ಕನ್ನಡ ಕನ್ನಡಿ

ವಾರಕ್ಕೆ ಐದು ಪದಗಳಂತೆ, ತಾಂತ್ರಿಕ/ವೈಜ್ಞಾನಿಕ ಕ್ಷೇತ್ರದ ಪದಗಳಿಗೆ ಕನ್ನಡ ಸಂವಾದಿ ಪದಗಳ ಪರಿಚಯ ಮಾಡುವ ಅಂಕಣವಿದು. ಕನ್ನಡದಲ್ಲಿ ಹೊಸ ಜ್ಞಾನ ನಿರ್ಮಾಣ ಆಗಬೇಕೆಂದರೆ ಅದರ ಪದಕೋಶವು ವಿಸ್ತಾರಗೊಳ್ಳಬೇಕು. ಈ ದಿಸೆಯಲಿನ್ಲ ಕಿರುಪ್ರಯತ್ನವೇ ಈ ಅಂಕಣ.

LCR circuit 

ಎಲ್ ಸಿ ಆರ್ ಸರ್ಕ್ಯೂಟ್ – ಎಲ್ ಸಿ ಆರ್ ವಿದ್ಯುನ್ಮಂಡಲ – ಇದೊಂದು ಸರಳವಾದ, ಪಾಳಿಯುತ ವಿದ್ಯುನ್ಮಂಡಲ. ಇದರಲ್ಲಿ L – ವಿದ್ಯುತ್ ಪ್ರೇರಕತೆ, C – ವಿದ್ಯುತ್ ಸಾಮರ್ಥ್ಯ ಹಾಗೂ R – ಪ್ರತಿರೋಧ – ಈ‌ ಮೂರೂ ಒಂದೇ ಸರಣಿಯಲ್ಲಿ ಇರುತ್ತವೆ.

Lead – acid accumulator

ಲೆಡ್ ಆಸಿಡ್ ಅಕ್ಯುಮುಲೇಟರ್ –   ಸೀಸ – ಆಮ್ಲ ಸಂಗ್ರಾಹಕ ಕೋಶ – ವಾಹನಗಳ ವಿದ್ಯುತ್ ಸಂಗ್ರಾಹಕ ಕೋಶಗಳಲ್ಲಿ ಬಳಸುವಂತಹ ಒಂದು ರೀತಿಯ ವಿದ್ಯುತ್ ಸಂಗ್ರಾಹಕ ಕೋಶ ಇದು. ಇದರಲ್ಲಿ ಸೀಸದ ಹಾಳೆಗಳನ್ನು ವಿದ್ಯುದ್ವಾರಗಳಾಗಿ ಮತ್ತು  ದುರ್ಬಲ ಗಂಧಕಾಮ್ಲವನ್ನು ವಿದ್ಯುತ್ ವಿಭಜಕ ಕೋಶವಾಗಿ  ಬಳಸುತ್ತಾರೆ.

Leakage

ಲೀಕೇಜ್ – ಸೋರಿಕೆ – ಉತ್ತಮ ನಿರೋಧಕತೆಯ ಕೊರತೆಯಿಂದಾಗಿ ವಿದ್ಯುತ್ ನಷ್ಟವಾಗುವುದು.

Leakage current

ಲೀಕೇಜ್ ಕರೆಂಟ್ – ಸೋರಿಕೆ ವಿದ್ಯುತ್ – ವಿದ್ಯುತ್ ಸಾಮರ್ಥ್ಯವು ಒಂದು ವಿದ್ಯುತ್ ನಿರೋಧಕದ ಸಂಪರ್ಕಕ್ಕೆ ಬಂದಾಗ, ತುಲನೆಯಲ್ಲಿ ಕಡಿಮೆ ಪ್ರಮಾಣದ ಹಾಗೂ‌ ಇಂಥದ್ದೇ ದಾರಿ ಎಂದಿಲ್ಲದೆ ಹರಿಯುವ ಒಂದಿಷ್ಟು ವಿದ್ಯುತ್ತು ಇದು.

Leakage flux

ಲೀಕೇಜ್ ಫ್ಲಕ್ಸ್ – ಸೋರಿಕೆ ಶಕ್ತಿಪ್ರವಾಹ – ಕಾಂತೀಯ ವಿದ್ಯುನ್ಮಂಡಲವು ಇರುವಂತಹ ವಿದ್ಯುತ್ ಯಂತ್ರಗಳಲ್ಲಿ ಮತ್ತು ಪರಿವರ್ತಕಗಳಲ್ಲಿ‌ ನಷ್ಡವಾಗುವಂತಹ ವಿದ್ಯುತ್ ಪ್ರವಾಹ ಇದು‌.

Leclanche Cell

ಲೆಕ್ಲಾಂಚೆ ಸೆಲ್ – ಲೆಕ್ಲಾಂಚೆ ಕೋಶ – ಒಂದು ಮೂಲರೂಪೀ ವಿದ್ಯುತ್ ಕೋಶ. ಫ್ರಾನ್ಸ್ ನ ಯಂತ್ರಜ್ಞಾನಿಯಾದ ಜಾರ್ಜ್ ಲೆಕ್ಲಾಂಚೆಯು 1866 ನೇ ವರ್ಷದಲ್ಲಿ ನಿರ್ಮಿಸಿದ್ದರಿಂದ ಇದಕ್ಕೆ ಅವನ ಹೆಸರನ್ನೇ ಇಡಲಾಗಿದೆ‌. ಇದರಲ್ಲಿ ಒದ್ದೆ ಮತ್ತು ಒಣ ಎಂದು ಎರಡು ರೂಪಗಳಿರುತ್ತವೆ‌.

Lee’s disc

ಲೀಸ್ ಡಿಸ್ಕ್ – ಲೀಯವರ ಬಿಲ್ಲೆ – ಕಡಿಮೆ ವಾಹಕತೆಯುಳ್ಳ ವಸ್ತುಗಳ ಉಷ್ಣವಾಹಕ ಸಾಮರ್ಥ್ಯವನ್ನು ಅಳೆಯಲು ಬಳಸುವ ಉಪಕರಣ. 

Lenard rays

ಲೆನಾರ್ಡ್ ರೇಸ್ – ಲೇನಾರ್ಡ್ ಕಿರಣಗಳು – ಲೆನಾರ್ಡ್ ಕೊಳವೆಯ ಆಚೆಗೆ ಹೋಗಿರುವ ಋಣ ವಿದ್ಯುದ್ವಾರ ಕಿರಣಗಳು‌ ( ಫಿಲಿಪ್ ಎಡ್ಯುವರ್ಡ್ ಆಂಟನ್ ವಾನ್ ಲೆನಾರ್ಡ್ – ಋಣ ವಿದ್ಯುದ್ವಾರವನ್ನು ಕುರಿತು ಕೆಲಸ ಮಾಡಿದ್ದಕ್ಕಾಗಿ 1905 ರಲ್ಲಿ ನೊಬೆಲ್ ‌ಪ್ರಶಸ್ತಿ ಪಡೆದ ಜರ್ಮನಿ‌ ದೇಶದ ಭೌತವಿಜ್ಞಾನಿ : ಕಾಲ – 07-06-1862 ರಿಂದ 20-05-1947). 

Lenard tube

ಲೆನಾರ್ಡ್ ಟ್ಯೂಬ್ – ಲೆನಾರ್ಡ್ ಕೊಳವೆ – ಋಣ ವಿದ್ಯುದ್ವಾರಕ್ಕೆ ಇದಿರಾಗಿ ಋಣ ವಿದ್ಯುದ್ವಾರದ ಕಿರಣಗಳು ದಾಟಿ ಹೋಗಲು ಅನುಕೂಲವಾಗುವಂತೆ ಕಿಟಕಿಯೊಂದನ್ನು ಹೊಂದಿರುವ ವಿಸರ್ಜನಾ ಕೊಳವೆ.

Lens

ಲೆನ್ಸ್ – ಮಸೂರ, ಬಾಗುಮೈ( ಯುಳ್ಳ) ಗಾಜು – ಬೆಳಕನ್ನು ಕೇಂದ್ರೀಕರಿಸುವ ಅಥವಾ ವಿಕೇಂದ್ರೀಕರಿಸುವ ಒಂದು ದೃಶ್ಯ ವಿಜ್ಞಾನೀಯ ಉಪಕರಣ ಅಥವಾ ಉಪಕರಣ ಭಾಗ.

Page 88 of 92

Kannada Sethu. All rights reserved.