Camera   

ಛಾಯಾಚಿತ್ರಗ್ರಾಹಕ – ಛಾಯಾಚಿತ್ರಗಳನ್ನು ತೆಗೆಯಲು ಅಥವಾ ಚಲನಚಿತ್ರ ಬಿಂಬಗಳನ್ನು ಪ್ರಕಟಪಡಿಸಲು ಬಳಸುವ ಒಂದು ದೃಶ್ಯೋಪಕರಣ

Canada balsam

ಕೆನಡಾ ಅಂಟು ಅಥವಾ ಗೋಂದು(ಗುಗ್ಗಳ) – ಗಾಜಿನಂತೆ ಕಾಣುವ ಹಳದಿ ಬಣ್ಣದ ಒಂದು ಅಂಟು ಪದಾರ್ಥ. ಸೂಕ್ಷದರ್ಶಕದಲ್ಲಿ ನೋಡಲಾಗುವ ವಸ್ತುಗಳನ್ನು ನೋಡುತಟ್ಟೆಗೆ ಏರಿಸುವಾಗ ಇದನ್ನು ಬಳಸುತ್ತಾರೆ. ಉತ್ತರ ಅಮೆರಿಕಾದ ಕಾಡುಗಳಲ್ಲಿ ಸಿಗುವ ಮರದಿಂದ ಇದನ್ನು ಪಡೆಯಲಾಗುವುದರಿಂದ ಈ ವಸ್ತುವಿಗೆ ಈ ಹೆಸರು ಬಂದಿದೆ.

Breeder reactor 

ಉತ್ಪತ್ತಿಸುವ ಸ್ಥಾವರ – ತಾನು ಇಂಧನವನ್ನು ಸೇವಿಸುತ್ತಿರುವ ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ಅಧಿಕಾಧಿಕ ಬೀಜಕೇಂದ್ರಗಳನ್ನು ಉತ್ಪಾದಿಸುವ ಅಣುಸ್ಥಾವರ

Bypass

ಪಕ್ಕದ ದಾರಿ – ಭೌತಶಾಸ್ತçದಲ್ಲಿ ಈ ಪದವನ್ನು ಸಾಮಾನ್ಯವಾಗಿ ವಿದ್ಯುತ್ತಿನ ಸಂದರ್ಭದಲ್ಲಿ ಬಳಸುತ್ತಾರೆ. ಇಲ್ಲಿ ಈ ಪದವು ಒಂದು ವಿದ್ಯುನ್ಮಂಡಲದ ಅಂಗ ಅಥವಾ ಅಂಗಗಳನ್ನು ಜೋಡಿಸುವ ಇನ್ನೊಂದು ದಾರಿಯನ್ನು ಸೂಚಿಸುತ್ತದೆ. 

Buoyancy

ತೇಲುವ ಗುಣ – ಒಂದು ವಸ್ತುವಿಗೆ ಇರುವಂತಹ ತೇಲುವ ಗುಣಲಕ್ಷಣ

Bumping

ಸಿಡಿಸಿಡಿ ಕುದಿತ – ವಾತಾವರಣದ ಒತ್ತಡಕ್ಕಿಂತ ಹೆಚ್ಚಿನ ಒತ್ತಡದಲ್ಲಿ ಆವಿಯ ಗುಳ್ಳೆಗಳು ರೂಪುಗೊಳ್ಳುವ ರೀತಿಯಲ್ಲಿ ಒಂದು ದ್ರವವನ್ನು ಅತಿಯಾಗಿ, ವಿಪರೀತ ಜುಲುಮೆಯಿಂದ ಕುದಿಸುವುದು.

Bulk modulus

ಒಟ್ಟಾರೆ ಒತ್ತಡಗುಣಕ – ಒಟ್ಟಾರೆಯಾಗಿ ಇಡೀ ಒಂದು ವಸ್ತುವಿನ ಮೇಲೆ ಪ್ರಯೋಗಿಸಿದ ಬಲಕ್ಕೂ, ಆ ವಸ್ತುವಿನಲ್ಲಿ ಉಂಟಾಗುವ ಒತ್ತಡಕ್ಕೂ ಇರುವ ಅನುಪಾತ.  

ಹೆಣ್ಣಿಲ್ಲದ ಮನೆ ಹಣ್ಣಿಲ್ಲದ ಮರ

ಕನ್ನಡ ಗಾದೆಮಾತುಗಳ ರಾಶಿಯನ್ನು ಗಮನಿಸಿದಾಗ ಕಂಡುಬರುವ ಒಂದು ಅಪರೂಪದಸ್ತ್ರೀಪರ ಗಾದೆ ಮಾತಿದು. ಪುರುಷಪ್ರಧಾನ ವ್ಯವಸ್ಥೆಯಿರುವ ಸಮಾಜಗಳಲ್ಲಿನ ಭಾಷೆ ಹಾಗೂ ಗಾದೆಮಾತುಗಳು ಕೂಡ ಸ್ತ್ರೀವಿರೋಧಿಯಾಗಿರುವುದನ್ನು ಗಮನಿಸುವಾಗ ಈ ಗಾದೆಮಾತು ಹೆಣ್ಣಿನ ಬಗ್ಗೆ ಒಳ್ಳೆಯ ಭಾವನೆ ಪ್ರಕಟಿಸಿರುವುದು ಸಮಾಧಾನದ ವಿಷಯವಾಗಿದೆ.

“ನಾನು ಸತ್ತಿದ್ದೆ ಅಂದ್ಕೊಂಡು ಅಂಗಳದಲ್ಲಿ ಚಾಪೆ ಮೇಲೆ ಮಲಗಿಸಿದ್ರಂತೆ ಮ್ಯಾಮ್”

ನಾವು ಕನ್ನಡ ಅಧ್ಯಾಪಕರು ತರಗತಿಗಳಲ್ಲಿ ಕೆಲವೊಮ್ಮೆ ಅನೂಹ್ಯವಾದ ಭಾವುಕ ಸನ್ನಿವೇಶಗಳಿಗೆ ಸಾಕ್ಷಿಯಾಗುತ್ತೇವೆ. ಈಗ ನಾನು ವಿವರಿಸಲಿರುವುದು ಅಂತಹ ಒಂದು ಸನ್ನಿವೇಶ. ಅಂತಾರಾಷ್ಟ್ರೀಯ ಮಹಿಳಾ ದಿನವಾದ ಮಾರ್ಚ್ ೮ರ ಸಂದರ್ಭದಲ್ಲಿ ಇದನ್ನು ಹಂಚಿಕೊಳ್ಳುವುದು ಸೂಕ್ತ ಅನ್ನಿಸಿತು.

Brownian motion

ಬ್ರೌನಿಯನ್ ಚಲನೆ – ಅತ್ಯಂತ ಕಿರಿದಾದ ವ್ಯಾಸ ಹೊಂದಿರುವ ಚಿಕ್ಕ ಚಿಕ್ಕ ಕಣಗಳು, ಉದಾಹರಣೆಗೆ ಪರಾಗರೇಣುಗಳು ದ್ರವವೊಂದರಲ್ಲಿ ತೇಲಾಡಿಕೊಂಡಿದ್ದಾಗಿನ ಸ್ಥಿತಿಯಲ್ಲಿ, ನಿರಂತರವಾಗಿ ಮತ್ತು ಅವ್ಯವಸ್ಥಿತವಾಗಿ ಚಲಿಸುವದು. ಇಂತಹ ಚಲನೆಯನ್ನು ಹೊಗೆಯಲ್ಲಿನ ಕಣಗಳಲ್ಲಿಯೂ ಗಮನಿಸಬಹುದು.

Page 126 of 140

Kannada Sethu. All rights reserved.