Booster

ವಿದ್ಯುತ್ ಬಲವರ್ಧಕ – (ಅ). ಒಂದು ವಿದ್ಯುತ್‍ಮಂಡಲದಲ್ಲಿ ಹರಿಯುತ್ತಿರುವ ವಿದ್ಯುತ ಚಾಲಕ ಶಕ್ತಿಯನ್ನು ಹೆಚ್ಚಿಸಲು ಅಥವಾ ಕಡಿಮೆ ಮಾಡಲು, ಸರಣಿ ಜೋಡಣೆಯಲ್ಲಿ ಇರಿಸಿರುವಂತಹ ವಿದ್ಯುತ್ ಉತ್ಪಾದಕ ಯಂತ್ರ. (ಆ). ಪ್ರಸಾರ ಕಾರ್ಯದಲ್ಲಿ ಮುಖ್ಯಕೇಂದ್ರದಿಂದ ಪುನರಾವರ್ತನ ಕೇಂದ್ರವು ತರಂಗಾಂತರವನ್ನು ಸ್ವೀಕರಿಸಿ ಅದರ ಬಲವರ್ಧಿಸಿ, ಮರುಪ್ರಸಾರ ಮಾಡುತ್ತದೆ, ಕೆಲವೊಮ್ಮೆ ಆವರ್ತನವನ್ನು ಬದಲಿಸಿ ಮರುಪ್ರಸಾರಿಸುತ್ತದೆ. ಇಲ್ಲಿ ಬಲವರ್ಧಕವನ್ನು ಉಪಯೋಗಿಸುತ್ತಾರೆ.

Boson

ಬೋಸಾನು – ಆಂತರಿಕ ಗಿರಕಿ(ಸ್ಪಿನ್)ಯುಳ್ಳ ಯಾವುದೇ ಮೂಲಭೂತ ಕಣ.

Boundary layer 

ಸರಹದ್ದು ಪದರ – ಒಂದು ಘನವಸ್ತುವಿನ ಸರಹದ್ದಿನಲ್ಲಿ ಉಂಟಾಗುವ ಒಂದು ದ್ರವದ ಪದರ. ಇಲ್ಲಿ ಆ ದ್ರವದ ಸ್ನಿಗ್ಧ(ಅಂಟಂಟು) ಗುಣವು ಗಮನಾರ್ಹವಾಗಿರುತ್ತದೆ.

Bourdon gauge

ತಿರುಗಣಿ ಮಾಪಕ – ಒತ್ತಡವನ್ನು ಅಳೆಯಲು ಕೈಗಾರಿಕೆಗಳಲ್ಲಿ ಸಾಮಾನ್ಯವಾಗಿ ಬಳಸುವ ಒಂದು ಮಾಪಕ. ಇದರಲ್ಲಿ ತಿರುಚಿರುವಂತಹ ಹಿತ್ತಾಳೆ-ರಂಜಕ-ಕಂಚು ಲೋಹದ ತೆಳುಪದರದ ಕೊಳವೆ ಇರುತ್ತದೆ.

Breakdown

ಕುಸಿತ – ಒಂದು ನಿರೋಧಕದ ಮೂಲಕ ಇದ್ದಕ್ಕಿದ್ದಂತೆ ವಿದ್ಯುತ್ ಹರಿಯುವ ಕ್ರಿಯೆ. ಇದರಿಂದಾಗಿ ಕ್ಷಣಾರ್ಧದಲ್ಲಿ ಆ ನಿರೋಧಕವು ವಿದ್ಯುತ್ ವಾಹಕವಾಗಿ ಬದಲಾಗಿಬಿಡುತ್ತದೆ. 

ಮಾಡು, ಇಲ್ಲ, ಸುಮ್ಮನೆ ನೋಡು

ಯಾವುದೇ ಒಂದು ಕೆಲಸ ಆಗಬೇಕೆಂದರೆ ಒಂದೋ ನಾವು ಮಾಡಬೇಕು, ಇಲ್ಲವೇ ಮಾಡುತ್ತಿರುವವರ ಬಗ್ಗೆ ಟೀಕೆ ಮಾಡದೆ ಸುಮ್ಮನೆ ನೋಡಬೇಕು. ನಮ್ಮಲ್ಲಿ ಕೆಲವರು ತಾವೂ ಮಾಡುವುದಿಲ್ಲ, ಕೆಲಸ ಮಾಡುತ್ತಿರುವವರನ್ನೂ ಮಾಡಲು ಬಿಡುವುದಿಲ್ಲ. ತಮ್ಮ ಕಟು ಟೀಕೆಗಳಿಂದ ಅವರ ಮನಸ್ಸನ್ನು ನೋಯಿಸಿ ಕೆಲಸ ಮಾಡುವಂತಹ ಹುಮ್ಮಸ್ಸಿಗೆ ಭಂಗ ತರುತ್ತಾರೆ.

ಕನ್ನಡ ರತ್ನಕೋಶ, ಪಾರ್ವತಿ ಟೀಚರ್ ಮತ್ತು ಪಾನಿಪುರಿ

ನಮ್ಮ ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿರುವ ಕನ್ನಡ ರತ್ನಕೋಶವು ಕನ್ನಡ ಭಾಷೆ ಮತ್ತು ಸಾಹಿತ್ಯಗಳನ್ನು ಕಲಿಯುವ ವಿದ್ಯಾರ್ಥಿಗಳಿಗೆ ಮತ್ತು ಕಲಿಸುವ ಅಧ್ಯಾಪಕರಿಗೆ ತುಂಬ ಉಪಯುಕ್ತವಾದ ಕೃತಿ. ಅದರಲ್ಲಿ ನೂರಾರು ಕನ್ನಡ ಪದಗಳಿಗೆ ಅಕಾರಾದಿಯಲ್ಲಿ ಅರ್ಥಗಳಿರುವುದು ಮಾತ್ರವಲ್ಲ, ಕನ್ನಡ ನುಡಿಗಟ್ಟುಗಳು, ಸಂಖ್ಯಾಯುತ ವಿಷಯಪದಗಳಿಗೆ ವಿಸ್ತರಣೆಗಳು(ಉದಹರಣೆಗೆ ಪಂಚಲೋಹ, ಸಪ್ತರ್ಷಿ, ನವರತ್ನ ಇತ್ಯಾದಿ)

Blue shift

ನೀಲಿ ಸರಿತ – ನಮ್ಮ ಹತ್ತಿರ ಬರುತ್ತಿರುವ ಆಕಾಶಕಾಯದ ವರ್ಣಪಟಲವು ಚಿಕ್ಕ ತರಂಗಾಂತರಗಳ ಕಡೆಗೆ ಸರಿಯುವುದು.

Boiling

 ಕುದಿಯುವಿಕೆ – ನಿರ್ದಿಷ್ಟ ಉಷ್ಣತೆಯೊಂದರಲ್ಲಿ (ಕುದಿಬಿಂದು)        ದ್ರವವೊಂದು ಅನಿಲವಾಗಿ ಬದಲಾಗುವ ಕ್ರಿಯೆ. ಯಾವಾಗ ಸಂತುಷ್ಟ ಆವಿಯ ಒತ್ತಡವು ಹೊರಗಿನ ಒತ್ತಡಕ್ಕೆ ಸಮನಾಗುತ್ತದೋ ಆಗ ಕುದಿಯುವಿಕೆ ಉಂಟಾಗುತ್ತದೆ.

Boiling water reactor

ಕುದಿನೀರಿನ ಸ್ಥಾವರ – ನೀರನ್ನು ತಂಪುಕಾರಕವಾಗಿ ಮತ್ತು ಮಿತಕಾರಕ(ನ್ಯೂಟ್ರಾನುಗಳ ವೇಗವನ್ನು ಕಡಿಮೆ ಮಾಡುವಂಥದ್ದು)ವಾಗಿ ಬಳಸುವಂತಹ ಅಣುಸ್ಥಾವರ.

Page 127 of 140

Kannada Sethu. All rights reserved.