ಕನ್ನಡದ ಒಂದು ಸ್ವಾರಸ್ಯಕರ ಗಾದೆ ಮಾತು ಇದು. ಸುಮ್ಮನೆ ಕುಳಿತಿದ್ದವರು ಹಾಗೆಯೇ ಸುಮ್ಮನಿರದೆ, ತಮ್ಮ ಪಾಡಿಗೆ ತಾವು ಹೋಗುತ್ತಿದ್ದ ಇರುವೆಗಳನ್ನು ಮುಟ್ಟಿ ಮೈಮೇಲೆ ಬಿಟ್ಟುಕೊಂಡರೆ ಅವು ಕಚ್ಚದೆ ಇರುತ್ತವೆಯೇ? ಖಂಡಿತ ಕಚ್ಚುತ್ತವೆ. ಇದೇ ರೀತಿಯಲ್ಲಿ ಮನುಷ್ಯರು ಅನಗತ್ಯವಾಗಿ ಜಗಳ ಆಡಿದಾಗ, ಗೊತ್ತಿದ್ದೂ ಗೊತ್ತಿದ್ದೂ ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಂಡಾಗ ಈ ಮಾತನ್ನು ಬಳಸುತ್ತಾರೆ.
(ಬೀಜಕೆಂದ್ರದ) ಒಟ್ಟುಗೂಡಿಸುವ ಶಕ್ತಿ – ಕಣಗಳ ಒಂದು ಸಮೂಹದಿಂದ ಕಣವೊಂದನ್ನು ಪ್ರತ್ಯೇಕಿಸಲು ಬೇಕಾಗುವ ಶಕ್ತಿ. ಒಂದು (ಪರಮಾಣುವಿನ) ಬೀಜಕೇಂದ್ರದ ದ್ರವ್ಯರಾಶಿಗೂ ಅದರೊಳಗಿನ ಕಣಗಳ ದ್ರವ್ಯರಾಶಿಯ ಮೊತ್ತಕ್ಕೂ ಇರುವ ವ್ಯತ್ಯಾಸ.
ಬೆಕ್ವೆರಲ್ ಕಿರಣಗಳು – ಯುರೇನಿಯಂ ಸಂಯುಕ್ತಗಳು ತಾವಾಗಿ ತಾವೇ ಸಹಜವಾಗಿ ಹೊರಸೂಸುವ ಆಲ್ಫಾ, ಬೀಟಾ ಮತ್ತು ಗಾಮಾ ಕಿರಣಗಳು.
ಬಗ್ಗಿಸುವ ತಿರುಗುಬಲ – ವಸ್ತುವೊಂದನ್ನು ಬಗ್ಗುವಂತೆ ಮಾಡುವ ಬಲ ಅಥವಾ ಒಂದು ತೊಲೆಯ ಒಂದು ಬದಿಯ ಮೇಲೆ ವರ್ತಿಸುವ ಎಲ್ಲ ಬಲಗಳ ಮೊತ್ತ.
ಬೀಟಾ ಕ್ಷಯ – ಪರಮಾಣು ಬೀಜಕೇಂದ್ರವು ಎಲೆಕ್ಟ್ರಾನಿನಂತಹ ಕಣವೊಂದನ್ನು ಹೊರಚೆಲ್ಲುತ್ತಾ ಕ್ಷಯಗೊಳ್ಳುವ ಒಂದು ರೀತಿಯ ವಿಕಿರಣ ಪ್ರಕ್ರಿಯೆ.
ವಿದ್ಯುತ್ ಪಕ್ಪಪಾತ ವಿದ್ಯುನ್ಮಾನ ಉಪಕರಣವೊಂದರಲ್ಲಿ ವಿದ್ಯುತ್ ಉಪಕರಣವೊಂದಕ್ಕೆ ಇಚ್ಛಿಸಿದ ಗುಣಲಕ್ಷಣ ಪಡೆಯಲು ನೀಡಿದ ವಿದ್ಯುತ್ ಸಾಮರ್ಥ್ಯ.
ಪಟ್ಟಿ ವಿಸ್ತಾರ ಒಂದು ಉಪಕರಣದ ಆಕರ್ಷಣ ತಂತಿಯು ಸರಾಗವಾಗಿ ಸ್ವೀಕರಿಸಬಲ್ಲ ಅಥವಾ ನಿರ್ವಹಿಸಬಲ್ಲ ಆವರ್ತನಗತಿ(ಫ್ರೀಕ್ವೆನ್ಸಿ)ಗಳು ಅಥವಾ ತರಂಗಾಂತರ(ವೇವ್‌ಲೆಂಗ್ತ್)ಗಳ ಒಂದು ಕಟ್ಟು.
Like us!
Follow us!