ಟಿವಿಜ್ಞಾನದ ಒಂದು ಉಪಕರಣ.

Binocular vision

ದ್ವಿನಯನ ದೃಷ್ಟಿ  ಎರಡೂ ಕಣ್ಣುಗಳನ್ನು ಬಳಸಿಕೊಳ್ಳುವ ದೃಷ್ಟಿ. ನಮ್ಮ ಮೆದುಳು ಎರಡು ಬೇರೆ ಬೇರೆ ಬಿಂಬಗಳಿಂದ ಮೂರು ಆಯಾಮಗಳ, ಏಕೀಭವಿಸಿದ ನೋಟವನ್ನು ನಿರ್ಮಿಸುತ್ತದೆ.

Page 129 of 140

Kannada Sethu. All rights reserved.