ಲೈನ್ ಸ್ಪೆಕ್ಟ್ರಮ್ – ರೇಖಾತ್ಮಕ ವರ್ಣಪಟಲ – ಪ್ರತ್ಯೇಕ ಏಕರೇಖೆಗಳಿಂದ ಕೂಡಿರುವಂತಹ ಹೊರಸೂಸುವಿಕೆಯ ಅಥವಾ ಹೀರುವಿಕೆಯ ವರ್ಣಪಟಲ. ಇದರಲ್ಲಿ ಪ್ರತಿಯೊಂದು ಗೆರೆಯೂ ಒಂದು ಸ್ಪಷ್ಟವಾಗಿ ನಿರೂಪಿತವಾದ ತರಂಗಾಂತರಕ್ಕೆ ಸಂಬಂಧಿಸಿರುತ್ತದೆ.
ಕನ್ನಡ ಕನ್ನಡಿ
ವಾರಕ್ಕೆ ಐದು ಪದಗಳಂತೆ, ತಾಂತ್ರಿಕ/ವೈಜ್ಞಾನಿಕ ಕ್ಷೇತ್ರದ ಪದಗಳಿಗೆ ಕನ್ನಡ ಸಂವಾದಿ ಪದಗಳ ಪರಿಚಯ ಮಾಡುವ ಅಂಕಣವಿದು. ಕನ್ನಡದಲ್ಲಿ ಹೊಸ ಜ್ಞಾನ ನಿರ್ಮಾಣ ಆಗಬೇಕೆಂದರೆ ಅದರ ಪದಕೋಶವು ವಿಸ್ತಾರಗೊಳ್ಳಬೇಕು. ಈ ದಿಸೆಯಲಿನ್ಲ ಕಿರುಪ್ರಯತ್ನವೇ ಈ ಅಂಕಣ.
ಲೀನಿಯರ್ ಆಂಪ್ಲಿಫೈಯರ್ – ರೇಖಾತ್ಮಕ ಬಲವರ್ಧಕ – ತನ್ನೊಳಗೆ, ತತ್ಕ್ಷಣದ ಧನವಿದ್ಯುದ್ವಾರದ ವಿದ್ಯುತ್ ಗೂ ಹಾಗೂ ನೀಡಲಾಗುತ್ತಿರುವ ವಿದ್ಯುದ್ಬಲಕ್ಕೂ ನೇರ ರೇಖಾತ್ಮಕ ಸಂಬಂಧವುಳ್ಳ ಬಲವರ್ಧಕ.
ಲೀನಿಯರ್ ಡಿಟೆಕ್ಟರ್ – ರೇಖಾತ್ಮಕ ಪತ್ತೆಯಂತ್ರ – ಹೊರಬರುವ ವಿದ್ಯುದ್ಬಲಕ್ಕೂ ಒಳಹೋಗುವ ವಿದ್ಯುದ್ಬಲಕ್ಕೂ ತನ್ನ ಉಪಯೋಗಕರ ಶ್ರೇಣಿಗೆ ಸಂಬಂಧಪಟ್ಟಂತೆ ನೇರ ಅನುಪಾತವುಳ್ಲ ಪತ್ತೆಯಂತ್ರ.
ಲೀನಿಯರ್ ಡಿಸ್ಟಾರ್ಷನ್ – ರೇಖಾತ್ಮಕ ವಿರೂಪಣೆ – ವಿದ್ಯುದಲೆಯ ಎತ್ತರಕ್ಕೆ ಯಾವುದೇ ಸಂಬಂಧವಿಲ್ಲದಂತಹ ಯಾವುದೇ ರೂಪದ ಕೊಂಕು ಅಥವಾ ವಿರೂಪಣೆ.
ಲೀನಿಯರ್ ಎಕ್ಸ್ ಪ್ಯಾನ್ಶನ್ – ರೇಖಾತ್ಮಕ ವಿಸ್ತರಣೆ – ಒಂದು ವಸ್ತುವನ್ನು ಕಾಯಿಸಿದಾಗ ಅದರ ಉದ್ದದಲ್ಲಿ ಆಗುವ ಬದಲಾವಣೆ.
ಲೀನಿಯರ್ ಮಾಡ್ಯುಲೇಷನ್ – ರೇಖಾತ್ಮಕ ಅಲೆಪರಿವರ್ತನೆ – ಒಯ್ಯಕ ಅಲೆಯ ಪರಿವರ್ತಿತ ಗುಣಲಕ್ಷಣವು ಶ್ರವ್ಯ ಆವರ್ತನಗತಿಯ ಒಂದು ಶ್ರೇಣಿಯ ಮೌಲ್ಯಕ್ಕೆ ಸಂಬಂಧಿಸಿದಂತೆ ಸಮಾನುಪಾತದಲ್ಲಿದ್ದರೆ, ಅದನ್ನು ರೇಖಾತ್ಮಕ ಅಲೆ ಪರಿವರ್ತನೆ ಎನ್ನುತ್ತಾರೆ.
ಲೀನಿಯರ್ ಮೋಟಾರ್ – ರೇಖಾತ್ಮಕ ಯಂತ್ರಚಾಲಕ (ರೇಖಾತ್ಮಕ ಮೋಟಾರು) – ಒಂದು ರೀತಿಯ ವಿದ್ಯುತ್ ಪ್ರೇರಕ ಯಂತ್ರಚಾಲಕ. ಇದರಲ್ಲಿನ ಚಲಿಸದ ಭಾಗ(ಸ್ಟೇಟರ್) ಮತ್ತು ಚಲಿಸಿವ ಭಾಗ ( ರೋಟರ್) ಗಳು ಗುಂಡುಕಂಬದಂತಿರದೆ ನೇರವಾಗಿರುತ್ತವೆ ಹಾಗೂ ಸಮ ಅಕ್ಷವನ್ನು ಹೊಂದಿರುವ ಬದಲು ಸಮಾನಾಂತರವಾಗಿರುತ್ತವೆ.
ಲಿಕ್ವಿಫೈಡ್ ಪೆಟ್ರೋಲಿಯಂ ಗ್ಯಾಸ್ – ದ್ರವೀಕೃತ ಪೆಟ್ರೋಲಿಯಂ ಅನಿಲ – ವಿವಿಧ ಪೆಟ್ರೋಲಿಯಂ ಅನಿಲಗಳು, ಮುಖ್ಯವಾಗಿ ಪ್ರೋಪೇನ್ ಮತ್ತು ಬ್ಯೂಟೇನ್ ಗಳನ್ನು ಒತ್ತಡ ಹಾಕಿ ದ್ರವಸ್ಥಿತಿಯಲ್ಲಿ ಇಟ್ಟಿರುವಂಥದ್ದು. ಇದನ್ನು ಚಾಲಕಯಂತ್ರದ ಇಂಧನವಾಗಿ ಬಳಸುತ್ತಾರೆ. ‘ಸಿಲಿಂಡರ್ ಹೆಡ್’ ಎಂಬ ಯಂತ್ರಭಾಗದಲ್ಲಿ ಈ ವಸ್ತುವು ತುಂಬ ಕಡಿಮೆ ಗಷ್ಟು ಅಥವಾ ಶೇಷ ಉಳಿಸುತ್ತದೆ ಎಂಬುದು ಇದಕ್ಕಿರುವ ಉತ್ತಮ ಗುಣವಾಗಿದೆ.
ಲಿಕ್ವಿಡ್ – ದ್ರವ – ವಸ್ತುವಿನ ಹರಳುರೂಪೀ ಸ್ಥಿತಿ ಮತ್ತು ಅನಿಲಸ್ಥಿತಿಗಳ ನಡುವೆ ಇರುವಂತಹ (ವಸ್ತು)ಸ್ಥಿತಿ ಇದು. ಈ ಸ್ಥಿತಿಯ ವಸ್ತುವಿಗೆ ತಾನಿರುವ ಪಾತ್ರೆಯ ಆಕಾರವನ್ನು ಪಡೆದುಕೊಳ್ಳುವ ಗುಣವಿದೆ.
ಲಿಕ್ವಿಡ್ ಏರ್ – ದ್ರವರೂಪೀ ನೆಲ – ದ್ರವಾನಿಲ – ಮಾಸಿದ ನೀಲಿ ಬಣ್ಣವುಳ್ಳ ಒಂದು ದ್ರವ. ಇದರಲ್ಲಿ ಮುಖ್ಯವಾಗಿ ದ್ರವರೂಪೀ ಆಮ್ಲಜನಕ (ಕುದಿಬಿಂದು : -183 ಡಿಗ್ರಿ ಸೆಂಟಿಗ್ರೇಡ್), ದ್ರವರೂಪೀ ಜಲಜನಕ ( ಕುದಿಬಿಂದು : -196 ಡಿಗ್ರಿ ಸೆಂಟಿಗ್ರೇಡ್) ಇರುತ್ತವೆ.
Like us!
Follow us!