ಆಲ್ಫಾ ಕಣಗಳು – ಎರಡು ಪ್ರೋಟಾನುಗಳು ಮತ್ತು ಎರಡು ನ್ಯೂಟ್ರಾನುಗಳು ಒಟ್ಟಿಗೆ ಬೆಸೆದುಕೊಂಡು ಉಂಟಾಗಿರುವ ಕಣ. ಹೀಲಿಯಂ ಅಣುವಿನ ಬೀಜಕೇಂದ್ರಕ್ಕೆ ಸಮನಾದದ್ದು.
ಆಕಾರರಹಿತ ಘನವಸ್ತು – ಹರಳುಗಟ್ಟದಿರುವಂತಹ ಘನವಸ್ತು. ಇದಕ್ಕೆ ನಿಶ್ಚಿತ ಆಕಾರ ಇರುವುದಿಲ್ಲ.
ಪ್ರತಿ ಕಣ – ಒಂದು ಕಣವು ಹೊಂದಿರುವಷ್ಟೇ ದ್ರವ್ಯರಾಶಿ ಮತ್ತು ಗಿರಕಿ(ಸ್ಪಿನ್)ಗಳನ್ನು ಹೊಂದಿದ್ದರೂ ಅದಕ್ಕೆ ವಿರುದ್ಧವಾದ ವಿದ್ಯುದಂಶವನ್ನು ಹೊಂದಿರುವ ಕಣ.
ವೇಗೋತ್ಕರ್ಷ – ದಿಶಾಯುತ ವೇಗ ಅಥವಾ ದಿಕ್ಕುಳ್ಳ ವೇಗ(ವೆಲಾಸಿಟಿ)ದಲ್ಲಿ ಉಂಟಾಗುವ ಹೆಚ್ಚಳ.
ನಿರ್ಜೀವಿಮೂಲ ಜೀವೋತ್ಪತ್ತಿ – ಜೀವವಿಲ್ಲದ ಕಣಗಳಿಂದ ಜೀವೋತ್ಪತ್ತಿ ಆಗಿರಬಹುದಾದ ಸಾಧ್ಯತೆಯ ಅಧ್ಯಯನ.
ಅಲೆಯೆತ್ತರ – ಒಂದು ಅಲೆಯ ಎತ್ತರ. ಇದನ್ನು ಆ ಅಲೆಯ ಮಧ್ಯಬಿಂದುವಿನಿಂದ ಅಳೆಯಲಾಗುತ್ತದೆ.
ಪರ್ಯಾಯ ಹರಿವಿನ ವಿದ್ಯುತ್ – ನಿಯತಕಾಲಿಕವಾಗಿ ವಿರುದ್ಧ ದಿಕ್ಕುಗಳಿಗೆ ಮಗುಚುತ್ತಾ ಹರಿಯುವ ವಿದ್ಯುತ್ ಪ್ರವಾಹ.
Like us!
Follow us!