ಹೀಗೇ ಮೊನ್ನೆ ನಿಘಂಟು ನೋಡ್ತಾ ಇದ್ದಾಗ ‘ಚರಣಾಯುಧ’ ಅನ್ನೋ ಪದ ಕಣ್ಣಿಗೆ ಬಿತ್ತು. ‘ಇದೇನಪ್ಪಾ … ಚರಣಾಯುಧ!?’ ಅಂತ ಕುತೂಹಲ ಹುಟ್ಟಿ ಅರ್ಥ ನೋಡಿದ್ರೆ ‘ಹುಂಜ’ ಅಂತ ಅದರ ಅರ್ಥ ಕಣ್ರೀ!! ಕಾಲುಗಳನ್ನೇ ಆಯುಧವಾಗಿ ಉಳ್ಳದ್ದು ಅಂತ ಅದರ ವಿವರಣೆ! ಹುಂಜಕ್ಕೆ ಕಾಲಲ್ಲಿ ಚೂಪಾದ ಉಗುರುಗಳಿದ್ದು, ಅವುಗಳನ್ನು ಅದು ತನ್ನ ವೈರಿಯ ಮೇಲೆ ಆಕ್ರಮಣ ಮಾಡಕ್ಕೆ ಅಥವಾ ಭೂಮಿಯನ್ನು ಕೆರಿಯಲಿಕ್ಕೆ ಬಳಸುತ್ತೆ ಅಲ್ವಾ? ಅದಕ್ಕೇ ಹೀಗಂತಾರೆ ಅನ್ಸುತ್ತೆ. ದಕ್ಷಿಣ ಕನ್ನಡದ ಕಡೆಯ ಕೋಳಿ ಅಂಕ (ಹುಂಜಗಳ ಕಾಳಗ) ನೆನಪಾಗುತ್ತೆ ಅಲ್ವಾ? ‘ಕೋಳಿ ಅಂಕ’ ಅಂತಾರೆ ಅದಕ್ಕೆ. ಅಂದಹಾಗೆ ಆ ಹುಂಜಗಳ ಹೊಟ್ಟೆಗೆ ಪುಟ್ಟ ಕತ್ತಿ ಕಟ್ಟಿರುತ್ತಾರೆ. ಹಾಗಾದ್ರೆ ಈ ಅಂಕದ ಕೋಳಿಯನ್ನು ಜಠರಾಯುಧ ಅನ್ನಬಹುದೆ?

ಈಗೊಂದು ತುಂಟ ಪ್ರಶ್ನೆ ಮನಸ್ಸಿಗೆ ಬಂತು. ರಸನೆ ಅಂದರೆ ನಾಲಿಗೆ ಅಲ್ವೆ? ಯಾರು ತುಂಬ ಬಯ್ತಾರೋ, ಯಾವಾಗಲೂ ಯಾರನ್ನಾದ್ರೂ ಬಯ್ತಾನೇ ಇರ್ತಾರೋ ಅವರನ್ನು ರಸನಾಯುಧ ಅಂತ  ಕರೆಯಬಹುದಾ?